ಬೆಂಗಳೂರಿನಲ್ಲಿ ಕೆಲಸ ಖಾಲಿ ಇದೆ; ಮಾ.5ರೊಳಗೆ ಅರ್ಜಿ ಹಾಕಿ
ಬೆಂಗಳೂರು, ಫೆಬ್ರವರಿ 24; ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಲು 5/3/2022 ಕೊನೆಯ ದಿನವಾಗಿದೆ.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಂಜೆ 5.30ರೊಳಗೆ ತಲುಪುವಂತೆ ಸಲ್ಲಿಸಬೇಕಿದೆ.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಅರ್ಜಿಗಳನ್ನು bengaluruurban.nic.in ವೆಬ್ ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಂಡು ನಿಗದಿತ ನಮೂನೆಯಲ್ಲಿ ಭರ್ತಿಮಾಡಿ ಸಲ್ಲಿಸಬೇಕಿದೆ. ಹುದ್ದೆಗಳ ವಿವರ ಹೀಗಿದೆ.

ಜಿಲ್ಲಾ ಐಇಸಿ ಸಂಯೋಜಕರು 1 ಹುದ್ದೆ. ವಯೋಮಿತಿ 21-40 ವರ್ಷಗಳು. ಮಾಸಿಕ ವೇತನ 30 ಸಾವಿರ ರೂ.ಗಳು. ತಾಲೂಕು ಐಇಸಿ ಸಂಯೋಜಕರು 1. 21 ರಿಂದ 40 ವರ್ಷಗಳು. ವೇತನ 24,000 ರೂ.ಗಳು.
ತಾಲೂಕು ಎಂ.ಐ.ಎಸ್ ಸಂಯೋಜಕರು 1 ಹುದ್ದೆ. ವಯೋಮಿತಿ 21 ರಿಂದ 40 ವರ್ಷಗಳು. ವೇತನ 24,000 ರೂ.ಗಳು. ತಾಂತ್ರಿಕ ಸಹಾಯಕರು 3 ಹುದ್ದೆಗಳು. ವಯೋಮಿತಿ 21 ರಿಂದ 40 ವರ್ಷಗಳು. ವೇತನ 24,000 ರೂ.ಗಳು, 22,000 ರೂ.ಗಳು.
ತಾಂತ್ರಿಕ ಸಹಾಯಕರು (ಅರಣ್ಯ) 1 ಹುದ್ದೆ. ವಯೋಮಿತಿ 21 ರಿಂದ 40 ವರ್ಷಗಳು. ವೇತನ 24,000 ರೂ.ಗಳು. ತಾಂತ್ರಿಕ ಸಹಾಯಕರು (ತೋಟಗಾರಿಕೆ) 1 ಹುದ್ದೆ. 21 ರಿಂದ 40 ವರ್ಷಗಳು. ವೇತನ 24,000 ರೂ.ಗಳು.
ಅರ್ಜಿ ಸಲ್ಲಿಕೆ ಮಾಡಲು ವಿಳಾಸ; ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ. ಬನಶಂಕರಿ ದೇವಾಸ್ಥಾನದ ಹತ್ತಿರ, ಎಸ್. ಕರಿಯಪ್ಪ ರಸ್ತೆ, ಬನಶಂಕರಿ, ಬೆಂಗಳೂರು 560070. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ 080-26716169.
ಕೌಶಲ್ಯ ತರಬೇತಿಗೆ ಹೆಸರು ನೋಂದಾಯಿಸಿ; ದಾವಣಗೆರೆ ಜಿಲ್ಲೆಯಲ್ಲಿ ಸ್ಕಿಲ್ ಹಬ್ ಇನಿಶಿಯೇಟ್ ಫಾರ್ ಓಓಎಸ್‍ಸಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಹಾಗೂ ಭಾರತ ಸರ್ಕಾರದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‍ಎಸ್‍ಡಿಸಿ) ಹಾಗೂ ಎನ್‍ಎಸ್‍ಕ್ಯೂಎಫ್ ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಹಾಗೂ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ದಾವಣಗೆರೆ ಇವರ ಸಹಯೋಗದೊಂದಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ.
ವಿದ್ಯಾಭ್ಯಾಸವನ್ನು ನಿಲ್ಲಿಸಿರುವ 15 ರಿಂದ 45ರ ವಯೋಮಿತಿಯೊಳಗಿರುವವರಿಗೆ ಕೌಶಲ್ಯ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ಆಸಕ್ತರು ಹೆಸರು ನೋಂದಾಯಿಸಬಹುದಾಗಿದೆ. ತರಬೇತಿ ಪಡೆಯಲಿಚ್ಛಿಸುವ ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿಕೊಳ್ಳುವ ಶಾಲಾ ಕಾಲೇಜು ಹಾಗೂ ವಲಯಗಳ ವಿವರ ಹೀಗಿದೆ.
ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜು ದಾವಣಗೆರೆ ಇಲ್ಲಿಗೆ ಐಟಿ ಹಾಗೂ ಬ್ಯೂಟಿ ಅಂಡ್ ವೆಲ್‍ನೆಸ್ ಸೆಕ್ಟರ್ ಮಂಜೂರಾಗಿರುತ್ತದೆ. ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು, ದಾವಣಗೆರೆ ಇಲ್ಲಿಗೆ ಐಟಿ ಹಾಗೂ ಆಟೊಮೊಬೈಲ್ ಸೆಕ್ಟರ್ ಮಂಜೂರಾಗಿರುತ್ತದೆ.
ಅಭ್ಯರ್ಥಿಗಳು ಮೊಬೈಲ್ ಫೋನ್ ಕರೆಯ ಮೂಲಕ ಅಥವಾ ಖುದ್ದಾಗಿ ಕಚೇರಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ, ದಾವಣಗೆರೆ ಇವರನ್ನು ಸಂಪರ್ಕಿಸಬಹುದಾಗಿದೆ.
ಮೊಬೈಲ್ ಸಂಖ್ಯೆ 8971749636, ಡಿ.ಡಿ.ಪಿ.ಐ ಕಚೇರಿ ದಾವಣಗೆರೆ 7892509376, ಮೋತಿವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು, ದಾವಣಗೆರೆ 9480115378, ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜು, ದಾವಣಗೆರೆ 7259661666.












Click it and Unblock the Notifications