ಶಿವಮೊಗ್ಗ, ದಾವಣಗೆರೆ: ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಹಾಕಿ

ದಾವಣಗೆರೆ, ಜುಲೈ 14: ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ದಾವಣಗೆರೆ, ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ. ಆಸಕ್ತ, ಅರ್ಹರು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು.

ದಾವಣಗೆರೆ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ನೇಮಕಾತಿ ಮಾಡಲು ಕಾನೂನು ಪದವಿ ಪಡೆದ 10 ವರ್ಷಗಳ ಕಾಲ ವಕೀಲ ವೃತ್ತಿ ಸೇವಾನುಭವ ಹೊಂದಿರುವವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಇದು ತಾತ್ಕಾಲಿಕ ಹುದ್ದೆಯಾಗಿರುತ್ತದೆ.

Apply For Post Of Government Advocate At Davanagere And Shivamogga

ಜಿಲ್ಲಾಧಿಕಾರಿಗಳ ಕಚೇರಿ ಕೊಠಡಿ 5ರಲ್ಲಿ ಜೆ. ಹೆಚ್. ಎಂ. ಶಿರಸ್ತೇದಾರರಿಂದ ಅರ್ಜಿ ಪಡೆದು ಇತ್ತೀಚಿನ ಮೂರು ಭಾವಚಿತ್ರ, ಸೇವಾನುಭವ ದೃಢೀಕರಣ ಪತ್ರ, ಬಾರ್ ಕೌನ್ಸಿಲ್ ನೋಂದಣಿ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ, ಪೊಲೀಸ್ ಅಧೀಕ್ಷಕರಿಂದ ಪಡೆದ ಗುಣ, ನಡತೆ ಪ್ರಮಾಣ ಪತ್ರ ಹಾಗೂ ಶೈಕ್ಷಣಿಕ ಅರ್ಹತೆ ದಾಖಲೆಗಳೊಂದಿಗೆ ಜುಲೈ 25 ರೊಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಬಹುದು.

ಹರಿಹರ ಅಪರ ಸರ್ಕಾರಿ ವಕೀಲರ ಹುದ್ದೆ: ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಇದು ತಾತ್ಕಾಲಿಕ ಹುದ್ದೆಯಾಗಿದ್ದು, ಅರ್ಹ ಆಸಕ್ತರು ಅರ್ಜಿಯನ್ನು ಜಿಲ್ಲಾಧಿಕಾರಿ ಕಚೇರಿ ಕೊಠಡಿ ಸಂಖ್ಯೆ 5ರಲ್ಲಿ ಜೆ. ಹೆಚ್. ಎಂ. ಶಿರಸ್ತೇದಾರ್ ಇವರಿಂದ ಪಡೆಯಬಹುದು.

ಅರ್ಜಿ ಸಲ್ಲಿಕೆ ಮಾಡುವವರು 7 ವರ್ಷಗಳ ಕಾಲ ವಕೀಲ ವೃತ್ತಿಯಲ್ಲಿ ಸೇವಾನುಭವ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಶೈಕ್ಷಣಿಕ ಅರ್ಹತೆ ದಾಖಲೆಗಳು, ಗುಣ ನಡತೆ ಪ್ರಮಾಣ ಪತ್ರ ಹಾಗೂ ಅಗತ್ಯ ದಾಖಲೆಗಳೊಂದಿಗೆ ಜುಲೈ 25ರೊಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಬೇಕು.

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ: ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ನೇಮಕ ಮಾಡಲು ಅರ್ಹ ನ್ಯಾಯವಾದಿಗಳಿಂದ ಶಿವಮೊಗ್ಗದಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977ರ ನಿಯಮ 5 ಮತ್ತು 26(2) ಹಾಗೂ 12(ಎ) (ಬಿ) ಮತ್ತು (ಸಿ) ರನ್ವಯ ಅರ್ಜಿ ಕರೆಯಲಾಗಿದೆ.

ಜಿಲ್ಲೆಯ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ಆಯ್ಕೆ ಬಯಸುವವರು 10 ವರ್ಷಗಳ ಕಾಲ ವಕೀಲ ವೃತ್ತಿಯನ್ನು ಪೂರೈಸಿದ ಅನುಭವ ಹೊಂದಿರಬೇಕು. ಆಯ್ಕೆ ಬಯಸುವ ಅರ್ಹ ನ್ಯಾಯವಾದಿಗಳು ವೈಯಕ್ತಿಕ ಮಾಹಿತಿಯೊಂದಿಗೆ ಅರ್ಜಿ ಸಿದ್ದಪಡಿಸಬೇಕು.

ಅರ್ಜಿಯನ್ನು ದಿನಾಂಕ 23/07/2024ರ ಸಂಜೆ 5 ಗಂಟೆಯೊಳಗಾಗಿ ಜಿಲ್ಲಾಧಿಕಾರಿಗಳ ನ್ಯಾಯಾಂಗ ಶಾಖೆಯಲ್ಲಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08182-221100, 08182-221010, 9110642146 ಅನ್ನು ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+