ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಕರೆದ ಬಳ್ಳಾರಿ ಜಿಲ್ಲಾ ಪಂಚಾಯಿತಿ
ಬಳ್ಳಾರಿ, ಆಗಸ್ಟ್ 26; ಜಿಲ್ಲಾ ಪಂಚಾಯಿತಿ ಬಳ್ಳಾರಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕೋಶ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು 11 ಸೆಪ್ಟೆಂಬರ್ ಕೊನೆಯ ದಿನವಾಗಿದೆ.
ತಾಲೂಕು ಸಂಯೋಜಕರು (TMIS) ಕಂಪ್ಲಿ ತಾಲೂಕು 1 ಹುದ್ದೆ. ಅಭ್ಯರ್ಥಿಗಳಿಗೆ ವಯೋಮಿತಿ 21 ರಿಂದ 40 ವರ್ಷಗಳು. ಮಾಸಿಕ ಸಂಭಾವನೆ ರೂ. 24,000 ಹಾಗೂ ಪ್ರಯಾಣ ಭತ್ಯೆ 2 ಸಾವಿರ ರೂ.ಗಳು.
ತಾಂತ್ರಿಕ ಸಹಾಯಕರು (ಸಿವಿಲ್) 4 ಹುದ್ದೆ. ವಯೋಮಿತಿ 21 ರಿಂದ 40 ವರ್ಷಗಳು. ಮಾಸಿಕ ಸಂಭಾವನೆ 24 ಸಾವಿರ ರೂ.ಗಳು. (ಡಿಪ್ಲೊಮಾ ಅಭ್ಯರ್ಥಿಗಳಿಗೆ ರೂ. 22 ಸಾವಿರ ರೂ.) ಹಾಗೂ ಪ್ರಯಾಣ ಭತ್ಯೆ 2 ಸಾವಿರ ರೂ.ಗಳು.

ತಾಂತ್ರಿಕ ಸಹಾಯಕರು (ತೋಟಗಾರಿಕಾ) 6 ಹುದ್ದೆ. ವಯೋಮಿತಿ 21 ರಿಂದ 40 ವರ್ಷ ನಿಗದಿ ಮಾಡಲಾಗಿದೆ. ತಾಂತ್ರಿಕ ಸಹಾಯಕರು (ಕೃಷಿ, ಅರಣ್ಯ, ತೋಟಗಾರಿಕೆ) ಹುದ್ದೆಗಳಿಗೆ ಮಾಸಿಕ ಸಂಭಾವನೆ 24 ಸಾವಿರ ರೂ.ಗಳು. ಪ್ರಯಾಣ ಭತ್ಯೆ 2 ಸಾವಿರ.
ತಾಂತ್ರಿಕ ಸಹಾಯಕರು (ಅರಣ್ಯ) 2 ಹುದ್ದೆ. ಅರ್ಜಿ ಸಲ್ಲಿಸುವವರಿಗೆ 21 ರಿಂದ 40 ವರ್ಷಗಳ ವಯೋಮಿತಿ.
ತಾಂತ್ರಿಕ ಸಹಾಯಕರು (ಕೃಷಿ) 2 ಹುದ್ದೆ. ಅಭ್ಯರ್ಥಿಗಳಿಗೆ 21 ರಿಂದ 40 ವರ್ಷದ ವಯೋಮಿತಿ ಇದೆ.
ಆಡಳಿತಾತ್ಮಕ ಸಹಾಯಕರು (ತಾಲೂಕು ಪಂಚಾಯಿತಿ) 5 ಹುದ್ದೆಗಳು. ವಯೋಮಿತಿ 21 ರಿಂದ 40 ವರ್ಷಗಳು.
ಗಣಕಯಂತ್ರ ನಿರ್ವಾಹಕರು ತಾಲೂಕು ಪಂಚಾಯಿತಿ ಕಂಪ್ಲಿ & ಕುರುಗೋಡು. 2 ಹುದ್ದೆಗಳಿವೆ, ವಯೋಮಿತಿ 21 ರಿಂದ 40 ವರ್ಷಗಳು.
ಆಡಳಿತಾತ್ಮಕ ಸಹಾಯಕರು ಮತ್ತು ಗಣಕಯಂತ್ರ ನಿರ್ವಾಹಕರು (ತಾ. ಪಂ) ಹುದ್ದೆಗೆ 15,008 ಸಾವಿರ ರೂ.ಗಳು ಅಥವ ಕಾರ್ಮಿಕ ಇಲಾಖೆಯು ಡಿಇಒ ಹುದ್ದೆಗೆ ನಿಗದಿಪಡಿಸಿದ ಕನಿಷ್ಠ ಮಾಸಿಕ ಸಂಭಾವನೆ.
ಆಯ್ಕೆ ವಿಧಾನ; ಅರ್ಜಿ ಸಲ್ಲಿಕೆ ಮಾಡಿದ ಅಭ್ಯರ್ಥಿಗಳ ಮೆರಿಟ್ ಪಟ್ಟಿ ಸಿದ್ದಪಡಿಸಿ ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಸೂಚನೆಗಳು
* ಆಯ್ಕೆಯಾದ ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಮಾನವ ಸಂಪನ್ಮೂಲ ಸಂಸ್ಥೆಯ ಮೂಲಕ ಸೇವೆಗೆ ಪಡೆಯಲಾಗುತ್ತದೆ.
* ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅರ್ಜಿ ನಮೂನೆಯಲ್ಲಿ ನಮೂದಿಸಿರುವ ದಾಖಲೆಗಳಾದ ವಿದ್ಯಾರ್ಹತೆ/ ಸೇವಾನುಭವಕ್ಕೆ ಸಂಬಂಧಪಟ್ಟ ಎಲ್ಲಾ ಮೂಲ ಪ್ರಮಾಣ ಪತ್ರ/ ದಾಖಲೆಗಳನ್ನು ಪರಿಶೀಲನಾ ಸಮಯದಲ್ಲಿ ಕಡ್ಡಾಯವಾಗಿ ಹಾಜರುಪಡಿಸುವುದು ತಪ್ಪಿದಲ್ಲಿ ಅರ್ಜಿ ತಿರಸ್ಕರಿಸಲಾಗುತ್ತದೆ.
* ದಾಖಲಾತಿ ಪರಿಶೀಲನೆಯಲ್ಲಿ ಅರ್ಹಗೊಂಡ ಅಭ್ಯರ್ಥಿಗಳನ್ನು ವಿದ್ಯಾರ್ಹತೆ ಹೊಂದಿದ ಅಂಕಗಳು ಹಾಗೂ ಪಡೆದ ಸೇವಾ ಅನುಭವದ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ಪ್ರಕಟಿಸಿ ಪ್ರಚುರಪಡಿಸಲಾಗುತ್ತದೆ.
* ಸದರಿ ತಾತ್ಕಾಲಿಕ ಮೆರಿಟ್ ಪಟ್ಟಿಗೆ ಆಕ್ಷೇಪಣೆ ಆಹ್ವಾನಿಸಿ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲನೆ ಮಾಡಿ ಅಂತಿಮ ಮೆರಿಟ್ ಪಟ್ಟಿ ಪ್ರಕಟಿಸಲಾಗುತ್ತದೆ.
* ಸದರಿ ಅಂತಿಮ ಮೆರಿಟ್ ಪಟ್ಟಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಸಂಬಂಧಪಟ್ಟ ಹುದ್ದೆಗಳ ಅನುಗುಣವಾಗಿ ಆಯ್ಕೆಗೆ ಪರಿಗಣಿಸಲಾಗುವುದು.
* ಹುದ್ದೆಗಳ ಆಯ್ಕೆಗೆ ನೇರ ಸಂದರ್ಶನ ಇರುವುದಿಲ್ಲ
* ಖಾಲಿ ಹುದ್ದೆಗಳನ್ನು ಹೆಚ್ಚಿಸುವ ಅಥವ ಕಡಿಮೆ ಮಾಡುವ ಅಧಿಕಾರವು ನೇಮಕಾತಿ ಪ್ರಾಧಿಕಾರ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಬಳ್ಳಾರಿ ಇವರು ಹೊಂದಿರುತ್ತಾರೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ
-
ಏರ್ ಕೂಲರ್ vs ಏರ್ ಕಂಡಿಷನರ್: ಬೇಸಿಗೆಯಲ್ಲಿ ನಿಮ್ಮ ಸರಿಯಾದ ಆಯ್ಕೆ ಯಾವುದು? -
ಇಂಧನ ಪೂರೈಕೆ ಕೊರತೆ ಭೀತಿ: 2026ರಲ್ಲಿ ನೀವು ಖರೀದಿಸಬಹುದಾದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಇಲ್ಲಿವೆ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ -
Water4Life: ಅತ್ಯಮೂಲ್ಯ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್ನಿಂದ ಜನ ಚಳವಳಿ, ಡಿಟೇಲ್ಸ್ ಇಲ್ಲಿದೆ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ












Click it and Unblock the Notifications