ಬಾಗಲಕೋಟೆಯಲ್ಲಿ ಕೆಲಸ ಖಾಲಿ ಇದೆ; ವೇತನ 20 ಸಾವಿರ ರೂ.
ಬಾಗಲಕೋಟೆ, ಫೆಬ್ರವರಿ 15; ಬಾಗಲಕೋಟೆಯಲ್ಲಿ ಜಿಲ್ಲಾ ಕಾರ್ಯಕ್ರಮ ಸಹಾಯಕರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಮಾರ್ಚ್ 3, 2021 ಕೊನೆಯ ದಿನವಾಗಿದೆ.
ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಜಿಲ್ಲಾ ಕಾರ್ಯಕ್ರಮ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. 11 ತಿಂಗಳ ಅವಧಿಗೆ ಅಥವ ಯೋಜನೆ ಜಾರಿಯಲ್ಲಿರುವ ತನಕ ಹುದ್ದೆಯ ಅವಧಿ ಇರಲಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 18 ವರ್ಷ, ಗರಿಷ್ಟ 35 ವರ್ಷಗಳು. ಅರ್ಜಿ ಹಾಕುವವರು ಸಮಾಜ ವಿಜ್ಞಾನ, ಸಮಾಜ ಕಾರ್ಯ, ಗ್ರಾಮೀಣ ನಿರ್ವಹಣೆ ಹಾಗೂ ಸಂಖ್ಯಾಶಾಸ್ತ್ರದಲ್ಲಿ ಪದವಿ ಪಡೆದಿರಬೇಕು.

ಸರ್ಕಾರಿ ಅಥವ ಸ್ವಯಂ ಸೇವಾ ಸಂಸ್ಥೆಯಲ್ಲಿ ಕನಿಷ್ಠ 1 ವರ್ಷ ಕಾರ್ಯಾನುಭವ ಹೊಂದಿರಬೇಕು. ಕಂಪ್ಯೂಟರ್‌ನಲ್ಲಿ ಎಂಎಸ್ ಆಫೀಸ್, ಡೇಟಾ ಎಂಟ್ರಿ ಆಪರೇಟಿಂಗ್ ತಿಳಿದಿರಬೇಕು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 20,000 ಗೌರವಧನ ನೀಡಲಾಗುತ್ತದೆ. ಅರ್ಜಿಯನ್ನು ಮಾರ್ಚ್ 3, 2021ರೊಳಗೆ ಅಗತ್ಯ ದಾಖಲೆಗಳ ಜೊತೆ ಸಲ್ಲಿಸಬೇಕು.
ವಿಳಾಸ; ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಗಲಕೋಟೆ.












Click it and Unblock the Notifications