ಮೈಸೂರು ಜಿಲ್ಲಾ ಹಾಲು ಒಕ್ಕೂಟ ನೇಮಕಾತಿ; 174 ಹುದ್ದೆಗಳು

ಬೆಂಗಳೂರು, ಸೆಪ್ಟೆಂಬರ್ 16 : ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಲು 9/10/2019 ಕೊನೆಯ ದಿನವಾಗಿದೆ.

ಒಟ್ಟು 174 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಖುದ್ದಾಗಿ ಅಥವ ಅಂಚೆ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿಲ್ಲ.

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ ವಯೋಮಿತಿ ಹೊಂದಿರ ತಕ್ಕದ್ದು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ -1 40 ವರ್ಷ, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ 38 ವರ್ಷ, ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷದ ಗರಿಷ್ಠ ವಯೋಮಿತಿ ನಿಗದಿಮಾಡಲಾಗಿದೆ. ಮಾಜಿ ಸೈನಿಕರಿಗೆ ಅಂಗವಿಕಲರಿಗೆ, ವಿಧವೆಯರಿಗೆ 10 ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ.

Apply For 174 Post At Mysuru District Milk Producers Societies

ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಹುದ್ದೆಗಳಿಗೆ ಸೂಚಿಸಿರುವ ವಿದ್ಯಾರ್ಹತೆಯನ್ನು ಹೊಂದಿರಲೇಬೇಕು. ಯಾವುದೇ ಹುದ್ದೆಗೆ ಸೇವಾನುಭವ ನಿಗದಿಪಡಿಸಿದಾಗ ಅಭ್ಯರ್ಥಿಗಳು ವಿದ್ಯಾರ್ಹತೆ ನಂತರ ಸೇವಾನುಭವ ಹೊಂದಿರತಕ್ಕದ್ದು.

ಖಾಲಿ ಇರುವ ಹುದ್ದೆಗಳು: ಸಹಾಯಕ ವ್ಯವಸ್ಥಾಪಕರು (ಎ.ಹೆಚ್‌. & ಎ. ಐ), ಸಹಾಯಕ ವ್ಯವಸ್ಥಾಪಕರು (ಎಫ್‌ & ಎಫ್), ತಾಂತ್ರಿಕ ಅಧಿಕಾರಿ (ಡಿ. ಟಿ), ಖರೀದಿ/ಉಗ್ರಾಣಾಧಿಕಾರಿ, ಆಡಳಿತಾಧಿಕಾರಿ, ಲೆಕ್ಕಾಧಿಕಾರಿ, ಎಂಐಎಸ್/ಸಿಸ್ಟಂ ಆಫೀಸರ್, ತಾಂತ್ರಿಕ ಅಧಿಕಾರಿ, ಮಾರುಕಟ್ಟೆ ಅಧಿಕಾರಿ, ಭದ್ರತಾ ಅಧಿಕಾರಿ, ತಾಂತ್ರಿಕಾಧಿಕಾರಿ, ಡೈರಿ ಸೂಪರ್ ವೈಸರ್, ಕೆಮಿಸ್ಟ್ ದರ್ಜೆ -2, ಲೆಕ್ಕ ಸಹಾಯಕ ದರ್ಜೆ 2 ಸೇರಿದಂತೆ ವಿವಿಧ ಹುದ್ದೆಗಳು.

ನೇಮಕಾತಿ ಪ್ರಕ್ರಿಯೆ ಪೂರ್ಣ ವಿವರಗಳನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ವಿದ್ಯಾರ್ಹತೆ ವಿವಿರ, ವೇತನ ಶ್ರೇಣಿಯ ವಿವರಗಳು ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+