80 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಬಾಗಲಕೋಟೆ ಡಿಸಿಸಿ ಬ್ಯಾಂಕ್

ಬೆಂಗಳೂರು, ಡಿಸೆಂಬರ್ 27 : ಬಾಗಲಕೋಟೆ ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಜನವರಿ 5, 2019 ಕೊನೆಯ ದಿನವಾಗಿದೆ.

ಒಟ್ಟು 80 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಂಡು ಆಫ್‌ಲೈನ್ ಮೂಲಕ ಸಲ್ಲಿಸಬೇಕಾಗಿದೆ.

ಟೆಕ್ನಿಕಲ್ ಅಸಿಸ್ಟೆಂಟ್ 2, ಕಂಪ್ಯೂಟರ್ ಆಪರೇಟರ್ 6, ದ್ವಿತೀಯ ದರ್ಜೆ ಸಹಾಯಕ 44, ಚಾಲಕ 2, ಸೆಕ್ಯುರಿಟಿ ಗಾರ್ಡ್ 26 ಸೇರಿದಂತೆ ಒಟ್ಟು 80 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

jobs

ಬಿಇ, ಬಿ.ಟೆಕ್, ಎಂಸಿಎ, ಎಂಎಸ್‌ಸಿ, ಬಿಸಿಎ, ಬಿಎಸ್‌ಸಿ, ಬಿಕಾಂ, ಬಿಬಿಎ, ಬಿಬಿಎಂ, ಎಸ್‌ಎಸ್‌ಎಸ್‌ಸಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ವೇತನ ಶ್ರೇಣಿಯ ವಿವರ

* ಟೆಕ್ನಿಕಲ್ ಅಸಿಸ್ಟೆಂಟ್ 21600-40050
* ಕಂಪ್ಯೂಟರ್ ಆಪರೇಟರ್ 20000-363000
* ದ್ವಿತೀಯ ದರ್ಜೆ ಸಹಾಯಕ 17650-32000
* ಚಾಲಕ 17650-32000
* ಸೆಕ್ಯುರಿಟಿ ಗಾರ್ಡ್ 14550-26700

ವಯೋಮಿತಿ : ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. (5 ಜನವರಿ 2019ಕ್ಕೆ ಅನ್ವಯವಾಗುವಂತೆ. ಗರಿಷ್ಠ ವಯೋಮಿತಿ 35 ವರ್ಷಗಳು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ.

ಲಿಖಿತ ಪರೀಕ್ಷೆ, ಕಂಪ್ಯೂಟರ್ ಸ್ಕಿಲ್ ಟೆಸ್ಟ್, ಚಾಲನಾ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಖುದ್ದಾಗಿ ಅಥವ www.bgkdccbank.com ಮೂಲಕ ಅರ್ಜಿಗಳನ್ನು ಪಡೆದುಕೊಂಡು ಭರ್ತಿ ಮಾಡಿ ಜನವರಿ 5, 2019ರ ವೊಳಗೆ ಸಲ್ಲಿಸಬೇಕಾಗಿದೆ.

ಅರ್ಜಿಗಳನ್ನು ಸಲ್ಲಿಸಲು ವಿಳಾಸ : ಸದಸ್ಯ ಕಾರ್ಯದರ್ಶಿ, ಸಿಬ್ಬಂದಿ ನೇಮಕಾತಿ ಸಮಿತಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಬಾಗಲಕೋಟ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ನಿ. ಸೆಕ್ಟರ 24, ನವನಗರ, ಬಾಗಲಕೋಟೆ 587103 ಕಚೇರಿಗೆ ಕಳಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+