ದಿ ರಾಜಾಜಿನಗರ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಕೆಲಸ ಖಾಲಿ ಇದೆ
ಬೆಂಗಳೂರು, ಜೂನ್ 30; ದಿ ರಾಜಾಜಿನಗರ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. 14/7/2021ರ ತನಕ ಅರ್ಜಿ ಸಲ್ಲಿಸಬಹುದು.
ಸಹಾಯಕ ವ್ಯವಸ್ಥಾಪಕರು/ ಲೆಕ್ಕಿಗರು (2), ಸಹಾಯಕ ಲೆಕ್ಕಾಧಿಕಾರಿ/ ಆಂತರಿಕ ಲೆಕ್ಕ ಪರಿಶೋಧಕರು/ ಕ್ಷೇತ್ರಾಧಿಕಾರಿ/ ಮೇಲ್ವಿಚಾರಕರು/ ಮುಖ್ಯ ನಗದು ಅಧಿಕಾರಿ (5) ಹುದ್ದೆಗಳಿವೆ.
ಕಿರಿಯ ಸಹಾಯಕ (2), ಭದ್ರತಾ ರಕ್ಷಕ/ ವಾಹನ ಚಾಲಕರು (4) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ.

ಎಂ. ಸಿ. ಎ/ ಜೆ. ಡಿ. ಸಿ ಹಾಗೂ ಸಹಕಾರ ಬ್ಯಾಂಕ್‌ಗಳಿಗೆ ಸಂಬಂಧಪಟ್ಟಂತೆ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಹಾಗೂ ಇತರೆ ಸಹಕಾರ ಬ್ಯಾಂಕುಗಳಲ್ಲಿ ಕಾರ್ಯ ನಿರ್ವಹಣೆ ಮಾಡಿ ಅನುಭವ ಹೊಂದಿದವರು ಹಾಗೂ ಕನ್ನಡವನ್ನು ಓದಲು, ಬರೆಯಲು ಮತ್ತು ಬೆರಳಚ್ಚು ಮಾಡಲು ಬರುವ ಅಭ್ಯರ್ಥಿಗಳಿಗೆ ಆದ್ಯತೆ.
ಆಸಕ್ತ ಅಭ್ಯರ್ಥಿಗಳು ವೈಯಕ್ತಿಕ ವಿವರ, ಇತ್ತೀಚಿನ ಭಾವಚಿತ್ರ ಮತ್ತು ವಿದ್ಯಾರ್ಹತೆಗೆ ಸಂಬಂಧಪಟ್ಟ ದಾಖಲೆಗಳ ಪ್ರತಿಗಳ ಜೊತೆ ಅರ್ಜಿಗಳನ್ನು 14/7/2021ರೊಳಗೆ ಸಲ್ಲಿಕೆ ಮಾಡಬೇಕು.
ಮುಚ್ಚಿದ ಲಕೋಟೆಯಲ್ಲಿ ಯಾವ ಹುದ್ದೆಗೆ ಅರ್ಜಿ ಎಂದು ಬರೆದು ಸಲ್ಲಿಕೆ ಮಾಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ವಿಳಾಸ; ಪ್ರಧಾನ ವ್ಯವಸ್ಥಾಪಕರು, ಅಂಚೆ ಪೆಟ್ಟಿಗೆ 1036, ದಿ ರಾಜಾಜಿನಗರ ಕೋ-ಆಪ. ಬ್ಯಾಂಕ್ ಲಿಮಿಟೆಡ್, ರಾಜಾಜಿನಗರ ಪೋಸ್ಟ್ ಆಫೀಸ್, ರಾಜಾಜಿನಗರ, ಬೆಂಗಳೂರು 560010.
ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ ವಿಳಾಸ http://www.rcbl.co/












Click it and Unblock the Notifications