ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಖಾಲಿ ಇದೆ
ಕಲಬುರಗಿ, ಏಪ್ರಿಲ್ 01 : ಕರ್ನಾಟಕದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಲಬುರಗಿಯಲ್ಲೂ ಸೋಂಕು ಹರಡಿದೆ. ಆದ್ದರಿಂದ, ಜಿಲ್ಲೆಯ ಆಸ್ಪತ್ರೆಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಇನ್‍ಸೆಂಟಿವ್ ವಾರ್ಡ್ ಮತ್ತು ಐಸೋಲೇಷನ್ ವಾರ್ಡ್‍ಗಳಲ್ಲಿ 24 ಗಂಟೆಗಳ ಕಾಲ ಕೊರೊನಾ ಶಂಕಿತ ಮತ್ತು ಸೋಂಕಿತರ ಚಿಕಿತ್ಸೆಗಾಗಿ ವೈದ್ಯರು/ ತಜ್ಞರು, ಶೂಶ್ರುಷಕರು, ಪ್ರಯೋಗ ಶಾಲಾ ತಂತ್ರಜ್ಞರು ಹಾಗೂ ಗ್ರೂಪ್-ಡಿ ಹುದ್ದೆಗಳನ್ನು ಗುತ್ತಿಗೆ/ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
"ವೈದ್ಯರು/ ತಜ್ಞರು 10, ಶೂಶ್ರುಷಕರು 20, ಪ್ರಯೋಗ ಶಾಲಾ ತಂತ್ರಜ್ಞರು 5 ಹಾಗೂ ಗ್ರೂಪ್ 'ಡಿ' ಸಿಬ್ಬಂದಿ 10 ಸೇರಿದಂತೆ ಒಟ್ಟು 45 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತಿದೆ" ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಹೇಳಿದ್ದಾರೆ.

ಪ್ರತಿ ತಿಂಗಳು ವೈದ್ಯರು/ ತಜ್ಞರಿಗೆ 60 ಸಾವಿರ ರೂ., ಶೂಶ್ರುಷಕರಿಗೆ 20000 ರೂ., ಪ್ರಯೋಗ ಶಾಲಾ ತಂತ್ರಜ್ಞರಿಗೆ 15000 ರೂ. ಹಾಗೂ ಗ್ರೂಪ್ 'ಡಿ' ಸಿಬ್ಬಂದಿಗೆ 12000 ರೂ. ಸಂಭಾವನೆ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೊರೊನಾ ನಿಗ್ರಹಕ್ಕೆ ಆರೋಗ್ಯ ತುರ್ತು ಪರಿಸ್ಥಿಯಲ್ಲಿ ಸೇವೆ ಸಲ್ಲಿಸಲು ಸರ್ಕಾರವು ಆರೋಗ್ಯ ಸಿಬ್ಬಂದಿಗೆ ಅವಕಾಶ ನೀಡಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಕಲಬುರಗಿ ಇವರನ್ನು ಭೇಟಿಯಾಗಬಹುದು.
ದೂರವಾಣಿ ಸಂಖ್ಯೆ 9449843053, 08472-278619 ಅಥವಾ ಇಮೇಲ್ ವಿಳಾಸ [email protected]












Click it and Unblock the Notifications