ಫಿಜಿಯೋಥೆರಫಿಸ್ಟ್ ನೇಮಕಾತಿಗೆ ಅರ್ಜಿ ಆಹ್ವಾನ
ದಾವಣಗೆರೆ, ಆಗಸ್ಟ್ 21; ದಾವಣಗೆರೆ ದಕ್ಷಿಣ ವಲಯದಲ್ಲಿ ಖಾಲಿ ಇರುವ ಫಿಜಿಯೋಥೆರಫಿಸ್ಟ್ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 25ರ ಸಂಜೆ 5.30 ಗಂಟೆಯೊಳಗೆ ಅರ್ಜಿ ಸಲ್ಲಿಕೆ ಮಾಡಬಹುದು.
2022-23ನೇ ಸಾಲಿಗೆ ಸಮಗ್ರ ಶಿಕ್ಷಣ ಕರ್ನಾಟಕ ಸಮನ್ವಯ ಶಿಕ್ಷಣದ ಅನುಮೋದನೆ ಚಟುವಟಿಕೆಯಾದ ತೀವ್ರತರ ವಿಕಲತೆ ಹೊಂದಿರುವ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ದೈಹಿಕ ಚಿಕಿತ್ಸೆ ಫಿಜಿಯೋಥೆರಫಿ ಮಾಡಿಸುವ ಅಗತ್ಯತೆ ಇದೆ.
ತ್ರಿಸದಸ್ಯ ಸಮಿತಿ ಕ್ಷೇತ್ರ ಸಂಪನ್ಮೂಲ ಕೇಂದ್ರ, ದಾವಣಗೆರೆ ದಕ್ಷಿಣ ವಲಯದಲ್ಲಿ 1 ಹುದ್ದೆ ಭರ್ತಿ ಮಾಡಲಾಗುತ್ತಿದೆ. ಆಸಕ್ತರು ಡಿಪ್ಲೊಮೋ ಇನ್ ಫಿಜಿಯೋಥೆರಫಿ ಬ್ಯಾಚುಲರ್ ಆಫ್ ಫಿಜಿಯೋಥರಪಿ (ಬಿಪಿಟಿ) ಪಡೆದಿರಬೇಕು.

ಬಿಪಿಟಿ ಪದವಿ ಪಡೆದವರು ಲಭ್ಯವಿಲ್ಲದಿದ್ದಲ್ಲಿ, ನುರಿತ ಅನುಭವವನ್ನು ಡಿಪ್ಲೊಮೋ ಡಿಪ್ಲೊಮೋ ಇನ್ ಫಿಜಿಯೋಥೆರಫಿ (ಡಿಪಿಟಿ) ಪಡೆದವರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಸೂಕ್ತ ವಿದ್ಯಾರ್ಹತೆಯುಳ್ಳ ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 25ರ ಸಂಜೆ 5.30 ಗಂಟೆಯೊಳಗೆ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿಗಳನ್ನು ದಾವಣಗೆರೆ ದಕ್ಷಿಣ ವಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಮೋತಿವೀರಪ್ಪ ಕಾಲೇಜು ಆವರಣ, ವಿಶ್ವೇಶ್ವರಯ್ಯ ಪಾರ್ಕ್ ಇಲ್ಲಿಗೆ ಸಲ್ಲಿಸಬೇಕು.
ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿಗೆ ಅರ್ಜಿಯನ್ನು ಖುದ್ದಾಗಿ/ ಅಂಚೆಯ ಮೂಲಕ ಸಲ್ಲಿಸುವುದು. ಅರ್ಜಿ ನಮೂನೆಯನ್ನು ಬಿ. ಆರ್. ಸಿ ಕಛೇರಿ ದಾವಗೆರೆ ದಕ್ಷಿಣ ವಲಯದಲ್ಲಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9480695178, 9449910879ಕ್ಕೆ ಕರೆ ಮಾಡಬಹುದಾಗಿದೆ.
ಅಂಗನವಾಡಿ ಸಹಾಯಕಿ, ಕಾರ್ಯಕರ್ತೆ; ತೀರ್ಥಹಳ್ಳಿ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ವೆಬ್‍ಸೈಟ್ www.anganwadirecruit.kar.nic.in ನಲ್ಲಿ ಆನ್‍ಲೈನ್ ಮೂಲಕ ಸೆಪ್ಟಂಬರ್ 16ರೊಳಗೆ ಸಲ್ಲಿಸಬೇಕು.
ತೀರ್ಥಹಳ್ಳಿ ತಾಲೂಕು ಶಿಶು ಅಭಿವೃದ್ದಿ ಯೋಜನೆ ವ್ಯಾಪ್ತಿಯಲ್ಲಿ ಚಕ್ಕೋಡುಬೈಲು, ಘಂಟೆಜನಗಲ್ (ಮಿನಿ), ಹಿರೆಕಲ್ಲಳ್ಳಿ (ಮಿನಿ), ಬಿಜ್ಜಳ (ಮಿನಿ) ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಮಿಟ್ಲಗೋಡು, ಬಸವಾನಿ, ತೊರೆಬೈಲು, ಕರಡಿಗ, ಕೋಡ್ಲು, ಕೋಣಂದೂರು-2, ಕೋಳಿಗೆ-1, ಮಲ್ಲೇಸರ, ಶಿರಗಣಿ, ಬೊಬ್ಬಿಹಿಂಚುವಳ್ಳಿ, ಮುತ್ತುವಳ್ಳಿ, ತೂದೂರು-1 ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಹುದ್ದೆ ಖಾಲಿ ಇದೆ. ಆಸಕ್ತ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 08181-295940ಗೆಕರೆ ಮಾಡಬಹುದಾಗಿದೆ.
ಭದ್ರಾವತಿಯಲ್ಲಿ ಕೆಲಸ ಖಾಲಿ ಇದೆ; ಭದ್ರಾವತಿ ಶಿಶು ಅಭಿವೃದ್ದಿ ಯೋಜನೆ ವ್ಯಾಪ್ತಿಯಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ 2 ಅಂಗನವಾಡಿ ಕಾರ್ಯಕರ್ತೆ ಮತ್ತು 16 ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳು ಹನುಮಂತಾಪುರ ಗ್ರಾ.ಪಂ ನ ಕರಡಿ ಕ್ಯಾಂಪ್ ಮೀಸಲಾತಿ ಪ.ಜಾತಿ ಮತ್ತು ಕಾಗೆಕೋಡಮಗ್ಗೆ ಗ್ರಾಮ ಪಂಚಾಯಿತಿ ಬಾಬಳ್ಳಿ ಮುಸ್ಲಿಂ ಕ್ಯಾಂಪ್‌ನಲ್ಲಿ ಖಾಲಿ ಇದೆ.
ಅಂಗನವಾಡಿ ಸಹಾಯಕಿಯರ ಹುದ್ದೆಗಳು ಬಿಳಕಿ ಪ.ಜಾ, ಬಾರಂದೂರು ಇತರೆ, ಕೂಡ್ಲಿಗೆರೆ ಪ.ಜಾ, ಕಂಬದಾಳ್ ಹೊಸೂರು(ಸಿದ್ದರಹಳ್ಳಿ) ಪ.ಜಾ, ಕಂಬದಾಳ್ ಹೊಸೂರು(ತಮ್ಮಡಿಹಳ್ಳಿ) ಇತರೆ, ಕೊಮಾರನಹಳ್ಳಿ ಸಂಜೀವ್‍ನಗರ ಪ.ಜಾ, ನಿಂಬೆಗೊಂದಿ ಪ.ಜಾ, ಮಾರಶೆಟ್ಟಿಹಳ್ಳಿ ಇತರೆ, ಯಡೇಹಳ್ಳಿ ಇತರೆ, ಎರೇಹಳ್ಳಿ(ಎರೇಹಳ್ಳಿ) ಇತರೆ, ಎರೇಹಳ್ಳಿ(ಕೊರಲಕೊಪ್ಪ) ಇತರೆ, ವಾರ್ಡ್ ಸಂಖ್ಯೆ-2, 17 ಮತ್ತು ವಾರ್ಡ್ ಸಂಖ್ಯೆ 18 ಇತರೆ, ವಾರ್ಡ್ ಸಂಖ್ಯೆ -30 ಪ.ಜಾ, ವಾರ್ಡ್ ಸಂಖ್ಯೆ-32ಯಲ್ಲಿ ಅರ್ಜಿ ಸಲ್ಲಿಸಬಹುದು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಖುದ್ದಾಗಿ ಅಥವ ಅಂಚೆ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು ಅವಕಾಶವಿಲ್ಲ.












Click it and Unblock the Notifications