ಮಂಡ್ಯದಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ, ಅರ್ಜಿ ಹಾಕಿ
ಮಂಡ್ಯ, ಮೇ 15 : ಮಂಡ್ಯದ ವಿವೇಕ ವಿದ್ಯಾ ಸಂಸ್ಥೆ (ರಿ)ಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಶಿಕ್ಷಕರು ಮತ್ತು ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಅರ್ಜಿ ಸಲ್ಲಿಸಲು 25/5/2019 ಕೊನೆಯ ದಿನವಾಗಿದೆ.
ವಿವೇಕ ವಿದ್ಯಾ ಸಂಸ್ಥೆ (ರಿ) ಹನಕೆರೆ, ಮಂಡ್ಯ ತಾಲೂಕು, ವಿವೇಕ ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಕೆಳಕಂಡ ವಿದ್ಯಾ ಸಂಸ್ಥೆಯ ವತಿಯಿಂದ ನಡೆಸಲ್ಪಡುತ್ತಿರುವ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ಕೆಳಕಂಡ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕನ್ನಡ, ಇಂಗ್ಲಿಶ್, ಹಿಂದಿ, ಗಣಿತ, ವಿಜ್ಞಾನ, ಸಮಾಜ ಶಾಸ್ತ್ರ, ದೈಹಿಕ ಶಿಕ್ಷಕರು 1 ಹುದ್ದೆ. ಸಹ ಶಿಕ್ಷಕರು 4, ಪೂರ್ವ ಪ್ರಾಥಮಿಕ ಶಿಕ್ಷಕರು 1, ಕಂಪ್ಯೂಟರ್ ಶಿಕ್ಷಕರು 1, ಅಕೌಂಟೆಂಟ್ 1, ಹಾಸ್ಟೆಲ್ ವಾರ್ಡನ್ 1, ಮುಖ್ಯ ಅಡುಗೆಯವರು 2, ಸಹಾಯಕ ಅಡುಗೆಯವರು 4, ವಾಹನ ಚಾಲಕರು 3, ಅಟೆಂಡರ್ 4 ಹುದ್ದೆಗಳು.
ಮೇಲ್ಕಂಡ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಸ್ವ ವಿವರದ ಮಾಹಿತಿಯೊಂದಿಗೆ, ವಿದ್ಯಾಭ್ಯಾಸದ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಗಳನ್ನು 23/5/2019ರೊಳಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಿದವರು 27/5/2019ನೇ ಸೋಮವಾರ ಬೆಳಗ್ಗೆ 10.30ಕ್ಕೆ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು.
ಅರ್ಜಿ ಸಲ್ಲಿಸಲು ವಿಳಾಸ : ವಿವೇಕ ವಿದ್ಯಾ ಸಂಸ್ಥೆ (ರಿ), ಹನಕೆರೆ, ಮಂಡ್ಯ ತಾಲೂಕು, 571404












Click it and Unblock the Notifications