ಕರ್ನಾಟಕ ಮಾನವ ಹಕ್ಕುಗಳ ಆಯೋಗ; ವಿವಿಧ ಹುದ್ದೆಗೆ ಅರ್ಜಿ ಹಾಕಿ
ಬೆಂಗಳೂರು, ಆಗಸ್ಟ್ 09; ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆದಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಂಡು 4/9/2021ರೊಳಗೆ ತಲುಪುವಂತೆ ಸಲ್ಲಿಕೆ ಮಾಡಬೇಕು.
ರಾಜ್ಯ ಮಾನವ ಹಕ್ಕುಗಳ ಆಯೋಗ ಗುತ್ತಿಗೆ ಆಧಾರದ ಮೇಲೆ ಹಲವು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಈ ನೇಮಕಾತಿಯು 6 ತಿಂಗಳ ಅವಧಿ ಅಥವ ನೇಮಕಾತಿಯಾದವರ ಸೇವೆಯು ತೃಪ್ತಿಕರವೆಂದು ಕಂಡುಬಂದಲ್ಲಿ ಪುನಃ ಮುಂದುವರೆಸುವುದು ಆಯೋಗದ ವಿವೇಚನೆಗೆ ಒಳಪಟ್ಟಿರುತ್ತದೆ.
ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು 1/7/2021ಕ್ಕೆ 62 ವರ್ಷ ವಯೋಮಿತಿ ಒಳಗಿರಬೇಕು. ಈ ನೇಮಕಾತಿಗಳು ತಾತ್ಕಾಲಿಕ ನಿಗದಿತ ಅವಧಿಗೆ ಅಥವ ಸರ್ಕಾರದಿಂದ ನಿಯೋಜನೆ ಮೇರೆಗೆ ಭರ್ತಿಯಾಗುವ ತನಕ ಅಥವ ಸರ್ಕಾರದಿಂದ ಕ್ರಮಬದ್ಧ ನೇಮಕಾತಿ ನಡೆಯುವ ತನಕ ಅಥವ ಆಯೋಗದ ಮುಂದಿನ ಆದೇಶದ ತನಕ ಮಾತ್ರ ಜಾರಿಯಲ್ಲಿರುತ್ತದೆ.

ಈಗಾಗಲೇ ಆಯೋಗಕ್ಕೆ ಯಾವುದೇ ಹುದ್ದೆಗಾಗಿ ನೇರವಾಗಿ ಅರ್ಜಿ ಸಲ್ಲಿಸಿರುವವರೂ ಸಹ ಈ ಪ್ರಕಟಣೆಯನ್ನು ಉಲ್ಲೇಖಿಸಿ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು. ಅವರು ಈಗಾಗಲೇ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ನೇಮಕಾತಿ ಆದೇಶದಲ್ಲಿ ತಿಳಿಸಲಾಗಿದೆ.
ಹುದ್ದೆಗಳ ವಿವರ; ಕೋರ್ಟ್ ಅಧಿಕಾರಿ (1) ಮಾಸಿಕ ವೇತನ 43,100 ರೂ.ಗಳು. ತೀರ್ಪು ಬರಹಗಾರರು (1) ಮಾಸಿಕ ವೇತನ 37,900. ಕಾನೂನು ಸಹಾಯಕರು/ ಸಂಶೋಧನಾ ಸಹಾಯಕರು (2) ಮಾಸಿಕ ವೇತನ 33,450 ರೂ.ಗಳು.
ಶೀಘ್ರಲಿಪಿಗಾರರು (2) ಮಾಸಿಕ ವೇತನ 27,650 ರೂ.ಗಳು. ಸಹಾಯಕರು (1) ಮಾಸಿಕ ವೇತನ 30,350 ರೂ.ಗಳು. ವಾಹನ ಚಾಲಕರು (1) ಮಾಸಿಕ ವೇತನ ರೂ. 21,400 ಆಗಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಪ್ರಪತ್ರದಲ್ಲಿ ಮುಚ್ಚಿದ ಲಕೋಟೆಯಲ್ಲಿ ಅಂಚೆ ಮೂಲಕ ಅಥವ ಇ-ಮೇಲ್ ಮೂಲಕ ಅರ್ಜಿಗಳನ್ನು 4/9/2021ರಂದು ಅಥವ ಅದಕ್ಕಿಂತ ಮುಂಚಿತವಾಗಿ ತಲುಪುವಂತೆ ಸಲ್ಲಿಸಬೇಕು.
ಲಕೋಟೆಯ ಮೇಲೆ 'ಹುದ್ದೆಗಾಗಿ ಅರ್ಜಿ' ಎಂದು ಕಡ್ಡಾಯವಾಗಿ ನಮೂದಿಸಿರಬೇಕು. ಪ್ರಕಟಣೆ ಮತ್ತು ಪ್ರಪತ್ರದ ವಿವರಗಳು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
ಅರ್ಜಿ ಸಲ್ಲಿಕೆ ಮಾಡಲು ವಿಳಾಸ; ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, 5ನೇ ಹಂತ, ಬಹುಮಹಡಿ ಕಟ್ಟಡ, 3ನೇ ಮಹಡಿ, ಬೆಂಗಳೂರು 560001. ಇ-ಮೇಲ್ ವಿಳಾಸ [email protected]
ಅರ್ಜಿ, ವಿದ್ಯಾರ್ಹತೆಗಾಗಿ ವೆಬ್‌ಸೈಟ್ ವಿಳಾಸ
www.kshrc.karnataka.gov.in












Click it and Unblock the Notifications