ಶಿವಮೊಗ್ಗ; ಕೆಲಸ ಖಾಲಿ ಇದೆ, ನವೆಂಬರ್ 3ರೊಳಗೆ ಅರ್ಜಿ ಹಾಕಿ

ಶಿವಮೊಗ್ಗ, ಅಕ್ಟೋಬರ್ 25: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಹೊರಗುತ್ತಿಗೆ ಆಧಾರದ ಮೇಲೆ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆನ್‌ಲೈನ್ ಮೂಲಕ ಅರ್ಜಿಯನ್ನು 3/11/2023ರೊಳಗೆ ಸಲ್ಲಿಸಬಹುದು.

ಬಿಆರ್‌ಕೆ ಸರ್ವೀಸ್ ಪ್ರವೇಟ್ ಲಿಮಿಟೆಡ್, ರಾಜಾಜಿನಗರ ಬೆಂಗಳೂರು ಈ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಿದೆ. ಹುದ್ದೆಗಳ ವಿವರ, ಅನುಭವ, ವಯೋಮಿತಿ ವಿವರಗಳು ಇಲ್ಲಿವೆ.

Apply For 16 Post Under NREGA Scheme At Shivamogga

ಹುದ್ದೆಗಳು; ಜಿಲ್ಲಾ ಪಂಚಾಯತ್ ಕಛೇರಿ ಡಿಇಓ 1 ಹುದ್ದೆ. ಗರಿಷ್ಠ ವಯೋಮಿತಿ 35 ವರ್ಷಗಳು. ಆಪೇಕ್ಷಣೀಯ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನ ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ. ವಿದ್ಯಾರ್ಹತೆ ಪಿಯುಸಿ ವಿತ್ ಕಂಪ್ಯೂಟರ್ ನಾಲೆಡ್ಜ್‌.

ಶಿವಮೊಗ್ಗ ಕಛೇರಿಯಲ್ಲಿ ತಾಂತ್ರಿಕ ಸಹಾಯಕರು (ಅರಣ್ಯ) 1, ತಾಂತ್ರಿಕ ಸಹಾಯಕರು (ತೋಟಗಾರಿಕೆ) 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವಯೋಮಿತಿ 21-40. ಕನಿಷ್ಠ 3 ವರ್ಷ ಸಂಬಂಧಿತ ಕಾರ್ಯಕ್ಷೇತ್ರದಲ್ಲಿ ಅನುಭವ ಅಪೇಕ್ಷಣೀಯ.

ಭದ್ರಾವತಿ ಕಛೇರಿಯಲ್ಲಿ ತಾಂತ್ರಿಕ ಸಹಾಯಕರು (ಕೃಷಿ) 1 ಹುದ್ದೆ ಭರ್ತಿ ಮಾಡಲಾಗುತ್ತಿದೆ. ವಯೋಮಿತಿ 21-40. ಕನಿಷ್ಠ 3 ವರ್ಷ ಸಂಬಂಧಿತ ಕಾರ್ಯಕ್ಷೇತ್ರದಲ್ಲಿ ಅನುಭವ ಅಪೇಕ್ಷಣೀಯ.

ಸಾಗರ ಕಛೇರಿಯಲ್ಲಿ ತಾಂತ್ರಿಕ ಸಹಾಯಕರು (ತೋಟಗಾರಿಕೆ) 1, ತಾಂತ್ರಿಕ ಸಹಾಯಕರು (ಸಿವಿಲ್) 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ವಯೋಮಿತಿ 21-40. ಕನಿಷ್ಠ 3 ವರ್ಷ ಸಂಬಂಧಿತ ಕಾರ್ಯಕ್ಷೇತ್ರದಲ್ಲಿ ಅನುಭವ ಅಪೇಕ್ಷಣೀಯವಾಗಿದೆ.

ಸೊರಬ ಕಛೇರಿಯಲ್ಲಿ ತಾಂತ್ರಿಕ ಸಹಾಯಕರು (ಸಿವಿಲ್) 1, ತಾಂತ್ರಿಕ ಸಹಾಯಕರು (ತೋಟಗಾರಿಕೆ) 1, ತಾಂತ್ರಿಕ ಸಹಾಯಕರು (ಅರಣ್ಯ) 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವಯೋಮಿತಿ 21-40. ಕನಿಷ್ಠ 3 ವರ್ಷ ಸಂಬಂಧಿತ ಕಾರ್ಯಕ್ಷೇತ್ರದಲ್ಲಿ ಅನುಭವ ಅಪೇಕ್ಷಣೀಯ.

ತೀರ್ಥಹಳ್ಳಿ ಕಛೇರಿಯಲ್ಲಿ ತಾಂತ್ರಿಕ ಸಹಾಯಕರು (ಅರಣ್ಯ) 1, ಡಿಇಓ ಅನುಷ್ಠಾನ ಇಲಾಖೆ 1, ತಾಂತ್ರಿಕ ಸಹಾಯಕರು (ಕೃಷಿ) 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವಯೋಮಿತಿ 21-40. ಕನಿಷ್ಠ 3 ವರ್ಷ ಸಂಬಂಧಿತ ಕಾರ್ಯಕ್ಷೇತ್ರದಲ್ಲಿ ಅನುಭವ ಅಪೇಕ್ಷಣೀಯ. ಡಿಇಓ ಅನುಷ್ಠಾನ ಇಲಾಖೆ ಹುದ್ದೆಗೆ ಗರಿಷ್ಠ ವಯೋಮಿತಿ 35 ವರ್ಷ. ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನ ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ ಅಪೇಕ್ಷಣೀಯ.

ಹೊಸನಗರ ಕಛೇರಿಯಲ್ಲಿ ತಾಂತ್ರಿಕ ಸಹಾಯಕರು (ಕೃಷಿ) 1, ತಾಂತ್ರಿಕ ಸಹಾಯಕರು (ಅರಣ್ಯ) 1, ತಾಂತ್ರಿಕ ಸಹಾಯಕರು (ತೋಟಗಾರಿಕೆ) 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವಯೋಮಿತಿ 21-40. ಕನಿಷ್ಠ 3 ವರ್ಷ ಸಂಬಂಧಿತ ಕಾರ್ಯಕ್ಷೇತ್ರದಲ್ಲಿ ಅನುಭವ ಅಪೇಕ್ಷಣೀಯ. ಡಿಇಓ ಅನುಷ್ಠಾನ ಇಲಾಖೆ ಹುದ್ದೆಗೆ ಗರಿಷ್ಠ ವಯೋಮಿತಿ 35 ವರ್ಷ. ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನ ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ ಅಪೇಕ್ಷಣೀಯ.

ಆಸಕ್ತ, ಅರ್ಹ ಅಭ್ಯರ್ಥಿಗಳು https://shimoga.nic.in ಲಿಂಕ್ ಮೂಲಕ 3/112/2023ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ +91-8971396018.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+