ಕಲಬುರಗಿಯಲ್ಲಿ ಅಕ್ಟೋಬರ್ 5ರಿಂದ ಸೇನಾ ನೇಮಕಾತಿ

ಕಲಬುರಗಿ, ಅ.18 : ಭಾರತೀಯ ಸೇನೆಯಲ್ಲಿನ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಕಲಬುರಗಿಯಲ್ಲಿ ಅಕ್ಟೋಬರ್ 5ರಿಂದ 14ರ ತನಕ ನೇಮಕಾತಿ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 15ರ ತನಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಬೆಳಗಾವಿಯ ಸೇನಾ ನೇಮಕಾತಿ ಕಚೇರಿ ಈ ನೇಮಕಾತಿಯನ್ನು ಆಯೋಜಿಸಿದೆ. ಸೈನಿಕ ಸಾಮಾನ್ಯ ಕರ್ತವ್ಯ, ಸೈನಿಕ ಕ್ಲಾರ್ಕ/ ಸ್ಟೋರ್ ಕೀಪರ್ ತಾಂತ್ರಿಕ, ಸೈನಿಕ ಟ್ರೇಡ್ಸ್‍ಮೆನ್, ಸೈನಿಕ ನರ್ಸಿಂಗ್ ಸಹಾಯಕರು, ಸೈನಿಕ ತಾಂತ್ರಿಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

Army Recruitment rally in Kalaburagi form October 5 to 14, 2017

ಉತ್ತರ ಕರ್ನಾಟಕದ ಆರು ಜಿಲ್ಲೆಗಳಾದ ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಆಸಕ್ತ ಯುವಕರು ನೇಮಕಾತಿಯಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0831-2465550.

ಸೈನಿಕ ಸಾಮಾನ್ಯ ಹುದ್ದೆಗೆ ವಯೋಮಿತಿ 17 ರಿಂದ 21 ವರ್ಷ. ಶೇ 45ರಷ್ಟು ಅಂಕಗಳೊಂದಿಗೆ ಎಸ್‍ಎಸ್‍ಎಲ್‍ಸಿ ಪಾಸಾಗಿರಬೇಕು. ಸೈನಿಕ ಕ್ಲಾರ್ಕ/ ಸ್ಟೋರ್ ಕೀಪರ್ ತಾಂತ್ರಿಕ ಹುದ್ದೆಗೆ 17 ರಿಂದ 23 ವರ್ಷ ವಯೊಮಿತಿ. ಎಸ್‍ಎಸ್‍ಎಲ್‍ಸಿಯಲ್ಲಿ ಶೇ. 50 ಅಂಕಗಳನ್ನು ಪಡೆದಿರಬೇಕು.

ಸೈನಿಕ ಟ್ರೇಡ್ಸ್‍ಮೆನ್ ಹುದ್ದೆಗೆ 17 ರಿಂದ 21 ವರ್ಷ ವಯೋಮಿತಿ. ಎಸ್‌ಎಸ್‌ಎಲ್‌ಸಿ ಅಥವಾ 8ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಸೈನಿಕ ನರ್ಸಿಂಗ್ ಸಹಾಯಕರ ಹುದ್ದೆಗೆ 17 ರಿಂದ 23 ವರ್ಷ ವಯೋಮಿತಿ. ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯಗಳಲ್ಲಿ ಶೇ. 50 ಅಂಕಗಳನ್ನು ಪಡೆದಿರಬೇಕು. ಸೈನಿಕ ತಾಂತ್ರಿಕ ಹುದ್ದೆಗೆ ವಯೋಮಿತಿ 17 ರಿಂದ 23 ವರ್ಷ. ಪಿಯುಸಿ ವಿಜ್ಞಾನ ವಿಷಯದಲ್ಲಿ ಶೇ 50ರಷ್ಟು ಅಂಕಗಳನ್ನು ಪಡೆದಿರಬೇಕು.

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ನೋಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+