ದಕ್ಷಿಣ ಕನ್ನಡ ಕಂದಾಯ ಇಲಾಖೆಯಲ್ಲಿ 40 ಹುದ್ದೆಗಳು ಖಾಲಿ ಇವೆ
ಮಂಗಳೂರು, ಆಗಸ್ಟ್ 24 : ಕರ್ನಾಟಕ ಸರ್ಕಾರದ ದಕ್ಷಿಣ ಕನ್ನಡ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 40 ಹುದ್ದೆಗಳು ಖಾಲಿ ಇದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 23, 2015.
ಆ.24ರ ಸೋಮವಾರ ನೇಮಕಾತಿ ಅಧಿಸೂಚನೆ ಹೊರಡಿಸಲಾಗುತ್ತದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದ್ದು, ಖುದ್ದಾಗಿ ಅಥವ ಅಂಚೆ ಮೂಲಕ ಸಲ್ಲಿಸಲು ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. [ನೇಮಕಾತಿ ಆದೇಶ ಓದಿ]

ಅಭ್ಯರ್ಥಿಯು hrtp://dk-va.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಭರ್ತಿ ಮಾಡಿದ ನಂತರ ಸ್ವೀಕೃತಿ ಪತ್ರ ಮತ್ತು ದ್ವಿಪ್ರತಿ ಚಲನ್‌ಅನ್ನು ಪಡೆದುಕೊಳ್ಳತಕ್ಕದ್ದು. ನಿಗದಿತ ಅರ್ಜಿ ಶುಲ್ಕವನ್ನು ಚಲನ್‌ನೊಂದಿಗೆ ಸೆ.23ರ ಸಂಜೆ 5.30ರೊಳಗೆ ಪಾವತಿ ಮಾಡಬೇಕು. [ಉಡುಪಿಯಲ್ಲಿ ಕೆಲಸ ಖಾಲಿ ಇದೆ]
ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವ CBSE ಅಥವ ICSE ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಹೊಂದಿರಬೇಕು. ವೃತ್ತಿಪರ ಕೋರ್ಸ್ ಅಥವ ಬೇರೆ ವಿದ್ಯಾರ್ಹತೆಗಳನ್ನು ಪರಿಗಣಿಸಲಾಗುವುದಿಲ್ಲ.
ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ - 1ರ ಅಭ್ಯರ್ಥಿಗಳಿಗೆ 250 ರೂ.ಗಳು. ಸಾಮಾನ್ಯ ವರ್ಗ/2ಎ/2ಬಿ/3ಎ/3ಬಿ ವರ್ಗಕ್ಕೆ 500 ರೂ.ಗಳು. ಅರ್ಜಿ ಶುಲ್ಕವನ್ನು ಕಾರ್ಪೋರೇಷನ್ ಅಥವ ಐಸಿಐಸಿಐ ಬ್ಯಾಂಕ್‌ನ ಯಾವುದಾದದರೂ ಶಾಖೆಯಲ್ಲಿ ಪಾವತಿ ಮಾಡಬಹುದು.
ವಯೋಮಿತಿ : ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕನಿಷ್ಠ ವಯೋಮಿತಿ 18 ವರ್ಷಗಳು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ -1ರ ಅಭ್ಯರ್ಥಿಗಳಿಗೆ ಗರಿಷ್ಟ ವಯೋಮಿತಿ 40 ವರ್ಷಗಳು. 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 38 ವರ್ಷಗಳು. ಸಾಮಾನ್ಯ ವರ್ಗದವರಿಗೆ 35 ವರ್ಷ.












Click it and Unblock the Notifications