ಚಿತ್ರದುರ್ಗದಲ್ಲಿ ಕೆಲಸ ಖಾಲಿ ಇದೆ; ಅಕ್ಟೋಬರ್ 25ರೊಳಗೆ ಅರ್ಜಿ ಹಾಕಿ

ಚಿತ್ರದುರ್ಗ, ಅಕ್ಟೋಬರ್ 16; ಜಿಲ್ಲಾ ಆಯುಷ್‌ ಅಧಿಕಾರಿಗಳ ಕಛೇರಿ, ಜಿಲ್ಲಾ ಪಂಚಾಯಿತಿ ಆವರಣ ಚಿತ್ರದುರ್ಗ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಆಸಕ್ತರು, ಅರ್ಹರು ಅರ್ಜಿ ಸಲ್ಲಿಕೆ ಮಾಡಲು 25/10/2023 ಸಂಜೆ 5.30 ಕೊನೆಯ ದಿನವಾಗಿದೆ.

ಕೇಂದ್ರ ಪುರಸ್ಕೃತ ಯೋಜನೆಯ ರಾಷ್ಟ್ರೀಯ ಆಯುಷ್‌ ಅಭಿಯಾನದ ಅಡಿಯಲ್ಲಿ ಮೇಲ್ದರ್ಜೆಗೇರಿಸಲಾದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮತ್ತು ಹಿರಿಯೂರು ಸರ್ಕಾರಿ ಆಯುರ್ವೇದ ಆಸ್ಪತ್ರೆಗಳಿಗೆ ಭಾರತ ಸರ್ಕಾರದಿಂದ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ವಿವಿಧ ಹುದ್ದೆಗಳನ್ನು ತಾತ್ಕಾಲಿಕವಾಗಿ ಭರ್ತಿ ಮಾಡಲು ಅನುಮೋದನೆ ಸಿಕ್ಕಿದೆ.

Apply For Various Post At Government Ayurvedic Hospital Chitradurga District

ಈ ಹುದ್ದೆಗಳನ್ನು ಭರ್ತಿ ಮಾಡಲು 2022-23ನೇ ಸಾಲಿನಲ್ಲಿ ರಾಷ್ಟ್ರೀಯ ಆಯುಷ್‌ ಅಭಿಯಾನದ ಕ್ರಿಯಾಯೋಜನೆಯಡಿ ವೇತನ ಅನುದಾನ ಒದಗಿಸಿಕೊಳ್ಳಲಾಗಿದ್ದು, ಪ್ರಸ್ತುತ ಖಾಲಿ ಇರುವ ಹುದ್ದೆಗಳಿಗೆ ಸಮಾಜ ಕಲ್ಯಾಣ ಇಲಾಖೆಯೊಂದಿಗೆ ಸಮನ್ವಯಗೊಂಡು ಜಿಲ್ಲಾ ಆಯುಷ್‌ ಸಮಿತಿಯು ಜಿಲ್ಲಾ ಮಟ್ಟದಲ್ಲಿ ಮೀಸಲಾತಿ ಮತ್ತು ರೋಷ್ಟರ್ ಪರಿಗಣಿಸಿ ನೇಮಕ ಮಾಡಿಕೊಳ್ಳಲಿದೆ.

ಈ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕೇಂದ್ರ ಪುರಸ್ಕೃತಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಹಾಗೂ ಸಂಚಿತ ಮಾಸಿಕ ವೇತನ ಆಧಾರದ ಮೇಲೆ ನೇರ ಸಂದರ್ಶನ ಮೂಲಕ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದೆ.

ಹುದ್ದೆಗಳ ವಿವರಗಳು; ಸರ್ಕಾರಿ ಆಯುರ್ವೇದ ಆಸ್ಪತ್ರೆ, ಚಳ್ಳಕೆರೆಯಲ್ಲಿ ಔಷಧ ವಿತರಕರು 1. ಕ್ಷಾರ ಸೂತ್ರ ಅಟೆಂಡರ್ 1, ಮಲ್ಟಿ ಪರ್ಪಸ್ ವರ್ಕರ್ 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಎಲ್ಲಾ ಹುದ್ದೆಗಳಿಗೆ ವಯೋಮಿತಿ ಕನಿಷ್ಠ 18, ಗರಿಷ್ಠ 40 ವರ್ಷಗಳು. ಔಷಧ ವಿತರಕ ಹುದ್ದೆಗೆ ವೇತನ 27,550 ರೂ.ಗಳು. ಕ್ಷಾರ ಸೂತ್ರ ಅಟೆಂಡರ್ 18,500 ರೂ.ಗಳು. ಮಲ್ಟಿ ಪರ್ಪಸ್ ವರ್ಕರ್ 16,900 ರೂ.ಗಳು.

ಸರ್ಕಾರಿ ಆಯುರ್ವೇದ ಆಸ್ಪತ್ರೆ, ಹಿರಿಯೂರು. ಔಷಧಿ ವಿತರಕರು 1, ಮಸಾಜಿಸ್ಟ್‌ 1, ಮಲ್ಟಿ ಪರ್ಪಸ್ ವರ್ಕರ್ 1. ಔಷಧಿ ವಿತರಕರು, ಮಲ್ಟಿ ಪರ್ಪಸ್ ವರ್ಕರ್ ಹುದ್ದೆಗಳಿಗೆ ಕನಿಷ್ಠ 18 ಮತ್ತು ಗರಿಷ್ಠ 35 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಮಸಾಜಿಸ್ಟ್‌ ಹುದ್ದೆಗೆ 18 ರಿಂದ 40 ವರ್ಷದ ವಯೋಮಿತಿ ಇದೆ.

ಔಷಧಿ ವಿತರಕ ಹುದ್ದೆಗೆ 27,550 ರೂ.ಗಳು. ಮಸಾಜಿಸ್ಟ್‌ ಹುದ್ದೆಗೆ 18,500 ರೂ. ಮತ್ತು ಮಲ್ಟಿ ಪರ್ಪಸ್ ವರ್ಕರ್ ಹುದ್ದೆಗೆ 16,900 ರೂ. ವೇತನವನ್ನು ನಿಗದಿ ಮಾಡಲಾಗಿದೆ.

ಈ ಹುದ್ದೆಗಳಿಗೆ ಅಭ್ಯರ್ಥಿಗಳು ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸಬೇಕು ಹಾಗೂ ಅರ್ಜಿ ನಮೂನೆಗಳನ್ನು ಕಛೇರಿಯಿಂದ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ದಿನಾಂಕ 25/10/2023 ರಂದು ಸಂಜೆ 5.30ರೊಳಗೆ ಜಿಲ್ಲಾ ಆಯುಷ್‌ ಅಧಿಕಾರಿಗಳು, ಜಿಲ್ಲಾ ಆಯುಷ್‌ ಕಛೇರಿ, ಜಿಲ್ಲಾ ಪಂಚಾಯತ್ ಆವರಣ, ಚಿತ್ರದುರ್ಗ ಇಲ್ಲಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08194-234113.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+