ಟೈಪಿಸ್ಟ್, ಕಾರ್ಯದರ್ಶಿ ಹುದ್ದೆಗಳಿಗೆ ಕರ್ನಾಟಕ ಹೈಕೋರ್ಟ್ ಅರ್ಜಿ ಆಹ್ವಾನ
ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹಾಗೂ ಬೆರಳಚ್ಚುಗಾರ (ಟೈಪಿಸ್ಟ್) ಹುದ್ದೆಗೆ ಕರ್ನಾಟಕ ಹೈಕೋರ್ಟ್ ಅರ್ಜಿಗಳನ್ನು ಆಹ್ವಾನಿಸಿದೆ. ಆನ್ ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಲು ಏಪ್ರಿಲ್ 30, 2017 ಕೊನೆಯ ದಿನವಾಗಿದೆ.
ಬೆಂಗಳೂರು, ಏಪ್ರಿಲ್ 3: ಕರ್ನಾಟಕ ಹೈಕೋರ್ಟಿನಲ್ಲಿ ಕೆಲಸ ಮಾಡುವ ಆಸೆ ನಿಮಗಿದೆಯಾ? ಹಾಗಿದ್ದರೆ ಇಲ್ಲೊಂದು ಅವಕಾಶ ನಿಮಗಿದೆ.
ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹಾಗೂ ಬೆರಳಚ್ಚುಗಾರ (ಟೈಪಿಸ್ಟ್) ಹುದ್ದೆಗೆ ಕರ್ನಾಟಕ ಹೈಕೋರ್ಟ್ ಅರ್ಜಿಗಳನ್ನು ಆಹ್ವಾನಿಸಿದೆ. ಆನ್ ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಲು ಏಪ್ರಿಲ್ 30, 2017 ಕೊನೆಯ ದಿನವಾಗಿದೆ. ಕರ್ನಾಟಕ ಹೈಕೋರ್ಟಿನ ಅಧಿಕೃತ ವೆಬ್ ತಾಣದಲ್ಲೇ ಅರ್ಜಿಗಳನ್ನು ಸಲ್ಲಿಸಬೇಕು.[ಲಕ್ಷ್ಮೀ ವಿಲಾಸ್ ಬ್ಯಾಂಕಿನಲ್ಲಿ ಪ್ರೊಬೇಷನರಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ]

ಹುದ್ದೆಯ ವಿವರಗಳು
ಸಹಾಯಕ ನ್ಯಾಯಾಲಯ ಕಾರ್ಯದರ್ಶಿ : 42 ಹುದ್ದೆ
ಬೆರಳಚ್ಚುಗಾರ (ಟೈಪಿಸ್ಟ್) : 34 ಹುದ್ದೆ
ಶೈಕ್ಷಣಿಕ ಅರ್ಹತೆಗಳು
ಸಹಾಯಕ ನ್ಯಾಯಾಲಯ ಕಾರ್ಯದರ್ಶಿ: ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಕಡ್ಡಾಯವಾಗಿ ಪಾಸ್ ಆಗಿರಬೇಕು. ಇಂಗ್ಲೀಷ್ ಶಾರ್ಟ್ ಹ್ಯಾಂಡ್ ನಲ್ಲಿ ಸೀನಿಯರ್ ಗ್ರೇಡ್ ಅಥವಾ ಫ್ರೊಫಿಶಿಯನ್ಸಿ ಗ್ರೇಡ್ ಪರೀಕ್ಷೆ ಪಾಸ್ ಆಗಿರಬೇಕು. ಟೈಪ್ ರೈಟಿಂಗ್ ನಲ್ಲಿ ಸೀನಿಯರ್ ಗ್ರೇಡ್ ಪರೀಕ್ಷೆ ಅಥವಾ ಕಮರ್ಷಿಯಲ್ ಪ್ರಾಕ್ಟೀಸ್/ ಸೆಕ್ರೇಟೇರಿಯಲ್ ಪ್ರಾಕ್ಟೀಸ್ ನಲ್ಲಿ ಡಿಪ್ಲೊಮಾ ಮುಗಿಸಿರಬೇಕು. ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ಇರಬೇಕು.[ಸಿಆರ್ ಪಿಎಫ್ ಕಾನ್ಸ್ ಟೇಬಲ್, ಎಸ್ ಐ, ಹುದ್ದೆಗಳಿಗೆ ಅರ್ಜಿ ಆಹ್ವಾನ]
ಬೆರಳಚ್ಚುಗಾರ (ಟೈಪಿಸ್ಟ್): ವಿಜ್ಞಾನ/ಕಲೆ/ವಾಣಿಜ್ಯ/ಬಿಸಿನೆಸ್ ಮ್ಯಾನೇಜ್ಮೆಂಟ್/ಕಂಪ್ಯೂಟರ್ ಅಪ್ಲಿಕೇಷನ್ ವಿಷಯಗಳಲ್ಲಿ ಕನಿಷ್ಟ 55 ಶೇಕಡಾ ಅಂಕಗಳೊಂದಿಗೆ ಪದವಿ ಪಡೆದಿರಬೇಕು. ಕನ್ನಡ ಮತ್ತು ಇಂಗ್ಲೀಷ್ ಟೈಪ್ ರೈಟಿಂಗ್ ನಲ್ಲಿ ಸೀನಿಯರ್ ಗ್ರೇಡ್ ಪರೀಕ್ಷೆ ಪಾಸಾಗಿರಬೇಕು ಜತೆಗೆ ಕಂಪ್ಯೂಟರ್ ಜ್ಞಾನವೂ ಇರಬೇಕು.[ಟೈಪಿಸ್ಟ್, ಕಾರ್ಯದರ್ಶಿ ಹುದ್ದೆಗೆ ಅರ್ಜಿ ಆಹ್ವಾನ]
18-35 ವರ್ಷದೊಳಗಿನವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇನ್ನು ಕೆಲವು ಜಾತಿ ಮತ್ತು ಧರ್ಮದ ಅಭ್ಯರ್ಥಿಗಳಿಗೆ ವಯಸ್ಸಿನಲ್ಲಿ ವಿನಾಯಿತಿ ಇದೆ.
ಅರ್ಜಿ ಶುಲ್ಕ: ಅಭ್ಯರ್ಥಿಗಳು 250 ರೂಪಾಯಿಗಳನ್ನು ಡೆಪಾಸಿಟ್ ಮಾಡಬೇಕು. (ಎಸ್.ಸಿ/ಎಸ್.ಟಿ/ವಿಕಲಚೇತನ/ಪ್ರವರ್ಗ 1 ರ ಅಭ್ಯರ್ಥಿಗಳಿಗೆ ರೂ. 100)
ಅರ್ಜಿ ಸಲ್ಲಿಸಲು ಕೊನೆಯ ದಿನ: 30 ಏಪ್ರಿಲ್ 2017,
ಹಣ ತುಂಬಲು ಕೊನೆ ದಿನ (ಚಲನ್ ಮತ್ತು ಆನ್ ಲೈನ್): ಮೇ 4, 2017











Click it and Unblock the Notifications