ಮಂಡ್ಯದಲ್ಲಿ 126 ವಿವಿಧ ಹುದ್ದೆಗಳು ಖಾಲಿ, ಕೆಲಸಕ್ಕೆ ಅರ್ಜಿ ಹಾಕಿ

ಮಂಡ್ಯ, ಸೆಪ್ಟೆಂಬರ್ 18 : ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆರ್ಜಿ ಆಹ್ವಾನಿಸಿದೆ. ಒಟ್ಟು 126 ವಿವಿಧ ಹುದ್ದೆಗಳಿದ್ದು, ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅರ್ಜಿಗಳನ್ನು ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿದೆ. ಖುದ್ದಾಗಿ ಅಥವ ಅಂಚೆ ಮೂಲಕ ಸಲ್ಲಿಸಲು ಅವಕಾಶವಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಅರ್ಜಿ ಸಲ್ಲಿಸಲು 17/10/2018 ಕೊನೆಯ ದಿನವಾಗಿದೆ.

ಹುದ್ದೆಗಳ ವಿವರ : ಸಹಾಯಕ ವ್ಯವಸ್ಥಾಪಕ 5, ಸಹಾಯಕ ವ್ಯವಸ್ಥಾಪಕ (ಖ/ಉ) 1, ಲೀಗಲ್ ಆಫೀಸರ್ 1, ತಾಂತ್ರಿಕ ಅಧಿಕಾರಿ (ಡಿ.ಟಿ) 9, ತಾಂತ್ರಿಕ ಅಧಿಕಾರಿ (ಅಭಿಯಂತರ) 4, ಉಗ್ರಾಣಾಧಿಕಾರಿ 1, ಆಡಳಿತ ದರ್ಜೆ ಸಹಾಯಕ 3, ಲೆಕ್ಕ ದರ್ಜೆ ಸಹಾಯಕ 3, ಕೆಮಿಸ್ಟ್‌ ದರ್ಜೆ 2 ಹುದ್ದೆಗಳಿವೆ.

Apply for various post in Mandya MANMUL

ಸೀನಿಯರ್ ಸಿಸ್ಟಮ್ ಆಪರೇಟರ್ 4, ವಿಸ್ತರಣಾಧಿಕಾರಿ ದರ್ಜೆ (3) 22, ಆಡಳಿತ ಸಹಾಯಕ ದರ್ಜೆ (2) 10, ಲೆಕ್ಕ ಸಹಾಯಕ ದರ್ಜೆ (2) 2, ಮಾರುಕಟ್ಟೆ ಸಹಾಯಕ ದರ್ಜೆ (2) 4, ಕೆಮಿಸ್ಟ್ ದರ್ಜೆ (2) 3, ಜ್ಯುನಿಯರ್ ಸಿಸ್ಟಮ್ ಆಪರೇಟರ್ 3, ಜ್ಯೂನಿಯರ್ ಟೆಕ್ನಿಶಿಯನ್ 36 ಸೇರಿದಂತೆ 126 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಒಕ್ಕೂಟವು ಹುದ್ದೆಗಳ ಸಂಖ್ಯೆ, ಮೀಸಲಾತಿ, ವಿದ್ಯಾರ್ಹತೆ, ವೇತನ ಶ್ರೇಣಿ ಮುಂತಾದ ವಿವರಗಳನ್ನು ವೆಬ್‌ಸೈಟ್‌ನಲ್ಲಿ ನೀಡಿದೆ. ಅರ್ಜಿಗಳನ್ನು ಸಹ ಆನ್‌ಲೈನ್ ಮೂಲಕವೇ ಭರ್ತಿ ಮಾಡಬೇಕು. ಅರ್ಜಿ ಭರ್ತಿಗೂ ಮುನ್ನ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ವಯೋಮಿತಿ ವಿವರ : ಸಾಮಾನ್ಯ ವರ್ಗ ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ. 2ಎ, 2ಬಿ, 3ಎ, 3ಬಿ ವರ್ಗದವರಿಗೆ ಕನಿಷ್ಠ 18, ಗರಿಷ್ಠ 38 ವರ್ಷಗಳು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ - 1 ಕನಿಷ್ಠ 18 ಮತ್ತು ಗರಿಷ್ಠ 40 ವರ್ಷಗಳು.

ಅರ್ಜಿ ಶುಲ್ಕದ ವಿವರ : ಸಾಮಾನ್ಯ ವರ್ಗದ ಹಾಗೂ ಇತರೆ ವರ್ಗದ ಅಭ್ಯರ್ಥಿಗಳಿಗೆ 1000 ರೂ. ಶುಲ್ಕ + ಅಂಚೆ ಕಚೇರಿ ಶುಲ್ಕ 30 + ಜಿಎಸ್‌ಟಿ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ -1ರ ಅಭ್ಯರ್ಥಿಗಳಿಗೆ 500 ರೂ. + ಅಂಚೆ ಕಚೇರಿ ಶುಲ್ಕ 30 + ಜಿಎಸ್‌ಟಿ.

ಅರ್ಜಿ ಶುಲ್ಕವನ್ನು 24/9/2018 ರಿಂದ ಯಾವುದೇ ಅಂಚೆ ಕಚೇರಿಯಲ್ಲಿ ಪಾವತಿ ಮಾಡಬಹುದಾಗಿದೆ.

ಅರ್ಜಿ ಸಲ್ಲಿಸಲು, ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+