ಕೆಲಸವಿದೆ : ಆಡಿಯೋ ವಿಷುವಲ್ ಪ್ರೊಡಕ್ಷನ್ ಮುಖ್ಯಸ್ಥ
ಬೆಂಗಳೂರು, ಡಿಸೆಂಬರ್ 12 : ಆಡಿಯೋ ಮತ್ತು ವಿಷುವಲ್ (ಪಾಡ್ ಕಾಸ್ಟ್) ಮೀಡಿಯಾದಲ್ಲಿ ಕೆಲಸ ಮಾಡಿ ಅನುಭವ ಇರುವವರಿಗೆ ಲೀಡಿಂಗ್ ಇಂಟರ್ನೆಟ್ ಕಂಪನಿ ಒನ್ಇಂಡಿಯಾದಲ್ಲಿ ಪ್ರೊಡಕ್ಷನ್ ಹೆಡ್ ಆಗಿ ಕೆಲಸ ಮಾಡುವ ಸುಯೋಗ ಕೂಡಿಬಂದಿದೆ. ರೇಡಿಯೋ, ಟಿವಿ ಮತ್ತು ಇಂಟರ್ನೆಟ್ ಮಾಧ್ಯಮದಲ್ಲಿ ಕೆಲಸ ಮಾಡಿ ಅನುಭವ ಇರುವವರು ಕೂಡಲೆ ಪ್ರಯತ್ನಿಸಬಹುದು.
ಕೆಲಸದ ಪ್ರೊಫೈಲ್ : ಆಡಿಯೋ ವಿಷುವಲ್ (ಪಾಡ್ ಕಾಸ್ಟ್) ಪ್ರೊಡಕ್ಷನ್ ಮುಖ್ಯಸ್ಥ
ಅನುಭವ : ಸುದ್ದಿ ಮಾಧ್ಯಮ ಅಥವಾ ವಿಷುವಲ್ ಮೀಡಿಯಾ ಅಥವಾ ಸಂವಹನ ಮಾಧ್ಯಮದಲ್ಲಿ 5-7 ವರ್ಷ ಅನುಭವ.
ಕೆಲಸದ ಸ್ಥಳ : ಬೆಂಗಳೂರು

ಕೆಲಸದ ವಿವರಗಳು
- ಆಡಿಯೋ ವಿಷುವಲ್ ಪರಿಣತರನ್ನು ಹುಡುಕಿ, ಕೆಲಸಕ್ಕೆ ನೇಮಿಸಿಕೊಂಡು ಒಂದು ತಂಡ ಕಟ್ಟುವ ಜವಾಬ್ದಾರಿ ನಿಮ್ಮ ಮೇಲಿರುತ್ತದೆ.
- ಆನ್ ಲೈನ್ ಮೀಡಿಯಾಗಾಗಿ ಉತ್ಕೃಷ್ಟ ಆಡಿಯೋ ವಿಷುವಲ್ ನ್ಯೂಸನ್ನು ಪರಿಕಲ್ಪಿಸಿಕೊಂಡು, ಸ್ಕ್ರಿಪ್ಟ್ ಬರೆದು, ಸುಂದರವಾಗಿ ನಿರೂಪಿಸುವ ಜವಾಬ್ದಾರಿ ನಿಮ್ಮದು.
- ಡಿಜಿಟಲ್ ಮೀಡಿಯಾ ಬಗ್ಗೆ ಅಪಾರ ಆಸಕ್ತಿ ಇರಬೇಕು. ಸಿದ್ಧಪಡಿಸಲಾದ ಉತ್ಪನ್ನವನ್ನು ವಿಭಿನ್ನ ಆನ್ ಲೈನ್ ಪ್ಲಾಟ್‌ಫಾರಂ ಮೇಲೆ ಪ್ರಮೋಟ್ ಮಾಡಿ, ವೀಕ್ಷಕರನ್ನು ಸೆಳೆಯುವ, ಹಿಡಿದಿಟ್ಟುಕೊಳ್ಳುವ ಮತ್ತು ಆದಾಯ ಹೆಚ್ಚಿಸುವ ಜವಾಬ್ದಾರಿಯೂ ನಿಮ್ಮದೆ.
- ವಿಶ್ವದಾದ್ಯಂತ ನಡೆಯುತ್ತಿರುವ ವಿದ್ಯಾಮಾನಗಳ ಬಗ್ಗೆ ಮತ್ತು ಆಗುಹೋಗುಗಳ ಬಗ್ಗೆ ನಿಗಾ ಇರಬೇಕು, ಹೊಸ ಸುದ್ದಿಗಾಗಿ ಹುಡುಕುವ ಕಣ್ಣುಗಳಿರಬೇಕು.
- ಭಾಷೆಯ ಸಂವಹನ ನೈಪುಣ್ಯತೆ ಅತ್ಯುತ್ತಮವಾಗಿರಬೇಕು, ಭಾಷೆಯ ಮೇಲೆ ಹಿಡಿತವಿರಬೇಕು ಮತ್ತು ಸ್ಟೈಲ್ ಮಾರ್ಗದರ್ಶಿ ತಿಳಿದಿರಬೇಕು.
- ಹಿನ್ನೆಲೆ ಸಂಗೀತ/ಧ್ವನಿ ಬಳಸಿ, ಅಭಿವೃದ್ಧಿಪಡಿಸಲಾದ ಸ್ಕ್ರಿಪ್ಟನ್ನು ಅತ್ಯುತ್ತಮ ಗುಣಮಟ್ಟದ ಆಡಿಯೋ ವಿಷುವಲ್ ಪ್ರಾಡಕ್ಟಾಗಿ ಪರಿವರ್ತಿಸುವ ನೈಪುಣ್ಯತೆ ಇರಬೇಕು.
- ಎರಡಕ್ಕಿಂತ ಹೆಚ್ಚು ಭಾರತೀಯ ಭಾಷೆಯ ಮೇಲಿನ ಜ್ಞಾನವಿದ್ದರೆ ಉತ್ತಮ.
- ಇತರ ತಂಡಗಳೊಂದಿಗೆ ಬೆರೆತು ಕೆಲಸ ಮಾಡುವ ಚಾಕಚಕ್ಯತೆ ಇರಬೇಕು. ಅಗತ್ಯ ಬಿದ್ದರೆ ಸುದ್ದಿ ಸಂಪಾದಿಸುವ ಅಥವಾ ಮಾರಾಟ ತಂಡಗಳೊಂದಿಗೆ ರಚನಾತ್ಮಕವಾಗಿ ಕೆಲಸ ಮಾಡಲು ಸಿದ್ಧರಿರಬೇಕು.
- ಆಡಿಯೋ ಮತ್ತು ವಿಡಿಯೋ ಸಾಫ್ಟ್ ವೇರ್ ಗಳನ್ನು ಬಳಸಿಕೊಂಡು ಆಡಿಯೋ ಮಿಕ್ಸ್ ಮಾಡುವ, ಎಡಿಟ್ ಮಾಡುವ ಕಾರ್ಯ ಕರಗತವಾಗಿರಬೇಕು.
- ಆಡಿಯೋ ವಿಷುವಲ್ ಪತ್ರಿಕೋದ್ಯಮದಲ್ಲಿ ನೀವು ಕೆಲಸ ಮಾಡಿದ್ದು, 5ರಿಂದ 7 ವರ್ಷಗಳ ಅನುಭವವಿದ್ದರೆ ಮತ್ತು ಸುದ್ದಿ ಮಾಧ್ಯಮ ಅಥವಾ ವಿಷುವಲ್ ಮೀಡಿಯಾ ಅಥವಾ ಸಂವಹನ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೆ ನೀವು ಸೂಕ್ತ ಅಭ್ಯರ್ಥಿಯಾಗುತ್ತೀರಿ.
- ನೀವು ಕೆಲಸ ಮಾಡಬೇಕಾದ ಸ್ಥಳ ಬೆಂಗಳೂರು. ಕೂಡಲೆ ಅರ್ಜಿ ಸಲ್ಲಿಸಿ.












Click it and Unblock the Notifications