ಕೊಪ್ಪಳ; ತಾಂತ್ರಿಕ ಸಹಾಯಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೊಪ್ಪಳ, ಆಗಸ್ಟ್ 09; ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿ ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಕೆ ಮಾಡಲು 16/8/2023 ಕೊನೆಯ ದಿನವಾಗಿದೆ.

ಜಿಲ್ಲಾ ಪಂಚಾಯಿತಿ ಕೊಪ್ಪಳ ನರೇಗಾ ಯೋಜನೆಯಡಿ ಮಂಜೂರಾಗಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಹಾಗೂ ಹೊಸದಾಗಿ ತಾಂತ್ರಿಕ ಸಹಾಯಕರು (ಕೃಷಿ), ತಾಂತ್ರಿಕ ಸಹಾಯಕರು (ಅರಣ್ಯ) ಮತ್ತು ತಾಂತ್ರಿಕ ಸಹಾಯಕರು (ರೇಷ್ಮೆ) ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

Apply For Technical Assistant Posts At Koppal

ತಾಂತ್ರಿಕ ಸಹಾಯಕರು (ಕೃಷಿ) 5, ತಾಂತ್ರಿಕ ಸಹಾಯಕರು (ಅರಣ್ಯ) 7, ತಾಂತ್ರಿಕ ತಾಂತ್ರಿಕ ಸಹಾಯಕರು (ರೇಷ್ಮೆ) 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ನರೇಗಾ ಯೋಜನೆ ಅನುಷ್ಠಾನದಲ್ಲಿ ನೆರವು ನೀಡಲು ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ವಿದ್ಯಾರ್ಹತೆ, ವಯೋಮಿತಿ; ತಾಂತ್ರಿಕ ಸಹಾಯಕರು (ಕೃಷಿ) ಹುದ್ದೆಗೆ 21 ರಿಂದ 40 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಕೃಷಿ ವಿಷಯದಲ್ಲಿ ಪದವಿ & ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ. ಸಂಬಂಧಿಸಿದ ಕ್ಷೇತ್ರದಲ್ಲಿ 3 ವರ್ಷದ ಅನುಭವ ಹೊಂದಿರಬೇಕು.
ತಾಂತ್ರಿಕ ಸಹಾಯಕರು (ಅರಣ್ಯ) ಹುದ್ದೆಗೆ 21 ರಿಂದ 40 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಅರಣ್ಯ ವಿಷಯದಲ್ಲಿ ಪದವಿ, ಸಂಬಂಧಿಸಿದ ಕ್ಷೇತ್ರದಲ್ಲಿ 3 ವರ್ಷದ ಅನುಭವ ಇರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯ.

ತಾಂತ್ರಿಕ ತಾಂತ್ರಿಕ ಸಹಾಯಕರು (ರೇಷ್ಮೆ) ಹುದ್ದೆಗೆ ವಯೋಮಿತಿ 21 ರಿಂದ 40 ವರ್ಷಗಳು. ರೇಷ್ಮೆ ವಿಷಯದಲ್ಲಿ ಪದವಿ, ಕಂಪ್ಯೂಟರ್ ಜ್ಞಾನ ಹೊಂದಿರಬೇಕು. 3 ವರ್ಷದ ಅನುಭವ ಅಗತ್ಯ. ವಯೋಮತಿ 21 ರಿಂದ 40 ವರ್ಷಗಳು.

ಆಯ್ಕೆಯಾದ ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಮಾನವ ಸಂಪನ್ಮೂಲ ಸಂಸ್ಥೆಯ ಮೂಲಕ ಸೇವೆಗೆ ಪಡೆಯಲಾಗುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅರ್ಜಿ ನಮೂನೆಯಲ್ಲಿ ನಮೂದಿಸಿರುವ ದಾಖಳೆಗಳಾದ ವಿದ್ಯಾರ್ಹತೆ/ ಸೇವಾ ಅನುಭವಕ್ಕೆ ಸಂಬಂಧಪಟ್ಟ ಎಲ್ಲಾ ಮೂಲ ಪ್ರಮಾಣ ಪತ್ರ/ ದಾಖಲೆಗಳನ್ನು ಪರಿಶೀಲನಾ ಸಮಯದಲ್ಲಿ ಕಡ್ಡಾಯವಾಗಿ ಹಾಜರುಪಡಿಸಬೇಕು. ತಪ್ಪಿದಲ್ಲಿ ಅರ್ಜಿ ತಿರಸ್ಕಾರ ಮಾಡಲಾಗುತ್ತದೆ.

ದಾಖಲಾತಿ ಪರಿಶೀಲನೆಯಲ್ಲಿ ಅರ್ಹಗೊಂಡ ಅಭ್ಯರ್ಥಿಗಳನ್ನು ವಿದ್ಯಾರ್ಹತೆ ಹೊಂದಿದ ಅಂಕಗಳು ಹಾಗೂ ಪಡೆದ ಸೇವಾ ಅನುಭವದ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ತಯಾರಿಸಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಚುರಪಡಿಸಲಾಗುವುದು.

ಸದರಿ ತಾತ್ಕಾಲಿಕ ಮೇರಿಟ್ ಪಟ್ಟಿಗೆ ಆಕ್ಷೇಪಣೆ ಆಹ್ವಾನಿಸಿ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲನೆ ಮಾಡಿ ಅಂತಿಮ ಮೆರಿಟ್ ಪಟ್ಟಿಯನ್ನು ಪ್ರಕಟಣೆಗೊಳಿಸಲಾಗುವುದು. ಅಂತಿಮ ಮೆರಿಟ್ ಪಟ್ಟಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಸಂಬಂಧಪಟ್ಟ ಹುದ್ದೆಗಳ ಅನುಗುಣವಾಗಿ ಆಯ್ಕೆಗೆ ಪರಿಗಣಿಸಲಾಗುವುದು.

ಸಂದರ್ಶನ ಇರುವುದಿಲ್ಲ. ಖಾಲಿ ಹುದಗಳನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಅಧಿಕಾರವು ನೇಮಕಾತಿ ಪ್ರಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿ.ಪಂ. ಕೊಪ್ಪಳ ಹೊಂದಿರುತ್ತಾರೆ. ತಾಂತ್ರಿಕ ಸಹಾಯಕ ಹುದ್ದೆಗೆ ಮಾಸಿಕ ಸಂಭಾವನೆ ರೂ. 24,000 (ಹಾಗೂ ಪ್ರಯಾಣ ಭತ್ಯೆ ರೂ. 2,000 ಗಳು).

ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ ವಿಳಾಸ koppal.nic.in

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+