ಕೋಲಾರದಲ್ಲಿ ಕೆಲಸ ಖಾಲಿ ಇದೆ; ಸೆ.11ರ ತನಕ ಅರ್ಜಿ ಹಾಕಿ
ಬೆಂಗಳೂರು, ಸೆಪ್ಟೆಂಬರ್ 06: ಕೋಲಾರ ಜಿಲ್ಲೆಯಲ್ಲಿ ಯೋಗ ತರಬೇತಿದಾರ ಹುದ್ದೆಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 11ರ ತನಕ ಅರ್ಜಿಗಳನ್ನು ಸಲ್ಲಿಸಬಹುದು.
ಕೋಲಾರ ಜಿಲ್ಲಾ ಆಯುಷ್ ಕಛೇರಿ ಅಧೀನದಲ್ಲಿ ಬರುವ ಆಯುರ್ವೇದ ಕ್ಷೇಮ ಕೇಂದ್ರಗಳಲ್ಲಿ (Health & Wellness centre) ಕಾರ್ಯ ನಿರ್ವಹಣೆ ಮಾಡಲು ಯೋಗ ತರಬೇತಿದಾರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಈ ಹುದ್ದೆಗಳನ್ನು ತಾತ್ಕಾಲಿಕ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. 1ನೇ ಯೋಗ ತರಬೇತುದಾರರು ಮತ್ತು 2ನೇ ಯೋಗ ತರಬೇತುದಾರರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಸೆಪ್ಟೆಂಬರ್ 11ರ ತನಕ ಅರ್ಜಿ ಸಲ್ಲಿಸಲು ಅವಕಾಶವಿದೆ.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಯುಷ್ ಕಛೇರಿ, ಕೋಲಾರ ಇವರನ್ನು ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ 9686614039/9980244453ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಸರು ನೋಂದಾಯಿಸಿ : ಏರ್ ಮೆನ್ ಸೆಲೆಕ್ಷನ್ ಸೆಂಟರ್ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 4 ರವರೆಗೆ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗಾಗಿ ಪ್ರತ್ಯೇಕವಾಗಿ ವಾಯುಪಡೆಯ ನೇಮಕಾತಿಯನ್ನು ಆಯೋಜಿಸಿದೆ. ಅಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು.












Click it and Unblock the Notifications