ಕಲಬುರಗಿ; ಕೆಲಸ ಖಾಲಿ ಇದೆ ಅಕ್ಟೋಬರ್ 15ರೊಳಗೆ ಅರ್ಜಿ ಹಾಕಿ
ಕಲಬುರಗಿ, ಅಕ್ಟೋಬರ್ 06; ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಯೋಜನೆಯನ್ನು ಕಲಬುರಗಿಯ ಸ್ವಯಂ ಸೇವಾ ಸಂಸ್ಥೆಯಾದ ಶ್ರೀ ಗೋಪಾಲದೇವ ಜಾಧವ ಮೇಮೋರಿಯಲ್ ಟ್ರಸ್ಟ್ ವತಿಯಿಂದ ಅನುಷ್ಠಾನಗೊಳಿಸಲು ಸರ್ಕಾರವು ಮಂಜೂರಾತಿ ಕೊಟ್ಟಿದೆ.
ಯೋಜನೆ ಅನುಷ್ಠಾನಕ್ಕಾಗಿ ಕೆಳಕಂಡ ವಿವಿಧ ಹುದ್ದೆಗಳನ್ನು ಜಿಲ್ಲಾ ಸಮಿತಿ ಮೂಲಕ, ತಾತ್ಕಾಲಿಕವಾಗಿ ಗೌರವಧನದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕಲಬುರಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ ಈ ಕುರಿತು ಮಾಹಿತಿ ನೀಡಿದ್ದಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 15ರ ಸಂಜೆ 5.30 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕಿದೆ.

ಹುದ್ದೆಗಳ ವಿವರಗಳು; ಅಕೌಂಟೆಂಟ್ ಕಮ್ ಕ್ಲರ್ಕ್ ಕಮ್ ಸ್ಟೋರ್ ಕೀಪರ್ ಹುದ್ದೆಗೆ ಬಿಕಾಂ ಪದವಿ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಕಂಪ್ಯೂಟರ್ ಅಪರೇಟರ್ ಹುದ್ದೆಗೆ ದ್ವಿತೀಯ ಪಿಯುಸಿ (ಕಂಪ್ಯೂಟರ್ ತರಬೇತಿ ಹೊಂದಿರಬೇಕು) ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ಕಚೇರಿ ಸೇವಕ ಹುದ್ದೆಗೆ ಎಸ್ ಎಸ್ ಎಲ್ ಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಕೃತಕಾಂಗ ಜೋಡಣೆ (ಪಿ ಆಂಡ್ ಒ) ಅಭಿಯಂತರ ಹುದ್ದೆಗೆ ಪಿ ಆಂಡ್ ಒ ಇಂಜಿನಿಯರಿಂಗ್ ಪದವಿ/ ಡಿಪ್ಲೊಮಾದಲ್ಲಿ 2 ರಿಂದ 5 ವರ್ಷಗಳ ಅನುಭವ ಹೊಂದಿರುವವರು ಅರ್ಜಿ ಹಾಕಬಹುದು.
ಲೇದರ್ ವರ್ಕ್/ ಶೂ ಮೇಕರ್ ಹುದ್ದೆಗೆ ಪ್ರಮಾಣಪತ್ರದೊಂದಿಗೆ 2 ವರ್ಷಗಳ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಬೇಕು. ಸ್ಪೀಚ್ ಥೆರಾಫಿಸ್ಟ್ ಮತ್ತು ಆಡಿಯೋಲಾಜಿಸ್ಟ್ ಹುದ್ದೆಗೆ ಬಿ.ಎಸ್.ಸಿ ಇನ್ ಸ್ಪೀಚ್ ಆಂಡ್ ಆಡಿಯೋಲಾಜಿ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬೇಕು.
ಫಿಸಿಯೋಥೇರಾಪಿಸ್ಟ್/ ಅಕ್ಯುಪೇಶನಲ್ ಥೆರಾಪಿಸ್ಟ್ ಹುದ್ದೆಗೆ ಫಿಸಿಯೋಥೇರಾಪಿಸ್ಟ್/ ಅಕ್ಯುಪೇಶನಲ್ ಥೆರಾಪಿ ಪದವಿ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಹಾಕಬಹುದು.
ಮೋಬಿಲಿಟಿ ಇನ್ಸ್‌ಟ್ರಕ್ಟರ್ ಹುದ್ದೆಗೆ ಒ ಆಂಡ್ ಎಮ್ ಪ್ರಮಾಣಿತ ತರಬೇತಿ ಹೊಂದಿರಬೇಕು. ಇಯರ್ ಮೋಲ್ಡ್ ಟೆಕ್ನಿಷಿಯನ್ ಹುದ್ದೆಗೆ ಇಯರ್ ಮೋಲ್ಡ್ ಪ್ರಮಾಣಿತ ತರಬೇತಿ ಹೊಂದಿರಬೇಕು. ಕೀಲು ಮತ್ತು ಮೋಳೆ ತಜ್ಞರು (ಪ್ರತಿ ಭೇಟಿಗೆ 1000 ರೂ. ರಂತೆ ವಾರಕ್ಕೆ 2 ಭೇಟಿ) ಹುದ್ದೆಗೆ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಇನ್ ಆರ್ಥೊಪೆಡಿಕ್ ವಿದ್ಯಾರ್ಹತೆ ಹೊಂದಿರಬೇಕು.
ಆಪ್ತಾಲ್ಮೊಲಾಜಿಸ್ಟ್ (ಪ್ರತಿ ಭೇಟಿಗೆ 1000 ರೂ. ರಂತೆ ವಾರಕ್ಕೆ 2 ಭೇಟಿ) ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಇನ್ ಆಪ್ತಾಲ್ಮೊಲಾಜಿ ವಿದ್ಯಾರ್ಹತೆ ಹೊಂದಿರಬೇಕು. ಇ.ಎನ್.ಟಿ ಸ್ಪೆಷಾಲಿಸ್ಟ್ (ಪ್ರತಿ ಭೇಟಿಗೆ 1000 ರೂ. ರಂತೆ ವಾರಕ್ಕೆ 2 ಭೇಟಿ) ಹುದ್ದೆಗೆ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಇನ್. ಇ. ಎನ್. ಟಿ ವಿದ್ಯಾರ್ಹತೆ ಹೊಂದಿರಬೇಕು.
ಸೈಕಿಯಾಟ್ರಿಸ್ಟ್ (ಪ್ರತಿ ಭೇಟಿಗೆ 1000 ರೂ.ರಂತೆ ವಾರಕ್ಕೆ 2 ಭೇಟಿ) ಹುದ್ದೆಗೆ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಇನ್ ಸೈಕಿಯಾಟ್ರಿ ಮೆಡಿಸೆನ್ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬೇಕು.
ಆಸಕ್ತರು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಎಲ್ಲಾ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಅಕ್ಟೋಬರ್ 15ರ ಸಂಜೆ 5.30ರೊಳಗೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲಾ ಕಚೇರಿಗೆ ಸಲ್ಲಿಸಬೇಕು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲಾ ಕಚೇರಿಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08472-235222, 8217274757ಗೆ ಸಂಪರ್ಕಿಸಲು ಕೋರಲಾಗಿದೆ.











Click it and Unblock the Notifications