ಶಿವಮೊಗ್ಗದಲ್ಲಿ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ

ಶಿವಮೊಗ್ಗ, ಮೇ 16 : ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 25 ಕೊನೆಯ ದಿನವಾಗಿದೆ.

ಶಿವಮೊಗ್ಗ ತಾಲೂಕಿನ ಹನಸವಾಡಿಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ವಿವಿಧ ವಿಷಯಗಳ ಉಪನ್ಯಾಸಕರ ಹುದ್ದೆ ಖಾಲಿ ಇದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಕನ್ನಡ, ಇಂಗ್ಲೀಷ್, ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಗಣಿತ, ಜೀವಶಾಸ್ತ್ರ, ಇತಿಹಾಸ, ವಾಣಿಜ್ಯಶಾಸ್ತ್ರ, ಲೆಕ್ಕಶಾಸ್ತ್ರ ಈ ವಿಷಯಗಳಿಗೆ ಉಪನ್ಯಾಸಕರು ಬೇಕಾಗಿದ್ದಾರೆ. ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೊತ್ತರ ಪದವಿ ಹಾಗೂ ಬಿಎಡ್ ವ್ಯಾಸಂಗ ಮಾಡಿರಬೇಕು.

Shivamogga

ಅರ್ಜಿಯ ಜೊತೆಗೆ ಬಿಎಡ್ ಮತ್ತು ಸ್ನಾತಕೋತ್ತರ ಪದವಿಯ ಅಂಕಪಟ್ಟಿಯನ್ನು ಲಗತ್ತಿಸಲು ಸೂಚನೆ ನೀಡಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 25. ಹೆಚ್ಚಿನ ಮಾಹಿತಿಗಾಗಿ 9591237905 ಅಥವಾ 8971171672 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ವಿವಿಧ ಹುದ್ದೆಗೆ ಅರ್ಜಿ ಹಾಕಿ : ಯುನಿಟ್ ಹೆಡ್ ಕ್ವಾಟರ್ಸ್ ಕೋಟಾದಡಿ ಜಾಟ್ ರೆಜಿಮೆಂಟ್ ಸೆಂಟರ್‌ನಲ್ಲಿ ಸೋಲ್ಜರ್‌ ಕ್ಲರಿಕಲ್/ಎಸ್ ಕೆ ಟಿ, ಸೋಲ್ಜರ್ ಟ್ರೇಡ್‍ಮೆನ್ (ಕ್ರೀಡಾ ಪಟು) ಮತ್ತು ಸೋಲ್ಜರ್ ಟ್ರೇಡ್‍ಮೆನ್ (ಮ್ಯೂಸಿಷಿಯನ್) ಹುದ್ದೆಗಳಿಗಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಮೇ. 27 ರಿಂದ ಮೇ.31 ರವರಗೆ ಜಾಟ್ ರೆಜಿಮೆಂಟ್ ಸೆಂಟರ್, ಬರೇಲಿ, ಉತ್ತರ ಪ್ರದೇಶ ನೇಮಕಾತಿ ನಡೆಯಲಿದೆ. ಸದರಿ ಹುದ್ದೆಗಳಿಗೆ ಕೇವಲ ಜಾಟ್ ರೆಜಿಮೆಂಟ್ ಸೆಂಟರ್‌ ಮಾಜಿ ಸೈನಿಕರ ಅವಲಂಬಿತ ಅಭ್ಯರ್ಥಿಗಳು ಹಾಗೂ ಕ್ರೀಡಾ ಪಟುಗಳು ಅರ್ಹರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+