ದೆಹಲಿ ಕರ್ನಾಟಕ ಭವನದಲ್ಲಿ ಕೆಲಸ ಖಾಲಿ ಇದೆ; ಮಾ. 31 ಕೊನೆ ದಿನ
ಬೆಂಗಳೂರು, ಫೆಬ್ರವರಿ 24: ನವದೆಹಲಿ ಕರ್ನಾಟಕ ಭವನದಲ್ಲಿ ಖಾಲಿ ಇರುವ ಗ್ರೂಪ್ 'ಸಿ' ಮತ್ತು ಗ್ರೂಪ್ 'ಡಿ' ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತರು ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಮಾರ್ಚ್ 31 ಕೊನೆಯ ದಿನವಾಗಿದೆ.
ಗ್ರೂಪ್ 'ಸಿ' ಅಡಿಯಲ್ಲಿ ಸಹಾಯಕ ವ್ಯವಸ್ಥಾಪಕರು 2, ಸ್ವಾಗತಕಾರರು/ ದೂರವಾಣಿ ಪ್ರವರ್ಧಕರು 3 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಗ್ರೂಪ್ 'ಡಿ' ಅಡಿಯಲ್ಲಿ ಕಿಚನ್ ಮೇಟ್ 9, ಪ್ಯೂನ್ ಕಂ ವಾಚ್ ಮೆನ್ 6, ಗಾರ್ಡನರ್ ಕಂ ಸ್ಟೀವರ್ 2, ರೂಂ ಬಾಯ್ / ಬೇರರ್ 10 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಸಹಾಯಕ ವ್ಯವಸ್ಥಾಪಕ ಹುದ್ದೆಗೆ 27,650 ರಿಂದ 52,650 ರೂ. ವೇತನ, ಸ್ವಾಗತಕಾರರು/ ದೂರವಾಣಿ ಪ್ರವರ್ಧಕ ಹುದ್ದೆಗೆ 21,400 ರಿಂದ 42,000 ರೂ. ವೇತವನ್ನು ನಿಗದಿ ಮಾಡಲಾಗಿದೆ.

ಕಿಚನ್ ಮೇಟ್ ಹುದ್ದೆಗೆ 17,000 ದಿಂದ 28,950 ರೂ., ಪ್ಯೂನ್ ಕಂ ವಾಚ್ ಮೆನ್ 17,000 ದಿಂದ 28,950, ಗಾರ್ಡನರ್ ಕಂ ಸ್ಟೀವರ್, ರೂಂ ಬಾಯ್ / ಬೇರರ್ ಹುದ್ದೆಗಳಿಗೂ ಇದೇ ವೇತನವನ್ನು ನಿಗದಿ ಮಾಡಲಾಗಿದೆ.
ಅರ್ಜಿಗಳನ್ನು ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕು. ಅರ್ಜಿ ಶುಲ್ಕವನ್ನು ಪಾವತಿ ಮಾಡಲು 7/4/2021 ಕೊನೆಯ ದಿನವಾಗಿದೆ. ಅರ್ಜಿಗಳನ್ನು ಸಲ್ಲಿಸುವಾಗ ಅಧಿಸೂಚನೆಯನ್ನು ಕಡ್ಡಾಯವಾಗಿ ಓದಿಕೊಳ್ಳಿ ಎಂದು ಸೂಚನೆ ನೀಡಲಾಗಿದೆ.
ಅಧಿಸೂಚನೆ ಮತ್ತು ಅರ್ಜಿಗಳನ್ನು ಸಲ್ಲಿಸಲು ಕರ್ನಾಟಕ ಭವನದ ವೆಬ್ ಸೈಟ್‌ಗೆ ಭೇಟಿ ನೀಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications