ಕಲಬುರಗಿ; ಉಚಿತವಾಗಿ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಹಾಕಿ

ಕಲಬುರಗಿ, ಸೆಪ್ಟೆಂಬರ್ 05; ಜಿಲ್ಲಾ ಪಂಚಾಯತ ಕಾರ್ಯಾಲಯ ಕಲಬುರಗಿ ಉಚಿತವಾಗಿ ವಿದ್ಯುತ್‌ ಚಾಲಿತ ಹೊಲಿಗೆಯಂತ್ರಗಳನ್ನು ವಿತರಿಸುತ್ತಿದೆ. ಇದನ್ನು ಪಡೆಯಲು ಆಸಕ್ತರು ಸೆಪ್ಟೆಂಬರ್ 30ರ ತನಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಕಲಬುರಗಿ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಜಿಲ್ಲಾ ಪಂಚಾಯತಿ (ಕೈಗಾರಿಕಾ ವಿಭಾಗ)ದ 2023-24ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಸರಬರಾಜು ಯೋಜನೆ (ಜಿಲ್ಲಾ ವಲಯ) ಅಡಿ ಯಂತ್ರಗಳನ್ನು ವಿತರಣೆ ಮಾಡುತ್ತಿದೆ.

Apply To Get Sewing Machine For Free At Kalaburagi

ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು 550 ಹೊಲಿಗೆ ವೃತ್ತಿನಿರತ ಮಹಿಳಾ ಕುಶಲಕರ್ಮಿಗಳಿಗೆ ಉಚಿತವಾಗಿ ವಿದ್ಯುತ್‌ ಚಾಲಿತ ಹೊಲಿಗೆಯಂತ್ರಗಳನ್ನು ವಿತರಿಸುವ ಗುರಿ ಹೊಂದಿದೆ. ತಾಲೂಕುವಾರು ಹಾಗೂ ಪ್ರವರ್ಗವಾರು ಗುರಿಯನ್ನು ಸಹ ನಿಗದಿಪಡಿಸಲಾಗಿದೆ.

ಪ್ರವರ್ಗವಾಗು ವಿವರಗಳು; ಕಲಬುರಗಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ 125, ಪರಿಶಿಷ್ಟ ಪಂಗಡ 50, ಅಲ್ಪ ಸಂಖ್ಯಾತ 83, ಇತರೆ 292 ಸೇರಿ ಒಟ್ಟು 550 ವಿದ್ಯುತ್‌ ಚಾಲಿತ ಹೊಲಿಗೆಯಂತ್ರ ವಿತರಣೆ ಮಾಡಲಾಗುತ್ತದೆ. ಇವುಗಳಲ್ಲಿ ಅಫಜಲಪೂರ 80, ಆಳಂದ 71, ಚಿಂಚೋಳಿ 70, ಚಿತ್ತಾಪುರ 41,ಕಾಳಗಿ 44, ಶಹಬಾದ 19, ಕಲಬುರಗಿ 42, ಕಮಲಾಪುರ 30, ಜೇವರ್ಗಿ 48, ಯಡ್ರಾಮಿ 39, ಸೇಡಂ 66 ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ.

ವಿದ್ಯುತಚಾಲಿತ ಹೊಲಿಗೆಯಂತ್ರ ಪಡೆಯುವುದಕ್ಕಾಗಿ ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಮಹಿಳಾ ಅಭ್ಯರ್ಥಿ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 45 ವರ್ಷಗಳು ಇರತಕ್ಕದ್ದು. (ಅರ್ಜಿ ಸಲ್ಲಿಸುವ ಮೊದಲನೇ ದಿನಾಂಕವಾದ 01-09-2023ಕ್ಕೆ ಅನ್ವಯವಾಗುವಂತೆ).

ಅರ್ಜಿದಾರರು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ಒಂದು ಕುಟುಂಬಕ್ಕೆ ಒಂದು ಅರ್ಜಿ ಸಲ್ಲಿಸಲು ಮಾತ್ರ ಅವಕಾಶವಿರುತ್ತದೆ. ಸರಕಾರದ ಯಾವುದೇ ಯೋಜನೆಯಡಿ ಈಗಾಗಲೇ ಹೊಲಿಗೆಯಂತ್ರವನ್ನು ಪಡೆದಿರುವ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅರ್ಹವಿರುವುದಿಲ್ಲ. ಸರ್ಕಾರಿ ನೌಕರರು ಅಥವಾ ಅವರ ಅವಲಂಬಿತರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

ಆನ್‌ಲೈನ್‌ನಲ್ಲಿ www.kalaburagi.nic.in ವೆಬ್‌ಸೈಟ್ ಮುಖಾಂತರ ಅವಶ್ಯ ಮಾಹಿತಿ ಭರ್ತಿ ಮಾಡಿ ಮತ್ತು ಸಂಬಂಧಿಸಿದ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿಗಳು ಅಪ್‌ಲೋಡ್ ಮಾಡುವ ಮೂಲಕ ನಿಗದಿತ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಯಾವ-ಯಾವ ದಾಖಲೆಗಳು; ಅರ್ಜಿಗಳನ್ನು ಸಲ್ಲಿಕೆ ಮಾಡುವವರು ಪಾಸ್‌ಪೋರ್ಟ್‌ ಗಾತ್ರದ ಭಾವಚಿತ್ರ (in JPG format), ಜನ್ಮ ದಿನಾಂಕ ನಮೂದಿಸಿರುವ ದಾಖಲೆ (ವರ್ಗಾವಣೆ ಪ್ರಮಾಣ ಪತ್ರ ಎಸ್.ಎಸ್.ಎಲ್.ಸಿ., ಅಂಕಪಟ್ಟಿ/ ಇನ್ನಿತರ ಪ್ರಮಾಣ (in PDF format), ಶೈಕ್ಷಣಿಕ ಅರ್ಹತೆ (ವರ್ಗಾವಣೆ ಪ್ರಮಾಣ/ ಅಂಕಪಟ್ಟಿ) (in PDF format), ಜಾತಿ ಪ್ರಮಾಣ ಪತ್ರ (in PDF format), ಪಡಿತರ ಚೀಟಿ (in PDF format), ಆಯಾ ಗ್ರಾಮ ಪಂಚಾಯತಿಯ, ಪಂಚಾಯತ ಅಭಿವೃದ್ಧಿ ಅಧಿಕಾರಿಯವರಿಂದ ಹೊಲಿಗೆ (ಟೇಲರಿಂಗ್) ವೃತ್ತಿ ಮಾಡುತ್ತಿರುವ ಬಗ್ಗೆ ದೃಢೀಕರಣ ಪ್ರಮಾಣ ಪತ್ರ, (in PDF format) ಅಪ್‌ಲೋಡ್ ಮಾಡಬೇಕಿದೆ.

ನಿಗದಿಪಡಿಸಿರುವ ಗುರಿಗಿಂತ ಅಧಿಕ ಅರ್ಹ ಅರ್ಜಿಗಳು ಸ್ವೀಕೃತವಾಗಿದ್ದಲ್ಲಿ, ಲಾಟರಿ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಸಕ್ತರು ದಿನಾಂಕ 1/9/2023ರಿಂದ 30/9/2023ರ ವರೆಗೆ ವೆಬ್‌ಸೈಟ್ www.kalaburagi.nic.in ಮುಖಾಂತರ ಅರ್ಜಿ ಸಲ್ಲಿಸಬೇಕು.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು (ಗ್ರಾಮೀಣ ಕೈಗಾರಿಕೆ) ರವರ ಕಛೇರಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೈಗಾರಿಕಾ ವಿಭಾಗ, ಜಿಲ್ಲಾ ಪಂಚಾಯತಿ, ಎಲ್-10, ಕೈಗಾರಿಕಾ ವಸಾಹತು, ಎಂ. ಎಸ್. ಕೆ. ಮಿಲ್ ರಸ್ತೆ, ಕಲಬುರಗಿ ಅಥವಾ ಆಯಾ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+