ಕೊಪ್ಪಳ ಕಿಮ್ಸ್‌ನಲ್ಲಿ ಸ್ಟಾಫ್ ನರ್ಸ್ ಹುದ್ದೆಗೆ ಅರ್ಜಿ ಆಹ್ವಾನ
ಕೊಪ್ಪಳ, ಅಕ್ಟೋಬರ್ 27 : ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಖಾಲಿರುವ 120 ಸ್ಟಾಫ್ ನರ್ಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 29, 2015.
ನೇರ ಸಂದರ್ಶನದ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಸಂದರ್ಶನ ನಡೆಯುವ ದಿನಾಂಕ ನವೆಂಬರ್ 5, 2015. ಸಂದರ್ಶನದ ಮೂಲಕ 11 ತಿಂಗಳ ಅವಧಿಗೆ ಅಥವ ಅವಶ್ಯಕತೆಗೆ ಅನುಗುಣವಾಗಿ ನವೀಕರಿಸುವ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. [ನೇಮಕಾತಿ ಆದೇಶ ಓದಿ]

ಒಟ್ಟು ಹುದ್ದೆಗಳು 120. ಜಿಎನ್‌ಎಂ 90, ಬಿಎಸ್ಸಿ ನರ್ಸಿಂಗ್ 30. ವೇತನ ಶ್ರೇಣಿ 10 ಸಾವಿರ ರೂ.ಗಳು. ಈಗಾಗಲೇ ಸ್ಟಾಫ್ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದಲ್ಲಿ ಅವರಿಗೆ ಆದ್ಯತೆ ನೀಡಲಾಗುತ್ತದೆ. ಅರ್ಜಿಗಾಗಿ http://www.kimskoppal.kar.nic.in/ ವೆಬ್ ಸೈಟ್‌ಗೆ ಭೇಟಿ ನೀಡಬಹುದಾಗಿದೆ. [ವೆಬ್ ಸೈಟ್ ವಿಳಾಸ]
ಭರ್ತಿ ಮಾಡಿದ ಅರ್ಜಿಗಳನ್ನು ಸೇವಾ ಶುಲ್ಕ ಮತ್ತು ಡಿಡಿಯೊಂದಿಗೆ ಅಕ್ಟೋಬರ್ 29ರ ಸಂಜೆ 5.30ರೊಳಗೆ ತಲುಪುವಂತೆ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ ಎಂದು ನೇಮಕಾತಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. [ರಾಯಚೂರಿನಲ್ಲಿ ಅ.31ರಂದು ಉದ್ಯೋಗ ಮೇಳ]
ಡಿಡಿಯನ್ನು ನಿರ್ದೇಶಕರು, ಕಿಮ್ಸ್, ಕೊಪ್ಪಳ ಇವರ ಹೆಸರಿಗೆ ತಡೆಯಬೇಕು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು 100 ರೂ., ಓಬಿಸಿ/ಸಾಮಾನ್ಯ ವರ್ಗದವರು 300 ರೂ. ಡಿಡಿ ತೆಗೆದು ಸಲ್ಲಿಸಬೇಕು. [ಶಿವಮೊಗ್ಗ : ಕಂದಾಯ ಇಲಾಖೆಯಲ್ಲಿ ಕೆಲಸ ಖಾಲಿ ಇದೆ]
ಅಕ್ಟೋಬರ್ 29ರೊಳಗೆ ತಲುಪುವಂತೆ ಅರ್ಜಿಗಳನ್ನು ಖುದ್ದಾಗಿ ಅಥವ ಅಂಚೆ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ವಿಳಾಸ : ನಿರ್ದೇಶಕರು, ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಕಾರ್ಯಾಲಯ, ಕೊಪ್ಪಳ.












Click it and Unblock the Notifications