ಹೆಚ್‌ಎಂಟಿ ನೇಮಕಾತಿ; ಬೆಂಗಳೂರಲ್ಲಿ ಕೆಲಸಕ್ಕೆ ಅರ್ಜಿ ಹಾಕಿ
ಬೆಂಗಳೂರು, ಡಿಸೆಂಬರ್ 10 : ಹೆಚ್ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಡಿಸೆಂಬರ್ 19ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಜ್ಯೂನಿಯರ್ ಅಸೋಸಿಯೇಟ್ 1, ಫೈನಾನ್ಸ್ ಎಕ್ಸಿಕ್ಯುಟಿವ್ 3 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರು ಮತ್ತು ಕಲಾಮಸ್ಸೇರಿಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕು.
ನೇಮಕಾತಿ ಅಧಿಸೂಚನೆ ಪ್ರಕಾರ ಜ್ಯೂನಿಯರ್ ಅಸೋಸಿಯೇಟ್ ಹುದ್ದೆಗೆ ಬಿ. ಕಾಂ ಪದವಿ, ಫೈನಾನ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಎಂ. ಕಾಂ/ ಎಂಬಿಎ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದೆ.

ಜ್ಯೂನಿಯರ್ ಅಸೋಸಿಯೇಟ್ ಹುದ್ದೆಗೆ ಗರಿಷ್ಠ ವಯೋಮಿತಿ 61 ವರ್ಷ, ಮಾಸಿಕ ವೇತನ 18,500 ರೂ.ಗಳು. ಫೈನಾನ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಗರಿಷ್ಠ ವಯೋಮಿತಿ 30 ವರ್ಷಗಳು. ಮಾಸಿಕ ವೇತನ 16,500 ರಿಂದ17,300 ರೂ.ಗಳು.
ವೆಬ್‌ಸೈಟ್‌ಗೆ ಭೇಟಿ ನೀಡಿದ ಸರಿಯಾದ ಮೊಬೈಲ್ ನಂಬರ್, ಇ-ಮೆಲ್ ಐಡಿ ನೀಡಿ ನೇಮಕಾತಿ ಆದೇಶವನ್ನು ಸರಿಯಾಗಿ ಓದಿಕೊಳ್ಳಿ, ನಿಗದಿತ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿಕೊಳ್ಳಿ. ಅರ್ಜಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ರಿಜಿಸ್ಟರ್/ ಸ್ಪೀಟ್ ಪೋಸ್ಟ್ ಮೂಲಕ ಕಳುಹಿಸಿ.
ಅರ್ಜಿಗಳನ್ನು ಕಳಿಸಲು ವಿಳಾಸ: ಜ್ಯೂನಿಯರ್ ಅಸೋಸಿಯೇಟ್ ಹುದ್ದೆಗೆ ಅರ್ಜಿಯನ್ನು Deputy Manager (HRM), HMT Machine Tools Limited (A Government of India Undertaking) Bangalore Complex, Jalahalli. Bangalore - 560013
ಫೈನಾನ್ಸ್ ಎಕ್ಸಿಕ್ಯೂಟಿವ್ ಹುದ್ದೆಗಳ ಅರ್ಜಿಯನ್ನು HMT Colony P.O, Kalamassery, Ernakulam, Kerala - 683503 ವಿಳಾಸಕ್ಕೆ ಕಳಿಸಬೇಕು.
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್












Click it and Unblock the Notifications