ಬಿಇಎಲ್ ನಲ್ಲಿ ಗುತ್ತಿಗೆ ಆಧಾರಿತ ಇಂಜಿನಿಯರ್ಸ್ ಹುದ್ದೆಗಳಿವೆ
ಬೆಂಗಳೂರು, ಅಕ್ಟೋಬರ್ 24: ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನಲ್ಲಿ 2016-17ನೇ ಸಾಲಿನ ನೇಮಕಾತಿ ಮುಂದುವರೆಸಿದೆ.
64 ತಾಂತ್ರಿಕ ಹುದ್ದೆಗಳ ನೇಮಕಾತಿ ನಂತರ ಈಗ 90 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 04, 2016 ಕೊನೆ ದಿನಾಂಕವಾಗಿದೆ. ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್(ಇವಿಎಂ) ಟೆಸ್ಟಿಂಗ್ ನಲ್ಲಿ ಇಂಜಿನಿಯರ್ ಗಳನ್ನು ನಿಯೋಜಿಸಲಾಗುತ್ತದೆ.
ಹುದ್ದೆ ಹೆಸರು: ಇಂಜಿನಿಯರಿಂಗ್ ಸಹಾಯಕ, ಟೆಕ್ನಿಷಿಯನ್
ವಿದ್ಯಾರ್ಹತೆ: ಬಿ ಇ/ಬಿಟೆಕ್
ಕೊನೆ ದಿನಾಂಕ : ನವೆಂಬರ್ 04, 2016
ಒಟ್ಟು ಹುದ್ದೆಗಳು : 90
ವಯೋಮಿತಿ: 25 ವರ್ಷ 1 ನವೆಂಬರ್ 2016ರಂತೆ

ಸಂಬಳ ನಿರೀಕ್ಷೆ: 18,000/- ಪ್ರತಿ ತಿಂಗಳು
ಇಂಜಿನಿಯರಿಂಗ್: ಬಿಇ/ ಬಿಟೆಕ್, ಸಿವಿಲ್ ಇಂಜಿನಿಯರಿಂಗ್/ ಕಂಪ್ಯೂಟರ್ ಸೈನ್ ಇಂಜಿನಿಯರಿಂಗ್/ ಮೆಕ್ಯಾನಿಕಲ್ ಇಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್/ ಇ ಅಂಡ್ ಸಿ/ ಇ ಅಂಡ್ ಟಿಸಿ/ ಟೆಲಿಕಮ್ಯೂನಿಕೇಷನ್ ಪದವಿ.
ಸಂದರ್ಶನ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ.
ಅರ್ಜಿ ಸಲ್ಲಿಸುವುದು ಹೇಗೆ?: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಅಧಿಕೃತ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ ಪಿಡಿಎಫ್ ಡೌನ್ ಲೋಡ್ ಮಾಡಿ ನೋಡಿ
To Apply online and For Notification Click Here
(ಒನ್ಇಂಡಿಯಾ ಸುದ್ದಿ)
Download











Click it and Unblock the Notifications