ಉದ್ಯೋಗ ಮಾಹಿತಿ; ಬಳ್ಳಾರಿ, ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ

ಶಿವಮೊಗ್ಗ, ಜೂನ್ 02; ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿವಮೊಗ್ಗ ಯುವ ಸ್ಪಂದನ ಕೇಂದ್ರ ಇಲ್ಲಿ ಯುವ ಪರಿವರ್ತಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಲು ಜೂನ್ 10 ಕೊನೆಯ ದಿನವಾಗಿದೆ.

ಕರ್ನಾಟಕ ರಾಜ್ಯ ಯುವ ನೀತಿ-2012 ರನ್ವಯ ಕರ್ನಾಟಕ ಸರ್ಕಾರ ಮತ್ತು ಜನ ಆರೋಗ್ಯ ಕೇಂದ್ರ, ಎಪಿಡೀಮಿಯಾಲಜಿ ವಿಭಾಗ, ನಿಮ್ಹಾನ್ಸ್, ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಯುವ ಸ್ಪಂದನ ಕಾರ್ಯಕ್ರಮವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಟಾನಗೊಂಡಿದೆ.

ಈ ಯೋಜನೆ ಮೂಲಕ ಯುವಜನರ ಮಾನಸಿಕ ಆರೋಗ್ಯಕ್ಕೆ ಪೂರಕ ಸೇವೆಗಳನ್ನು ಒದಗಿಸಲು ಶಿವಮೊಗ್ಗ ಜಿಲ್ಲೆಯ ಹೊಸನಗರ ಮತ್ತು ಸೊರಬ ತಾಲ್ಲೂಕುಗಳಲ್ಲಿ ಯುವ ಪರಿವರ್ತಕರಾಗಿ ಕಾರ್ಯ ನಿರ್ವಹಿಸಲು ಯುವಕ ಮತ್ತು ಯುವತಿಯರಿಂದ ಅರ್ಜಿ ಕರೆಯಲಾಗಿದೆ.

Apply For Youth Transformers Post At Shivamogga

ಯಾವುದೇ ಪದವಿ ಹಾಗೂ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರಬೇಕು. ಕನಿಷ್ಟ 21 ರಿಂದ 35 ವಯಸ್ಸಿನೊಳಗಿದ್ದು ಕನ್ನಡ ಸ್ಪಷ್ಟವಾಗಿ ಮಾತನಾಡಲು, ಬರೆಯಲು ಬರಬೇಕು ಹಾಗೂ ಸಂವಹನ ಕೌಶಲ್ಯ ಹೊಂದಿರಬೇಕು. ಸಮುದಾಯದಲ್ಲಿ ಕೆಲಸ ಮಾಡಿದವರಿಗೆ ಹಾಗೂ ಹೊಸನಗರ ಮತ್ತು ಸೊರಬ ತಾಲ್ಲೂಕುಗಳ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ನೇಮಕಾತಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳನ್ನು ಜೂನ್ 10ರೊಳಗೆ ಖುದ್ದಾಗಿ ನೆಹರು ಕ್ರೀಡಾಂಗಣದಲ್ಲಿರುವ ಯುವ ಸ್ಪಂದನ ಕೇಂದ್ರಕ್ಕೆ ಸಲ್ಲಿಸಬಹುದು ಅಥವಾ ಕೆಳಕಂಡ ಮೊಬೈಲ್‌ ಸಂಖ್ಯೆಗಳಿಗೆ ವಾಟ್ಸಾಪ್ ಮೂಲಕ ಸಲ್ಲಿಸಬೇಕಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 08182-222248ಗೆ ಕರೆ ಮಾಡಬಹುದಾಗಿದೆ. ಯುವ ಸಮಾಲೋಚಕಿ ಪವಿತ್ರ ಆರ್. ಮೊಬೈಲ್ ಸಂಖ್ಯೆ 9353180519.

ಕ್ಷೇತ್ರ ಸಂಪರ್ಕಾಧಿಕಾರಿ ನಾಗರತ್ನ 8088488688 ರನ್ನು ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಪ್ರೆಂಟಿಷಿಪ್ ತರಬೇತಿಗಾಗಿ ಅರ್ಜಿ ಆಹ್ವಾನ; ಬಳ್ಳಾರಿ ಜಿಲ್ಲೆಯ ಕುಡುತಿನಿಯ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಕಂಪನಿಯಲ್ಲಿ ಅಪ್ರೆಂಟಿಷಿಪ್ ಕಾಯ್ದೆ 1961ರ ಪ್ರಕಾರ ಇಂಜಿನಿಯರಿಂಗ್‍ನಲ್ಲಿ ಗ್ರಾಜ್ಯುಯೇಟ್, ಡಿಪ್ಲೊಮಾ ಇಂಜಿನಿಯರಿಂಗ್ ಹಾಗೂ ಐಟಿಐ, ಐಟಿಐಯೇತರ ಶಿಶಿಕ್ಷು ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.

ಬಿಇ(ಸಿವಿಲ್) 1, ಬಿಇ (ಮೆಕ್ಯಾನಿಕಲ್) 6, ಬಿಇ (ಇನ್‍ಸ್ಟ್ರುಮೆಂಟೇಶನ್) 2, ಬಿಇ (ಕಂಪ್ಯೂಟರ್ ಸೈನ್ಸ್) 1 ಹುದ್ದೆಗಳು. ತರಬೇತಿಯ ಅವಧಿ 1 ವರ್ಷವಾಗಿದ್ದು, ಶೈಕ್ಷಣಿಕ ಅರ್ಹತೆ ಬಿಇ ಪದವಿ ಉತ್ತೀರ್ಣರಾಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಶಿಷ್ಯ ವೇತನ ರೂ.12 ಸಾವಿರ ನೀಡಲಾಗುತ್ತದೆ.

ಡಿಪ್ಲೊಮಾ (ಸಿವಿಲ್) 1, ಡಿಪ್ಲೊಮಾ (ಇ&ಇ) 1, ಡಿಪ್ಲೊಮಾ (ಮೆಕ್ಯಾನಿಕಲ್) 1, ಡಿಪ್ಲೊಮಾ (ಕಂಪ್ಯೂಟರ್ ಸೈನ್ಸ್) 1, ಡಿಪ್ಲೊಮಾ (ಕಮರ್ಶಿಯಲ್ ಪ್ರಾಕ್ಟೀಸ್) 1, ತರಬೇತಿಯ ಅವಧಿ 1 ವರ್ಷವಾಗಿದ್ದು, ಶೈಕ್ಷಣಿಕ ಅರ್ಹತೆ ಡಿಪ್ಲೊಮಾ ಉತ್ತೀರ್ಣವಾಗಿರಬೇಕು ಹಾಗೂ ಮಾಸಿಕ ಶಿಷ್ಯವೇತನ ರೂ.10 ಸಾವಿರ ಆಗಿರುತ್ತದೆ.

ಐಟಿಐ (ಎಲೆಕ್ಟ್ರೀಷಿಯನ್) 6, ಐಟಿಐ (ಫಿಟ್ಟರ್) 5, ಐಟಿಐ (ಟರ್ನರ್) 2, ಐಟಿಐ (ವೆಲ್ಡರ್) 5, ಐಟಿಐ (ಕೊಪಾ (ಪಾಸಾ)-11, ತರಬೇತಿಯ ಅವಧಿ 1 ವರ್ಷವಾಗಿದ್ದು, ಶೈಕ್ಷಣಿಕ ಅರ್ಹತೆ ಐಟಿಐ ಉತ್ತೀರ್ಣರಾಗಿರಬೇಕು. ಮಾಸಿಕ ಶಿಷ್ಯವೇತನ ರೂ.10 ಸಾವಿರ ಆಗಿರುತ್ತದೆ.

ಎಫ್‍ಒಎ-5 (ಎಸ್‍ಎಸ್‍ಎಲ್‍ಸಿ ಮತ್ತು ಕಂಪ್ಯೂಟರ್), ಹೌಸ್ ಕೀಪರ್ 17. ತರಬೇತಿ ಅವಧಿ 1 ವರ್ಷವಾಗಿದ್ದು, ಶೈಕ್ಷಣಿಕ ಅರ್ಹತೆ ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರಬೇಕು. ಮಾಸಿಕ ಶಿಷ್ಯವೇತನ ರೂ.7 ಸಾವಿರ ಆಗಿರುತ್ತದೆ.

ಆನ್‍ಲೈನ್ ಮುಖಾಂತರ ಆಸಕ್ತ ಅಭ್ಯರ್ಥಿಗಳು www.mhrdnats.gov.in ಈ ವೆಬ್‍ಸೈಟ್‍ನಲ್ಲಿ ಜೂನ್ 13ರೊಳಗೆ ತಮ್ಮ ವೃತ್ತಿಗನುಗುಣವಾಗಿ ಎಲ್ಲಾ ವಿವರಗಳೊಂದಿಗೆ ಆಯಾ ವೃತ್ತಿಗಳಲ್ಲೇ ಅರ್ಜಿಗಳನ್ನು ಸಲ್ಲಿಸಬೇಕು ಮತ್ತು ಶೈಕ್ಷಣಿಕ ವರ್ಷ 2019 ಮತ್ತು ನಂತರದಲ್ಲಿ ಗ್ರಾಜುಯೇಟ್ (ಇಂಜಿನಿಯರಿಂಗ್/ ಡಿಪ್ಲೋಮಾ ಇಂಜಿನಿಯರಿಂಗ್) ಉತ್ತೀರ್ಣ ಹೊಂದಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.

ಐಟಿಐ/ ಎಸ್‍ಎಸ್‍ಎಲ್‍ಸಿ ಶಿಶಿಕ್ಷು ತರಬೇತಿಗೆ ಆನ್‍ಲೈನ್ ಮುಖಾಂತರ ಅರ್ಹ ಅಭ್ಯರ್ಥಿಗಳು www.apprenticeshipindia.org ವೆಬ್‍ಸೈಟ್‍ ಮೂಲಕ ಜೂನ್ 13ರೊಳಗೆ ತಮ್ಮ ಎಲ್ಲಾ ವಿವರಗಳ ವೃತ್ತಿಗನುಗುಣವಾಗಿ ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು: ಹೆಸರು, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯನ್ನೊಳಗೊಂಡ ದಾಖಲೆಯ ಪ್ರತಿ, ಆಧಾರ್ ಕಾರ್ಡ್ ಪ್ರತಿ, ವಿದ್ಯಾರ್ಹತೆಯ ಅಂಕಪಟ್ಟಿಗಳ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ, ದೈಹಿಕ ಕ್ಷಮತಾ ಪತ್ರ, ಇತ್ತೀಚಿನ 4 ಭಾವಚಿತ್ರಗಳು, ಈಗಾಗಲೇ ಶಿಶಿಕ್ಷು ತರಬೇತಿ ಪಡೆದ ವಿವರದ ದಾಖಲೆಯ ಪ್ರತಿ ಸಲ್ಲಿಸಬೇಕು.

ಅಭ್ಯರ್ಥಿಗಳು ಕಡ್ಡಾಯವಾಗಿ ಚಾಲ್ತಿಯಲ್ಲಿರುವ ತಮ್ಮ ಸ್ವಂತ ಇ-ಮೇಲ್ ಐಡಿಯನ್ನು ಮಾತ್ರ ಅರ್ಜಿಯಲ್ಲಿ ಭರ್ತಿ ಮಾಡತಕ್ಕದ್ದು, ತರಬೇತಿಯ ಎಲ್ಲಾ ಪತ್ರ ವ್ಯವಹಾರವನ್ನು ನೀವು ನೀಡಿದಂತಹ ಇ-ಮೇಲ್ ಐಡಿ ಮುಖಾಂತರ ಮಾಡಲಾಗುವುದು, ಅಭ್ಯರ್ಥಿಗಳು ಕಡ್ಡಾಯವಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಅದರ ಒಂದು ಪ್ರತಿಯನ್ನು ದಾಖಲೆಗಳೊಂದಿಗೆ ಕಚೇರಿಗೆ ಸಲ್ಲಿಸಬೇಕು.

ಲಕೋಟೆಯ ಮೇಲೆ ಶಿಶಿಕ್ಷು ತರಬೇತಿಗಾಗಿ ಅರ್ಜಿ ಎಂದು ನಮೂದಿಸಿ ಸಲ್ಲಿಸಬೇಕು. ಆಫ್‍ಲೈನ್ ಮೂಲಕ ಸಲ್ಲಿಸಿದ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ, ಈಗಾಗಲೇ ಶಿಶಿಕ್ಷು ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪುನಃ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಶಿಶಿಕ್ಷು ತರಬೇತಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶಿಶಿಕ್ಷು ಅಧಿನಿಯಮದಂತೆ ಕನಿಷ್ಠ 18 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಪ.ಜಾತಿ/ ಪ.ಪಂಗಡದ ಶಿಶಿಕ್ಷು ಕಾಯ್ದೆ ಪ್ರಕಾರ ಮೀಸಲಾತಿ ಇರುತ್ತದೆ. ನಿಗಮದ ಉದ್ಯೋಗಿಗಳ ಮಕ್ಕಳಿಗೆ ಶೇ.25ರಷ್ಟು ಮೀಸಲಾತಿ ಇರುತ್ತದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕೆಪಿಟಿಸಿಎಲ್‍ನ ಉಪ-ಪ್ರಧಾನ ಪ್ರಬಂಧಕರ ಇ-ಮೇಲ್ ವಿಳಾಸ [email protected] ಹಾಗೂ ಮೊಬೈಲ್ ಸಂಖ್ಯೆ 9141619835 ಗೆ ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+