ಬಳ್ಳಾರಿ; ಹೊಲಿಗೆ ತರಬೇತಿ, ಯಂತ್ರ ವಿತರಣೆಗೆ ಅರ್ಜಿ ಆಹ್ವಾನ
ಬಳ್ಳಾರಿ, ಸೆಪ್ಟೆಂಬರ್ 19; ಜಿಲ್ಲಾ ಪಂಚಾಯಿತಿ ಬಳ್ಳಾರಿ ಮಹಿಳಾ ಅಭ್ಯರ್ಥಿಗಳಿಗೆ ಹೊಲಿಗೆ ತರಬೇತಿಗಾಗಿ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಆಹ್ವಾನಿಸಿದೆ. ತರಬೇತಿ ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳಿಗೆ ಉಚಿತ ಸುಧಾರಿತ ಉಪಕರಣ (ವಿದ್ಯತ್ ಚಾಲಿತ) ಹೊಲಿಗೆ ಯಂತ್ರವನ್ನು ನೀಡಲಾಗುತ್ತದೆ.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು (ಪಂಚಾಯತ್ ರಾಜ್) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು ಇವರ ಸುತ್ತೋಲೆಯಂತೆ ಉಪನಿರ್ದೇಶಕರು (ಗ್ರಾ. ಕೈ) ಜಿಲ್ಲಾ ಪಂಚಾಯತ್, ಕೈಗಾರಿಕಾ ವಿಭಾಗ, ಬಳ್ಳಾರಿ ಇವರ 2023-24ನೇ ಸಾಲಿನ ಕ್ರಿಯಾಯೋಜನೆಯಂತೆ ತರಬೇತಿ ನೀಡಲಾಗುತ್ತದೆ.

ಜಿಲ್ಲಾ ವಲಯ ಆರ್.ಎ.ಪಿ ಯೋಜನೆಯಡಿ 26 ಗ್ರಾಮೀಣ ಭಾಗದ ಸಾಮಾನ್ಯ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಹಾಗೂ 4 ಘಟಕ ಯೋಜನೆಯಡಿ (ಎಸ್.ಸಿ.ಪಿ) ಪರಿಶಿಷ್ಟ ಜಾತಿಯ ಒಟ್ಟು 30 ಮಹಿಳಾ ಅಭ್ಯರ್ಥಿಗಳಿಗೆ ಹೊಲಿಗೆ ತರಬೇತಿಗಾಗಿ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಸಲ್ಲಿಕೆ ಮಾಡಲು 6/10/2023 ಕೊನೆಯ ದಿನವಾಗಿದೆ. ಒಂದು ವೇಳೆ 30ಕ್ಕಿಂತ ಅಧಿಕ ಅರ್ಹ ಅರ್ಜಿಗಳು ಸ್ವೀಕೃತಗೊಂಡಲ್ಲಿ ಲಾಟರಿ ಮುಖಾಂತರ 30 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಂಡ್ ಗ್ರಾಮೀಣ ತರಬೇತಿ ಸಂಸ್ಥೆ, ಬಳ್ಳಾರಿ ಇವರ ಮುಖಾಂತರ ಶಿಷ್ಯವೇತನ ರಹಿತ ಉಚಿತ ವಸತಿ ತರಬೇತಿ ಹಮ್ಮಿಕೊಳ್ಳಲಾಗುವುದು. ತರಬೇತಿ ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳಿಗೆ ಉಚಿತ ಸುಧಾರಿತ ಉಪಕರಣ (ವಿದ್ಯತ್ ಚಾಲಿತ ಹೊಲಿಗೆ) ನೀಡಲಾಗುವುದು.
ಅಭ್ಯರ್ಥಿಗೆ ಅರ್ಹತೆಗಳು: ಬಳ್ಳಾರಿ ತಾಲೂಕಿಗೆ 39, ಸಿರುಗುಪ್ಪ 37, ಸಂಡೂರು 37, ಕಂಪ್ಲಿ 37, ಕುರುಗೋಡು 37 ಸೇರಿ ಒಟ್ಟು 187 ಗುರಿಯನ್ನು ಹೊಂದಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 45 ವರ್ಷಗಳು ಇರತಕ್ಕದ್ದು (ಅರ್ಜಿ ಸಲ್ಲಿಸುವ ಮೊದಲನೇ ದಿನಾಂಕ 7/9/2023 ರಂದು). ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ಒಂದು ಕುಟುಂಬಕ್ಕೆ ಒಂದು ಅರ್ಜಿ ಸಲ್ಲಿಸಲು ಮಾತ್ರ ಅವಕಾಶವಿರುತ್ತದೆ.
ಸರ್ಕಾರಿ ನೌಕರರು ಅಥವಾ ಅವರ ಅವಲಂಬಿತರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ವೆಬ್‌ಸೈಟ್ ballari.nic.in ಮುಖಾಂತರ ಅವಶ್ಯಕ ಮಾಹಿತಿ ಭರ್ತಿ ಮಾಡಿ ಮತ್ತು ಸಂಬಂಧಿಸಿದ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸುವುದು.
ಅರ್ಜಿಯೊಂದಿಗೆ ಅಪ್ಲೋಡ್ ಮಾಡಬೇಕಾದ ದಾಖಲಾತಿಗಳು (ಸ್ವಯಂ ದೃಢೀಕೃತ ಪ್ರತಿಗಳು). ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ (In JPG format). ಜನ್ಮ ದಿನಾಂಕ ನಮೂದಿಸಿರುವ ದಾಖಲೆ (ವರ್ಗಾವಣೆ ಪ್ರಮಾಣ ಪತ್ರ/ಎಸ್.ಎಸ್.ಎಲ್.ಸಿ ಅಂಕಪಟ್ಟಿ ಇನ್ನಿತರ ಪ್ರಮಾಣ ಪತ್ರ (In PDF Format).
3) ಶೈಕ್ಷಣಿಕ ಅರ್ಹತೆ (ವರ್ಗಾವಣೆ ಪ್ರಮಾಣ/ ಅಂಕಪಟ್ಟಿ) (In PDF Format). ಜಾತಿ ಪ್ರಮಾಣ ಪತ್ರ (ಪಿಡಿಎಸ್ ಮಾದರಿ). ಪಡಿತರ ಚೀಟಿ (In PDF Format). ಆಯಾ ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಿಂದ ಹೊಲಿಗೆ (ಟೈಲರಿಂಗ್) ವೃತ್ತಿ ಮಾಡುತ್ತಿರುವ ಬಗ್ಗೆ ದೃಢೀಕರಣ ಪ್ರಮಾಣ ಪತ್ರ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು ಗ್ರಾಮೀಣ ಕೈಗಾರಿಕೆ ಅವರ ಕಛೇರಿ ಜಿಲ್ಲಾ ಪಂಚಾಯಿತಿ, ಹೊಸಪೇಟೆ ರಸ್ತೆ, ಬಳ್ಳಾರಿ ಇವರನ್ನು ಸಂಪರ್ಕಿಸಬಹುದು.












Click it and Unblock the Notifications