ಕೆಪಿಟಿಸಿಎಲ್ ಅಪ್ರೆಂಟಿಸ್ ತರಬೇತಿ; ಅ. 16ರೊಳಗೆ ಅರ್ಜಿ ಹಾಕಿ

ಬೆಂಗಳೂರು, ಸೆಪ್ಟೆಂಬರ್ 30: ಕರ್ನಾಟಕದ ಸರ್ಕಾರದ ಒಂದು ಉದ್ದಿಮೆಯಾದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಒಂದು ವರ್ಷದ ಅಪ್ರೆಂಟಿಸ್ ತರಬೇತಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಶರಾವತಿ ಯೋಜನಾ ಪ್ರದೇಶದ ವಿವಿಧ ವಿದ್ಯುದಾಗಾರಗಳಲ್ಲಿ/ ಕಚೇರಿಗಳಲ್ಲಿ ಅಪ್ರೆಂಟಿಸ್ ಕಾಯ್ದೆ 1961ರ ಪ್ರಕಾರ ಒಂದು ವರ್ಷದ ಅವಧಿಗೆ ಶಿಶಿಕ್ಷು ತರಬೇತಿಗಾಗಿ ಅರ್ಜಿಗಳನ್ನು ಕರೆಯಲಾಗಿದೆ. ಅಭ್ಯರ್ಥಿಗಳು 16/10/2021ರೊಳಗೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಕೈಗಾರಿಕಾ ತರಬೇತಿ ಕೇಂದ್ರದಿಂದ ವಿವಿಧ ವೃತ್ತಿಗಳಲ್ಲಿ ಐಟಿಐ ತೇರ್ಗಡೆಯಾಗಿರಬೇಕು. ನಿಗಮ ನಿಯಮಾವಳಿ ಪ್ರಕಾರ ಶಿಶಿಕ್ಷುಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ ವಯೋಮಿತಿ 18 ವರ್ಷಗಳು. ಗರಿಷ್ಠ ವಯೋಮಿತಿ ನಿಗಮದ ನಿಯಮಾವಳಿ ಅನ್ವಯ ಪರಿಗಣಿಸಲಾಗುತ್ತದೆ.

Apply For 64 Apprenticeship Post At KPTCL

ಆಯ್ಕೆಯಾದ ಐಟಿಐ ವಿದ್ಯಾರ್ಹತೆ ಹೊಂದಿದ ಶಿಶಿಕ್ಷುಗಳಿಗೆ ತರಬೇತಿ ಅವಧಿಯಲ್ಲಿ ತಿಂಗಳಿಗೆ 10,000 ರೂ. ಶಿಷ್ಯ ವೇತನವನ್ನು ನೀಡಲಾಗುತ್ತದೆ. ನಿಗದಿತ ಅವಧಿ ಮುಗಿದ ನಂತರ ಶಿಶಿಕ್ಷುಗಳನ್ನು ತರಬೇತಿಯಿಂದ ಕಾರ್ಯ ಮುಕ್ತಿಗೊಳಿಸಲಾಗುತ್ತದೆ. ಒಟ್ಟು ಭರ್ತಿ ಮಾಡುತ್ತಿರುವ ಹುದ್ದೆಗಳು 64 ಆಗಿದೆ.

ಎಲೆಕ್ಟ್ರೀಶಿಯನ್ (19) ಹುದ್ದೆಗೆ 10ನೇ ತರಗತಿ ಮತ್ತು ಐಟಿಐ ಎಲೆಕ್ಟ್ರೀಶಿಯನ್ ಕನಿಷ್ಠ ವಿದ್ಯಾರ್ಹತೆಯಾಗಿದೆ. ಫಿಟ್ಟರ್ (06) ಹುದ್ದೆಗೆ 10ನೇ ತರಗತಿ ಮತ್ತು ಐಟಿಐ (ಫಿಟ್ಟರ್). ಪಾಸಾ (10) ಹುದ್ದೆಗೆ 10ನೇ ತರಗತಿ ಮತ್ತು ಐಟಿಐ (ಸಿಓಪಿಎ). ಡೀಸೆಲ್ ಮೆಕ್ಯಾನಿಕ್ (08) ಹುದ್ದೆಗೆ 10ನೇ ತರಗತಿ ಮತ್ತು ಐಟಿಐ (ಡಿಎಂ) ವಿದ್ಯಾರ್ಹತೆ ನಿಗದಿ ಮಾಡಲಾಗಿದೆ.

ಮೆಷಿನಿಷ್ಟ್ (4) ಹುದ್ದೆಗೆ 10ನೇ ತರಗತಿ ಮತ್ತು ಐಟಿಐ ಮೆಷಿನಿಷ್ಟ್ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಎಂ. ಎಂ. ವಿ. (8) ಹುದ್ದೆಗೆ 10ನೇ ತರಗತಿ ಮತ್ತು ಐಟಿಐ ಎಂ. ಎಂ. ವಿ. ವಿದ್ಯಾರ್ಹತೆ ನಿಗದಿ ಮಾಡಲಾಗಿದ್ದು, ಆಸಕ್ತರು ಅರ್ಜಿ ಹಾಕಬಹುದು.

ಎಲೆಕ್ಟ್ರಾನಿಕ್ ಮೆಕ್ಯಾನಿಕ್ (5) ಹುದ್ದೆಗೆ 10ನೇ ತರಗತಿ ಮತ್ತು ಐಟಿಐ ಇಎಂ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ವೆಲ್ಡರ್ (2) ಹುದ್ದೆಗೆ 10ನೇ ತರಗತಿ ಮತ್ತು ಐಟಿಐ ವೆಲ್ಡರ್ ವಿದ್ಯಾರ್ಹತೆ ನಿಗದಿಯಾಗಿದೆ. ಟರ್ನರ್ (2) ಹುದ್ದೆಗೆ 10ನೇ ತರಗತಿ ಮತ್ತು ಐಟಿಐ ಟರ್ನರ್ ವಿದ್ಯಾರ್ಹತೆ ಇದೆ. ಎಲ್ಲಾ ಕೋರ್ಸ್‌ಗಳ ಅವಧಿ 1 ವರ್ಷಗಳಾಗಿದೆ.

ಈ ಟ್ರೇಡ್‌ಗಳಲ್ಲಿ ವಿದ್ಯಾರ್ಹತೆ ಹೊಂದಿದ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು 16/10/2021ರೊಳಗೆ ತಲುಪುವಂತೆ ಕಳಿಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿಯನ್ನು ಸಲ್ಲಿಕೆ ಮಾಡುವಾಗ ಅರ್ಜಿಯಲ್ಲಿ ಜನ್ಮ ದಿನಾಂಕ, ವಿದ್ಯಾರ್ಹತೆ (ಎಸ್‌. ಎಸ್. ಎಲ್. ಸಿ., ಐ. ಟಿ. ಐ. ಅಂಕಪಟ್ಟಿ ಮತ್ತು ಆಧಾರ್ ಕಾರ್ಡ್ ಪ್ರತಿ), ಕುಟುಂಬದ ವಿವರಣಾ ಪತ್ರ (ನಿಗಮನದ ಉದ್ಯೋಗಿಗಳ ಮಕ್ಕಳಿಗೆ ಮಾತ್ರ), ಜಾತಿ ದೃಢೀಕರಣ (ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮಾತ್ರ) ಪತ್ರಗಳ ಝೆರಾಕ್ಸ್ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆ ಮಾಡುವ ಲಕೋಟೆಯ ಮೇಲೆ ಶರಾವತಿ/ ಗೇರುಸೊಪ್ಪ ಯೊಜನಾ ಪ್ರದೇಶಗಳಲ್ಲಿ ತಾವು ತರಬೇತಿ ಪಡೆಯಲು ಇಚ್ಛಿಸುವ ಸ್ಥಳದ ಹೆಸರನ್ನು ಕಡ್ಡಾಯವಾಗಿ ನಮೂದಿಸಿ ಕಳಿಸಬೇಕು ಎಂದು ಸೆಪ್ಟೆಂಬರ್ 28ರಂದು ಹೊರಡಿಸಲಾದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿಗಳನ್ನು ಸಲ್ಲಿಕೆ ಮಾಡಲು ವಿಳಾಸ; ಉಪ ಪ್ರಧಾನ ಪ್ರಬಂಧಕರು (ಮಾ. ಸಂ. ಅ) ಹೈಡಲ್, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಜೋಗ್ ಫಾಲ್ಸ್‌ 577435, ಶಿವಮೊಗ್ಗ ಜಿಲ್ಲೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+