ಬೀದರ್‌ನಲ್ಲಿ ಕೆಲಸ ಖಾಲಿ ಇದೆ; ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ

ಬೀದರ್, ನವೆಂಬರ್ 18: ಬೀದರ್ ಜಿಲ್ಲಾ ಕೇಂದ್ರ ಗ್ರಂಥಾಲಯ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಖಾಲಿ ಇರುವ ಮೇಲ್ವಿಚಾರಕ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 18ರ ಸಂಜೆ 5.30ರ ತನಕ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ.

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರಬೇಕು. ಅರ್ಜಿಗಳನ್ನು ಮುಖ್ಯ ಗ್ರಂಥಾಲಯಾಧಿಕಾರಿ ಕಛೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಜನವಾಡ ರೋಡ್, ಬೀದರ್ ಇಲ್ಲಿ ಪಡೆದು ಭರ್ತಿ ಮಾಡಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಓಟರ್ ಐಡಿಯನ್ನು ಸ್ವಯಂ ದೃಢೀಕರಿಸಿ ಲಗತ್ತಿಸಿ ಸಲ್ಲಿಸಬೇಕು.

ಅರ್ಜಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕಛೇರಿಗೆ ಸಲ್ಲಿಸಬೇಕು ಅಥವಾ ಮುಖ್ಯ ಗ್ರಂಥಾಲಯಾಧಿಕಾರಿಗಳ ಕಛೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ ಬೀದರ್ ಇಲ್ಲಿಗೆ ನೇರವಾಗಿ ಇಲ್ಲವೇ ಅಂಚೆ ಮೂಲಕ ಸಲ್ಲಿಸಬಹುದು.

 Apply For Library Supervisor Post At Bidar

ಲಕೋಟೆಯ ಮೇಲೆ ದಪ್ಪ ಅಕ್ಷರದಲ್ಲಿ ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕ ನೇಮಕಾತಿಗಾಗಿ ಅರ್ಜಿ ಎಂದು ನಮೂದಿಸಿ ಸಲ್ಲಿಸಬೇಕು. ಗ್ರಂಥಾಲಯ ಪೀಠೋಪಕರಣ, ಪುಸ್ತಕ ಮತ್ತು ನಿಯತಕಾಲಿಕೆ ಜವಾಬ್ದಾರಿ ಮೇಲ್ವಿಚಾರಕರು ವಹಿಸಬೇಕಾಗುತ್ತದೆ ಹಾಗೂ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 7000 ಗೌರವ ಸಂಭಾವನೆ ನೀಡಲಾಗುತ್ತಿದ್ದು, ನೇಮಕಾತಿ ತಾತ್ಕಾಲಿಕ.

ವಯೋಮಿತಿ : ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು 18 ವರ್ಷ ವಯಸ್ಸು ಪೂರೈಸಿರತಕ್ಕದ್ದು. ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗ 33, 2ಎ/ 2ಬಿ/ 3ಎ/ 3ಬಿ 36 ವರ್ಷ., ಪ.ಜಾತಿ/ ಪ.ಪಂಗಡ/ ಪ್ರವರ್ಗ-1 38 ವರ್ಷ.

ಅಭ್ಯರ್ಥಿಯು ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ನಿಗದಿಪಡಿಸಲಾದ ಮೀಸಲಾತಿಗೆ ಒಳಪಡುವ ಅಭ್ಯರ್ಥಿ ಮಾತ್ರ ಅರ್ಜಿ ಸಲ್ಲಿಸಬೇಕು. ಗ್ರಂಥಾಲಯ ವಿಜ್ಞಾನದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08482-226401.

ಮೀಸಲಾತಿ; ಭಾಲ್ಕಿ ತಾಲೂಕಿನ ಧನ್ನೂರಾ ಗ್ರಾಮ ಪಂಚಾಯಿತಿ ಪರಿಶಿಷ್ಟ ಜಾತಿ, ಬೀದರ್ ತಾಲೂಕಿನ ಗಾದಗಿ ಗ್ರಾಮ ಪಂಚಾಯಿತಿಗೆ ಸಾಮಾನ್ಯ ಅಭ್ಯರ್ಥಿ, ಹುಮನಾಬಾದ ತಾಲೂಕಿನ ಹಳ್ಳೀಖೇಡ (ಕೆ) ಗ್ರಾಮ ಪಂಚಾಯಿತಿಗೆ ಪರಿಶಿಷ್ಟ ಪಂಗಡ., ಮಾಣಿಕನಗರ ಗ್ರಾಮ ಪಂಚಾಯಿತಿಗೆ ಸಾಮಾನ್ಯ ಅಭ್ಯರ್ಥಿ (ಮಹಿಳಾ)., ತಾಳಮಡಗಿ ಗ್ರಾಮ ಪಂಚಾಯಿತಿಗೆ ಸಾಮಾನ್ಯ ಅಭ್ಯರ್ಥಿ (ಗ್ರಾಮೀಣ) ಮತ್ತು ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಪಂಗೆ ಪ್ರವರ್ಗ-1 ಮೀಸಲಾತಿ ನಿಗದಿಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+