ಭಾರತೀಯ ರೈಲ್ವೆ 374 ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಹಾಕಿ
ಬೆಂಗಳೂರು, ನವೆಂಬರ್ 01 : ಭಾರತೀಯ ರೈಲ್ವೆ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 21, 2019 ಕೊನೆಯ ದಿನವಾಗಿದೆ.
ರೈಲ್ವೆ ಇಲಾಖೆ ವಾರಣಾಸಿ ಡೀಸೆಲ್ ಲೋಕೋಮೋಟೀವ್ ವರ್ಕ್‌ನಲ್ಲಿ 374 ಅಪೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಐಟಿಐ ಕೆಟಗರಿಗೆ 300, ನಾನ್-ಐಟಿಐ ಕೆಟಗರಿಗೆ 74 ಹುದ್ದೆಗಳಿವೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಐಟಿಐ ಕೆಟಗರಿಯಲ್ಲಿ ಫಿಟ್ಟರ್ 107, ಕಾರ್ಪೆಂಟರ್ 3, ಪೇಂಟರ್ 7, ಮಷಿನಿಷ್ಟ್ 67, ವೆಲ್ಡರ್ 45, ಎಲೆಕ್ಟ್ರಿಷಿಯನ್ 71 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆಯೂ ಇದೆ.

ನಾನ್-ಐಟಿಐ ಕೆಟಗರಿಯಲ್ಲಿ ಫಿಟ್ಟರ್ 30, ಮಷಿನಿಸ್ಟ್ 15, ವೆಲ್ಡರ್ 11, ಎಲೆಕ್ಟ್ರಿಷಿಯನ್ 18 ಸೇರಿ ಒಟ್ಟು 74 ಹುದ್ದೆಗಳಿವೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ವಯೋಮಿತಿ ವಿವರ : ನಾನ್ ಐಟಿಐ ಹುದ್ದೆಗಳಿಗೆ ಕನಿಷ್ಠ 15 ವರ್ಷ, ಗರಿಷ್ಠ 22 ವರ್ಷ. ಐಟಿಐ ಕೆಟಗರಿಗೆ ಕನಿಷ್ಠ 15 ವರ್ಷ. ಗರಿಷ್ಠ 24 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.
ವಿದ್ಯಾರ್ಹತೆ : ನಾನ್ ಐಟಿಐ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್‌ಎಸ್‌ಎಲ್‌ಸಿ ಅಥವ ತತ್ಸಮಾನ ವಿದ್ಯಾರ್ಹತೆಯನ್ನು ಶೇ 50ರಷ್ಟು ಅಂಕಗಳೊಂದಿಗೆ ಪಡೆದಿರಬೇಕು. ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಶೇ 40ರಷ್ಟು ಅಂಕ ಪಡೆದಿರಬೇಕು.
ಐಟಿಐ ಕೆಟಗರಿಗೆ ಸಂಬಂಧಿಸಿದ ಟ್ರೇಡ್‌ಗಳಲ್ಲಿ ಐಟಿಐ ವಿದ್ಯಾರ್ಹತೆ ಪಡೆದಿರಬೇಕು. ಎನ್‌ಸಿವಿಟಿ, ಎಸ್‌ಸಿವಿಟಿ ಮತ್ತು ಅಧಿಕೃತ ಸಂಸ್ಥೆಗಳಲ್ಲಿ ಐಟಿಐ ಪಾಸ್ ಆದ ಪ್ರಮಾಣ ಪತ್ರ ಹೊಂದಿರಬೇಕು.
ಅರ್ಜಿ ಸಲ್ಲಿಸಲು ವಿಳಾಸ












Click it and Unblock the Notifications