ಬಳ್ಳಾರಿ; ಫಿಜಿಯೋಥೆರಪಿಸ್ಟ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಬಳ್ಳಾರಿ, ನವೆಂಬರ್ 19 : ಬಳ್ಳಾರಿ ಜಿಲ್ಲೆಯಲ್ಲಿ ಖಾಲಿ ಇರುವ ಫಿಜಿಯೋಥೆರಪಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ನವೆಂಬರ್ 25ರಂದು ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದು.

2020-21ನೇ ಸಾಲಿನ ಸಿಡಬ್ಲ್ಯೂಎಸ್‍ಎನ್ ಮಕ್ಕಳಿಗೆ (ವಿಶೇಷ ಮಕ್ಕಳು) ಚಿಕಿತ್ಸೆ ನೀಡಲು ಫಿಜಿಯೋಥೆರಪಿಸ್ಟ್ ಹುದ್ದೆಗೆ ಮತ್ತು ವೈದ್ಯರ ಸಹಾಯಕ್ಕಾಗಿ ಆಯಾ/ ಮಹಿಳಾ ಸಹಾಯಕಿ ಹುದ್ದೆ ಭರ್ತಿ ಮಾಡಲಾಗುತ್ತಿದೆ.

ಹೊರಗುತ್ತಿಗೆ ಆಧಾರದ ಮೇಲೆ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ನೇಮಕಾತಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಫಿಜಿಯೋಥೆರಪಿಸ್ಟ್ ಹುದ್ದೆಗೆ ಬ್ಯಾಚುಲರ್ ಆಫ್ ಫಿಜಿಯೋಥೆರಪಿ/ ಡಿಪ್ಲೊಮಾ ಆಫ್ ಫಿಜಿಯೋಥೆರಪಿ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ.

Apply For Physiotherapist Jobs In Ballari

ಮಹಿಳಾ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸುವವವರು 7ನೇ ತರಗತಿ ಉತ್ತೀರ್ಣರಾಗಿರಬೇಕು.
ನವೆಂಬರ್ ಮತ್ತು ಡಿಸೆಂಬರ್ ಈ ಎರಡು ತಿಂಗಳಿಗೆ ಅನ್ವಯವಾಗುವಂತೆ ಮಾತ್ರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ: ಕ್ಷೇತ್ರ ಸಮನ್ವಯಾಧಿಕಾರಿಗಳು, ಬಿಆರ್‍ಸಿ ಬಳ್ಳಾರಿ, ಪಶ್ಚಿಮ ಕುರುಗೋಡು ವಲಯ, ಕೋಟೆ ಆವರಣ, ಬಳ್ಳಾರಿ.

ಅರ್ಹ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ನವೆಂಬರ್ 25ರಂದು ಬೆಳಗ್ಗೆ 10ಕ್ಕೆ ಅರ್ಜಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9480695067/9480695075 ಸಂಖ್ಯೆಗೆ ಕರೆ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+