ಬಳ್ಳಾರಿ; ಕುಡತಿನಿ ಪಟ್ಟಣ ಪಂಚಾಯಿತಿಯಲ್ಲಿ ಕೆಲಸ ಖಾಲಿ ಇದೆ

ಬಳ್ಳಾರಿ, ಜನವರಿ 20; ಬಳ್ಳಾರಿ ಜಿಲ್ಲೆಯ ಕುಡತಿನಿ ಪಟ್ಟಣ ಪಂಚಾಯಿತಿಯಲ್ಲಿ ಕೆಲಸ ಖಾಲಿ ಇದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜನವರಿ 25ರ ತನಕ ಅರ್ಜಿಗಳನ್ನು ಸಲ್ಲಿಸಬಹುದು.

ಕುಡತಿನಿ ಪಟ್ಟಣ ಪಂಚಾಯಿತಿ ವತಿಯಿಂದ ಕೌಶಲ್ಯಾಭಿವೃಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿ ದೀನ್‍ದಯಾಳ್ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಲ್ಲಿ ಕಾರ್ಯ ನಿರ್ವಹಣೆ ಮಾಡಲು ಹುದ್ದೆ ಭರ್ತಿ ಮಾಡಲಾಗುತ್ತಿದೆ.

ಡೇ-ನಲ್ಮ್ ಯೋಜನೆಯಲ್ಲಿ ಕಾರ್ಯ ನಿರ್ವಹಿಸಲು ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳನ್ನು ಸೃಜಿಸಿ ಗೌರವಧನ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅರ್ಹ ಸ್ವ-ಸಹಾಯ (ಗುಂಪು) ಗಳ ಸದಸ್ಯರು ಅರ್ಜಿ ಸಲ್ಲಿಕೆ ಮಾಡಬಹುದು.

Apply For Community Resource Person Post At Kudithini

ಆಯ್ಕೆ ಸಮಿತಿಯು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಸಮಿತಿಯ ನಿರ್ಣಯವೇ ಅಂತಿಮವಾಗಿರುತ್ತದೆ ಎಂದು ಕುಡುತಿನಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿವರಗಳು; ಸಮುದಾಯ ಸಂಪನ್ಮೂಲ ವ್ಯಕ್ತಿ (1) ಹುದ್ದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಗೌರವಧನ 8 ಸಾವಿರ ರೂ., ಸಾರಿಗೆ ಭತ್ಯೆ 2 ಸಾವಿರ ರೂ. ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ ಜನವರಿ 25. ಕುಡತಿನಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗುಂಪಿನ ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕುಡತಿನಿ ಪಟ್ಟಣ ಪಂಚಾಯಿತಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

ವಾಯು ಸೇನೆಯ ಹುದ್ದೆಗಳಿಗೆ ನೇರ ನೇಮಕಾತಿ; ಭಾರತೀಯ ವಾಯುಪಡೆಯು ಭಾರತೀಯ ಮತ್ತು ಗೂರ್ಖಾ (ನೇಪಾಳ) ಪುರುಷ ಅಭ್ಯರ್ಥಿಗಳಿಂದ ಭಾರತೀಯ ವಾಯುಪಡೆಯ ವೈ (ತಾಂತ್ರಿಕೇತರ) ಗುಂಪಿನಲ್ಲಿ ವೈದ್ಯಕೀಯ ಸಹಾಯಕ ಮತ್ತು ವೈದ್ಯಕೀಯ ಸಹಾಯಕ (ಫಾರ್ಮಸಿ) ಗುಂಪಿನಲ್ಲಿ ಏರ್‌ಮ್ಯಾನ್ ಹುದ್ದೆಗಳ ನೇಮಕಾತಿಗೆ ಫೆಬ್ರವರಿ 4 ಮತ್ತು 7 ರಂದು ಚೆನ್ನೈನ ಏರ್‌ಫೋರ್ಸ್ ಸ್ಟೇಷನ್ ತಾಂಬರ್ ನಲ್ಲಿ ನೇರ ನೇಮಕಾತಿ ನಡೆಯಲಿದೆ.

ಅರ್ಹ ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ವೈದ್ಯಕೀಯ ಸಹಾಯಕ ಹುದ್ದೆಗೆ ಅಭ್ಯರ್ಥಿಯು ಅವಿವಾಹಿತರಾಗಿರಬೇಕು ಮತ್ತು 27 ಜೂನ್ 2002 ಮತ್ತು 27 ಜೂನ್ 2006ರ ನಡುವೆ ಜನಿಸಿದವರಾಗಿರಬೇಕು.

ವೈದ್ಯಕೀಯ ಸಹಾಯಕ (ಫಾರ್ಮಸಿ) ಹುದ್ದೆಗೆ ಫಾರ್ಮಸಿಯಲ್ಲಿ ಡಿಪ್ಲೋಮಾ ಅಥವಾ ಬಿ.ಎಸ್ಸಿ ಪದವೀಧರರಾಗಿರಬೇಕು ಹಾಗೂ ಅವಿವಾಹಿತ ಅಭ್ಯರ್ಥಿಯು 27 ಜೂನ್ 1999 ಮತ್ತು 27 ಜೂನ್ 2004 ರ ನಡುವೆ ಮತ್ತು ವಿವಾಹಿತ ಅಭ್ಯರ್ಥಿಯು 27 ಜೂನ್ 1999 ಮತ್ತು 27 ಜೂನ್ 2002 ರ ನಡುವೆ ಜನಿಸಿರಬೇಕು.

ಹೆಚ್ಚಿನ ವಿವರಗಳಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಉಡುಪಿ ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 9945856670, 8197440155.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+