ಅಪ್ರೆಂಟೀಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆದ ಬೆಸ್ಕಾಂ
ಬೆಂಗಳೂರು, ಆಗಸ್ಟ್ 16 : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಪ್ರೆಂಟೀಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು 31/8/2019 ಕೊನೆಯ ದಿನವಾಗಿದೆ.
ಬೆಸ್ಕಾಂ ರಾಷ್ಟ್ರೀಯ ಶಿಶಿಕ್ಷು (ಅಪ್ರೆಂಟೀಸ್) ತರಬೇತಿ ಯೋಜನೆಯಡಿ 2019-20ನೇ ಸಾಲಿನ ಒಂದು ವರ್ಷದ ಅವಧಿಯ ಇಂಜಿನಿಯರಿಂಗ್ ಪದವೀಧರ ಹಾಗೂ 3 ವರ್ಷದ ಡಿಪ್ಲೋಮಾ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ತರಬೇತಿಗೆ ಅರ್ಜಿಗಳನ್ನು ಕರೆದಿದೆ.
ಇಂಜಿನಿಯರಿಂಗ್ ಪದವೀಧರ (ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್, ಇನ್‌ಫರ್‌ಮೇಶನ್ ಟೆಕ್ನಾಲಜಿ, ಸಿವಿಎಲ್, ಇನ್‌ಸ್ಟ್ರುಮೆಂಟೆಶನ್ ಟೆಕ್ನಾಲಜಿಯಲ್ಲಿ ಪದವಿ ಪಡೆದಿರಬೇಕು.

3 ವರ್ಷ ಡಿಪ್ಲೋಮಾದವರು (ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್, ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೋಮಾ ಸರ್ಟಿಫಿಕೇಟ್ ಹೊಂದಿರಬೇಕು)
ವೇತನ ಶ್ರೇಣಿ : ತರಬೇತಿ ಅವಧಿಯಲ್ಲಿ ಶಿಶಿಕ್ಷುಗಳು ಮಾಸಿಕ 7000 (ಇಂಜಿನಿಯರಿಂಗ್) ಹಾಗೂ 5000 (ಡಿಪ್ಲೋಮಾ) ವೇತನ ಪಡೆಯಲು ಅರ್ಹರಾಗಿರುತ್ತಾರೆ.
ಅರ್ಹತೆಗಳು
* ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರರು/ ಡಿಪ್ಲೋಮಾದವರಿಗೆ ಆದ್ಯತೆ
* ಅಭ್ಯರ್ಥಿಗಳಿಗೆ ಕನ್ನಡ ಓದಲು ಮತ್ತು ಬರೆಯಲು ಕಲಿತಿರಬೇಕು
* ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ
* ಆರೋಗ್ಯವಂತ, ದೃಡಕಾಯ ಅಭ್ಯರ್ಥಿಗಳಿಗೆ ಆದ್ಯತೆ
* ತರಬೇತಿ ಅವಧಿಯಲ್ಲಿ ಊಟ/ವಸತಿ ವ್ಯವಸ್ಥೆಯನ್ನು ಅಭ್ಯರ್ಥಿ ಸ್ವಂತ ಖರ್ಚಿನಲ್ಲಿ ಮಾಡಿಕೊಳ್ಳಬೇಕು
* ತರಬೇತಿ ಸಂಸ್ಥೆಯ ನಿಯಮ ಮತ್ತು ಶಿಸ್ತು ಪಾಲಿಸಬೇಕು
* 2017/2018/2019ರಲ್ಲಿ ಇಂಜಿನಿಯರಿಂಗ್, ಡಿಪ್ಲೋಮಾ ಪಾಸಾಗಿರಬೇಕು
* ಈಗಾಗಲೇ ತರಬೇತಿ ಪಡೆದವರು ತರಬೇತಿಗೆ ಅನರ್ಹರು
ಅರ್ಜಿ ಸಲ್ಲಿಸುವುದು ಹೇಗೆ? : ಪೂರ್ಣ ವಿವರ ಇರುವ ಸ್ವಂತ ಅಥವ ಬೆರಳಚ್ಚು ಮಾಡಿದ ಅರ್ಜಿಗಳನ್ನು ಎಲ್ಲಾ ದಾಖಲಾತಿಗಳ ಜೊತೆ ಸಲ್ಲಿಸಬೇಕು. ಅರ್ಜಿಯ ಕವರ್ ಮೇಲೆ ಇಂಜಿನಿಯರಿಂಗ್ ಅಥವ ಡಿಪ್ಲೋಮಾ ಎಂದು ಸ್ಪಷ್ಟವಾಗಿ ಬರೆದಿರಬೇಕು.
ವಿಳಾಸ : ಉಪ ಪ್ರಧಾನ ವ್ಯವಸ್ಥಾಪಕರು, ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, ಬೆ.ವಿ.ಕಂ, ಕ್ರೆಸೆಂಟ್ ಟವರ್ಸ್, ಕ್ರೆಸೆಂಟ್ ರೋಡ್, ಮಲ್ಲಿಗೆ ನರ್ಸಿಂಗ್ ಹೋಂ ಹತ್ತಿರ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು 560001.
ಇಂಜಿನಿಯರ್ ಪದವೀಧರ 325, ಡಿಪ್ಲೋಮಾ ಪದವೀಧರ 75 ಜನರನ್ನು ತರಬೇತಿಗಾಗಿ ಆಯ್ಕೆ ಮಾಡಲಾಗುತ್ತದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಲು 31/8/2019 ಸಂಜೆ 4 ಗಂಟೆ ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications