ಕೊಪ್ಪಳ, ಮೈಸೂರಿನಲ್ಲಿ ಕೆಲಸ ಖಾಲಿ ಇದೆ, ಆಸಕ್ತರು ಅರ್ಜಿ ಹಾಕಿ

ಮೈಸೂರು, ನವೆಂಬರ್ 16; ಮೈಸೂರು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ವತಿಯಿಂದ ಕೇಂದ್ರದಲ್ಲಿ ಗೌರವಧನ ಆಧಾರದ ಮೇಲೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಪಿ&ಓ ಅಭಿಯಂತರರು, ಪಿ&ಓ ಇಂಜಿನಿಯರ್ ಹುದ್ದೆಗೆ ಪದವಿ ಅಥವಾ ಡಿಪ್ಲೋಮ ಇನ್ ಪಿ&ಓ 2 ರಿಂದ 5ವರ್ಷ ಅನುಭವವಿರಬೇಕು. ಅಕೌಂಟೆಟ್ ಕಂ ಕ್ಲಕ್ ಹುದ್ದೆಗೆ ಬಿಕಾಂ ಪದವಿ ಹೊಂದಿರಬೇಕು.

ಅಭ್ಯರ್ಥಿಗಳು ಟ್ಯಾಲಿ ಜ್ಞಾನ ಮತ್ತು ಗಣಕಯಂತ್ರದ ಅನುಭವ 2 ರಿಂದ 3 ವರ್ಷ ಅನುಭವವಿರಬೇಕು, ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಯಾವುದೇ ಪದವಿ ಹೊಂದಿರಬೇಕು ಮತ್ತು ಗಣಕಯಂತ್ರದ ಜ್ಞಾನ 2 ವರ್ಷ ಅನುಭವವಿರಬೇಕು.

Apply For Various Post At Mysuru And Koppal

ಅರ್ಜಿ ಸಲ್ಲಿಸಲು ವಿಳಾಸ; ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಶೈಕ್ಷಣಿಕ ಮತ್ತು ಅನುಭವ ಪ್ರಮಾಣ ಪತ್ರಗಳ ನಕಲು ಪ್ರತಿ, ಸ್ವ-ವಿವರಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬೇಕು.

ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಇಲಾಖೆ ಪುಲಕೇಶಿ ರಸ್ತೆ, ತಿಲಕ್‌ನಗರ ಇಲ್ಲಿಗೆ ಸಲ್ಲಿಸಬಹುದಾಗಿದೆ.

2021 ನವೆಂಬರ್ 30 ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2490222, 2490333 ಹಾಗೂ ಮೊಬೈಲ್ ಸಂಖ್ಯೆ 9945243544 ಸಂಪರ್ಕಿಸಬಹುದು.

ಫಿಜಿಯೋತೆರೆಪಿಸ್ಟ್ ಹುದ್ದೆ; ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಅಭಿಯಾನ ಕೊಪ್ಪಳ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತಾಲೂಕಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿಯ ಸಮನ್ವಯ ಶಿಕ್ಷಣ ಅಡಿಯಲ್ಲಿ ತೀವ್ರ ವಿಕಲಚೇತನ ವಿದ್ಯಾರ್ಥಿಗಳಿಗೆ ಫಿಜಿಯೋತೆರೆಪಿ ಮಾಡಲು ಫಿಜಿಯೋತೆರೆಪಿಸ್ಟ್ ಹುದ್ದೆಗೆ ಅರ್ಜಿಗಳನ್ನು ಕರೆಯಲಾಗಿದೆ.

ಬ್ಯಾಚುಲರ್ ಆಫ್ ಫಿಜಿಯೋತೆರೆಪಿ (ಬಿಪಿಟಿ) ಅಥವಾ ಡಿಪ್ಲೋಮಾ ಇನ್ ಫಿಜಿಯೋತೆರೆಪಿ (ಡಿಪಿಟಿ) ವಿದ್ಯಾರ್ಹತೆಯುಳ್ಳ ಆಸಕ್ತ ಅಭ್ಯರ್ಥಿಗಳು ನವಂಬರ್ 23ರೊಳಗೆ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿಗಳನ್ನು ಬಿಆರ್‌ಸಿ ಕಚೇರಿಗೆ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9741978187 ಸಂಪರ್ಕಿಸಬಹುದು ಎಂದು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಕೊಪ್ಪಳದಲ್ಲಿ ಕೆಲಸ ಖಾಲಿ ಇದೆ; ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ ಜಿಲ್ಲೆಯ 5 ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಖಾಲಿ ಇರುವ 28 ಅಂಗನವಾಡಿ ಕಾರ್ಯಕರ್ತೆ ಹಾಗೂ 133 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಕರೆದಿದೆ.

ಅರ್ಹ ಮಹಿಳಾ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿಗಳನ್ನು ಸಲ್ಲಿಸಲು ವೆಬ್ ಸೈಟ್ ವಿಳಾಸ www.anganwadirecruit.kar.nic.in.

ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಲು ಡಿಸೆಂಬರ್ 13 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಅಥವಾ ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಭವನ ಕೊಪ್ಪಳ ಇವರನ್ನು ಸಂಪರ್ಕಿಸಬಹುದಾಗಿದೆ.

ಆಕ್ಷೇಪಣೆ ಸಲ್ಲಿಕೆ ಮಾಡಿ; ಬೆಂಗಳೂರು ವಿಭಾಗದ ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕರು ಗ್ರೇಡ್ 2 ವೃಂದದ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ಇಲಾಖಾ ವೆಬ್‍ಸೈಟ್ schooleducation.kar.nic.in ನಲ್ಲಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರವರ ಕಚೇರಿ (ಆಡಳಿತ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗಿರುತ್ತದೆ.

ಈ ಕರಡು ತಾತ್ಕಾಲಿಕ ಜೇಷ್ಟತಾ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಏನಾದರೂ ಇದ್ದಲ್ಲಿ ಸಂಬಂಧಿಸಿದ ಶಿಕ್ಷಕರು ಸಮರ್ಥನೀಯ ಪೂರಕ ದಾಖಲೆಗಳೊಂದಿಗೆ ನಿಗದಿತ ನಮೂನೆಯಲ್ಲಿ ನವೆಂಬರ್ 24 ರೊಳಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರವರ ಕಚೇರಿ (ಆಡಳಿತ)ಗೆ ನೇರವಾಗಿ ಸಲ್ಲಿಸಬಹುದಾಗಿದೆ.

ಸೈನಿಕ ಮಂಡಳಿ ಪುನಾರಚನೆ; ಮಾಜಿ ಸೈನಿಕರ ಕಲ್ಯಾಣ ಯೋಜನೆಗಳಿಗೆ ಪೂರಕವಾಗಿ ಜಿಲ್ಲಾ ಸೈನಿಕ ಮಂಡಳಿ, ಶಿವಮೊಗ್ಗ ಇದನ್ನು ಪುನರ್ರಚಿಸಲಾಗುತ್ತಿದೆ. ಶಿವಮೊಗ್ಗ-ಚಿತ್ರದುರ್ಗ-ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯ ಮಾಜಿ ಸೈನಿಕರು ಜಿಲ್ಲಾ ಸೈನಿಕ ಮಂಡಳಿಯಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿದ್ದಲ್ಲಿ ತಮ್ಮ ಸ್ವವಿವರವನ್ನು ನವೆಂಬರ್ 30 ರೊಳಗಾಗಿ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬಾಲರಾಜ್ ಅರಸ್ ರಸ್ತೆ, ಶಿವಮೊಗ್ಗ ಇವರಿಗೆ ಸಲ್ಲಿಸಬಹುದು.

ಈ ಹುದ್ದೆಗಳಿಗೆ ಯಾವುದೇ ವೇತನ, ಭತ್ಯೆಗಳನ್ನು ಪಾವತಿಸಲು ಅವಕಾಶವಿರುವುದಿಲ್ಲ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08182-220925 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+