ವಿವಿಧ ಹುದ್ದೆಗೆ ಅರ್ಜಿ ಕರೆದ ತುಮಕೂರು ಜಿಲ್ಲಾ ಪಂಚಾಯಿತಿ

ತುಮಕೂರು, ಮಾರ್ಚ್ 15; ತುಮಕೂರು ಜಿಲ್ಲಾ ಪಂಚಾಯಿತಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಹೊರ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.

ಆಸಕ್ತ ಅಭ್ಯರ್ಥಿಗಳು ಖುದ್ದಾಗಿ ಅರ್ಜಿಗಳನ್ನು ಮಾರ್ಚ್ 15 ರಿಂದ 30ರ ತನಕ ಕಚೇರಿ ಕೆಲಸದ ದಿನಗಳಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯ ತನಕ ಸಲ್ಲಿಸಬಹು. ತುಮಕೂರು ಜಿಲ್ಲಾ ಪಂಚಾಯತ್‌ನ 2ನೇ ಮಹಡಿಯಲ್ಲಿರುವ ಅಭಿವೃದ್ಧಿ ಶಾಖೆಯಲ್ಲಿ ಅರ್ಜಿ ಸಲ್ಲಿಸಬೇಕು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.

Apply For Taluk Technical Assistant Post In Tumakuru

ಹುದ್ದೆಗಳ ವಿವರ; ತಾಲೂಕು ತಾಂತ್ರಿಕ ಸಹಾಯಕರು 2 ಹುದ್ದೆ (ತೋಟಗಾರಿಕೆ). ವಯೋಮಿತಿ 21-40 ವರ್ಷಗಳು. ಅರ್ಜಿ ಸಲ್ಲಿಸುವವರು ಬಿಎಸ್‌ಸಿ ಫಾರೆಸ್ಟರಿ ವ್ಯಾಸಂಗ ಮಾಡಿರಬೇಕು ಮತ್ತು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 24,000 (ಪ್ರಯಾಣ ಭತ್ಯೆ ಪ್ರತಿ ಕಿ. ಮೀ.ಗೆ 5 ರೂ. ನಂತೆ ಗರಿಷ್ಠ ಮಾಸಿಕ ರೂ. 1,500).

ತಾಲೂಕು ತಾಂತ್ರಿಕ ಸಹಾಯಕರು (ಕೃಷಿ ಮತ್ತು ರೇಷ್ಮೆ) 11 ಹುದ್ದೆಗಳು. ವಯೋಮಿತಿ 21-40 ವರ್ಷಗಳು. ಅಭ್ಯರ್ಥಿಗಳು ಬಿಎಸ್‌ಸಿ ಅಗ್ರಿ, ಬಿಎಸ್‌ಸಿ ಹಾರ್ಟಿಕಲ್ಚರ್ ವಿಷಯ ವ್ಯಾಸಂಗ ಮಾಡಿರಬೇಕು. ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು. ಅಭ್ಯರ್ಥಿಗಳಿಗೆ ಮಾಸಿಕ ವೇತನ 24,000 (ಪ್ರಯಾಣ ಭತ್ಯೆ ಪ್ರತಿ ಕಿ. ಮೀ.ಗೆ 5 ರೂ. ನಂತೆ ಗರಿಷ್ಠ ಮಾಸಿಕ ರೂ. 1,500).

ತಾಲೂಕು ತಾಂತ್ರಿಕ ಸಹಾಯಕರು (ಅರಣ್ಯ) 3 ಹುದ್ದೆಗಳು. ವಯೋಮಿತಿ 21-40 ವರ್ಷಗಳು. ಅಭ್ಯರ್ಥಿಗಳು ಬಿಎಸ್‌ಸಿ ಹಾರ್ಟಿಕಲ್ಚರ್ ವ್ಯಾಸಂಗ ಮಾಡಿರಬೇಕು, ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು. ಮಾಸಿಕ ವೇತನ 24,000 (ಪ್ರಯಾಣ ಭತ್ಯೆ ಪ್ರತಿ ಕಿ. ಮೀ.ಗೆ 5 ರೂ. ನಂತೆ ಗರಿಷ್ಠ ಮಾಸಿಕ ರೂ. 1,500).

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ತುಮಕೂರು ಜಿಲ್ಲಾ ಪಂಚಾಯಿತಿ ವೆಬ್ ಸೈಟ್‌ಗೆ ಭೇಟಿ ನೀಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+