ರಾಯಚೂರು; ಬೋಧಕರ ಹುದ್ದೆಗೆ ನವೆಂಬರ್ 4ರ ತನಕ ಅರ್ಜಿ ಹಾಕಿ

ರಾಯಚೂರು, ಅಕ್ಟೋಬರ್ 22; ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರಾಯಚೂರು 12 ಬೋಧಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ನವೆಂಬರ್ 4ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಪ್ರೊಫೆಸರ್ ನ್ಯುರಾಲಜಿ 1, ಕಾರ್ಡಿಯಾಲಜಿ 1, ನೆಪ್ರೋಲಜಿ 1, ಪ್ಲಾಸ್ಟಿಕ್ ಸರ್ಜರಿ 1 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಅಸೋಸಿಯೇಟ್ ಪ್ರೊಫೆಸರ್ cardiothoracic surgery 1 ಮತ್ತು ಅಸ್ಟಿಸ್ಟೆಂಟ್ ಪ್ರೊಫೆಸರ್ ನ್ಯುರಾಲಜಿ 1, cardiothoracic surgery 1, ನ್ಯುರೋ ಸರ್ಜರಿ 1, ಯುರಾಲಜಿ 1, ಪೆಡ್ರಿಯಾಟಿಕ್ ಸರ್ಜರಿ 1, ಅನಸ್ತೇಶಿಯಾಲಜಿ 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಆಯ್ಕೆಯಾದ ಅಭ್ಯರ್ಥಿಗಳು ರಾಯಚೂರಿನಲ್ಲಿ ಕೆಲಸ ಮಾಡಬೇಕಿದೆ. ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನೇಮಕಾತಿ ನಿಯಮಗಳ ಅನ್ವಯ ವಯೋಮಿತಿ ಮತ್ತು ವೇತನ ಶ್ರೇಣಿ ನಿಗದಿ ಮಾಡಲಾಗಿದೆ.

Apply For 12 Teaching Vacancies Post At RIMS Raichur

ಅರ್ಜಿ ಶುಲ್ಕಗಳು; ಅರ್ಜಿಗಳನ್ನು ಸಲ್ಲಿಸುವ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1ರ ಅಭ್ಯರ್ಥಿಗಳು

1000 ರೂ., ಇತರ ಅಭ್ಯರ್ಥಿಗಳು 2 ಸಾವಿರ ರೂ. ಅರ್ಜಿ ಶುಲ್ಕವನ್ನು ಡಿಡಿ ಮೂಲಕ ಪಾವತಿ ಮಾಡಬೇಕಿದೆ. ಮೆರಿಟ್, ಮೀಸಲಾತಿ ಅನ್ವಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ನಿಗದಿತ ನಮೂನೆಯಲ್ಲಿ ಅಭ್ಯರ್ಥಿಗಳು ಅರ್ಜಿಯನ್ನು ಬರೆದು, ಸೂಕ್ತ ದಾಖಲಾತಿಗಳನ್ನು ಸ್ವಯಂ ದೃಢೀಕರಿಸಿ ನವೆಂಬರ್ 4ರೊಳಗೆ ಕಳಿಸಬೇಕು. ಅರ್ಜಿಗಳನ್ನು Director, Raichur Institute of Medical Sciences, Raichur, Karnataka ವಿಳಾಸಕ್ಕೆ ಸಲ್ಲಿಸಬೇಕು.

ಷರತ್ತುಗಳು

* ಕರ್ನಾಟಕ ರಾಜ್ಯದ ಮೀಸಲಾತಿ ನಿಯಮಗಳ ಅನ್ವಯ ಹುದ್ದೆಗಳನ್ನು ಮೀಸಲಾಗಿಡಲಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ ಮಾರ್ಗಸೂಚಿಗಳ ಅನ್ವಯ ವಿದ್ಯಾರ್ಹತೆ ಮತ್ತು ಅನುಭವ ಹೊಂದಿರುವುದು ಕಡ್ಡಾಯವಾಗಿದೆ.

* ಸಂದರ್ಶನದ ಅವಧಿಯಲ್ಲಿ ಮೂಲ ಪ್ರಕಟಣೆಗಳ ಪ್ರತಿಗಳನ್ನು ದ್ವಿಪ್ರತಿಯಲ್ಲಿ ದೃಢೀಕರಿಸಿ ಹಾಜರುಪಡಿಸಬೇಕು.

* ಅಭ್ಯರ್ಥಿಗಳು ಸರ್ಕಾರ ಸಂಸ್ಥೆ/ ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಸಂಸ್ಥೆಯಿಂದ ನಿರಾಕ್ಷೇಪಣೆ ಪತ್ರವನ್ನು ಸಂಬಂಧಪಟ್ಟ ಮುಖ್ಯಸ್ಥರು/ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸುವುದು.

* ಪ್ರಕಟಿಸಲಾದ ಹುದ್ದೆಗಳ ಸಂಖ್ಯೆಯನ್ನು ನೇಮಕಾತಿ ಪ್ರಾಧಿಕಾರಿ ಹುದ್ದೆಗಳನ್ನು ಹೆಚ್ಚಿಸುವ ಅಥವ ಕಡಿಮೆ ಮಾಡುವ ಅಧಿಕಾರ ಹೊಂದಿರುತ್ತಾರೆ. ಕರ್ನಾಟಕ ಸರ್ಕಾರದ ಮೀಸಲಾತಿ ಆದೇಶದಂತೆ ಈ ನೇಮಕಾತಿಗಳನ್ನು ಅರ್ಹತೆ ಮತ್ತು ಮೀಸಲಾತಿ ಅನ್ವಯ ಮಾಡಲಾಗುತ್ತದೆ.

* ಅರ್ಜಿಯನ್ನು ರಿಮ್ಸ್ ರಾಯಚೂರು ವೆಬ್ ಸೈಟ್‌ ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ರೂ. 2000 ಡಿಡಿಯನ್ನು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 1 ಸಾವಿರ ರೂ. ಡಿಡಿಯನ್ನು ಮಾನ್ಯ ನಿರ್ದೇಶಕರು, ರಿಮ್ಸ್ ರಾಯಚೂರು ಇವರ ಹೆಸರಿನಲ್ಲಿ ಸಲ್ಲಿಸಬೇಕು.

* ಭರ್ತಿ ಮಾಡಿದ ಅರ್ಜಿಗಳನ್ನು ಅಂಚೆ ಮೂಲಕ ಅಥವ ಖುದ್ದಾಗಿ ನಿರ್ದೇಶಕರು ರಿಮ್ಸ್ ರಾಯಚೂರು ಇವರಿಗೆ 4/11/2021ರ ಸಂಜೆ 4 ಗಂಟೆಯೊಳಗೆ ಸಲ್ಲಿಸಬೇಕು.

* ಅಭ್ಯರ್ಥಿಗಳು ಅರ್ಜಿಯ ಮೇಲೆ ಇಚ್ಚಿಸುವ ಹುದ್ದೆ, ವಿಭಾಗಗಳಿಗೆ ಅರ್ಜಿ ಸಲ್ಲಿಸಲಾಗುತ್ತಿದೆ ಎಂದು ದಪ್ಪ ಅಕ್ಷರಗಳಲ್ಲಿ ನಮೂದಿಸಬೇಕು. ಅಭ್ಯರ್ಥಿಗಳು ಮೂಲ ದಾಖಲಾತಿಗಳ ಜೊತೆ ನೇರ ಸಂದರ್ಶನಕ್ಕೆ ಹಾಜರಾಗಬೇಕು.

ವಿವಿಧ ತರಬೇತಿಗೆ ಅರ್ಜಿ ಆಹ್ವಾನ; ಕಲಬುರಗಿ (ಮಹಿಳಾ) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2021ನೇ ಸಾಲಿಗೆ ರಾಜ್ಯ ಸರ್ಕಾರದ ಉದ್ಯೋಗ ಕಾರ್ಯಕ್ರಮದ ಅಡಿ ಟಾಟಾ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ರಾಜ್ಯ ಶಿಕ್ಷಣ ವೃತ್ತಿ ಪರಿಷತ್ ಎಸ್.ಸಿ.ವಿ.ಟಿ. ಅಡಿಯಲ್ಲಿ ನೂತನವಾಗಿ ಪ್ರಾರಂಭಗೊಳ್ಳಲಿರುವ ಕೆಳಕಂಡ ಎರಡು ವೃತ್ತಿಗಳಿಗೆ ಹಾಗೂ ಬಾಕಿ ಉಳಿದ ಸ್ಥಾನಗಳಿಗೆ ನೇರ ಪ್ರವೇಶ ಪಡೆಯಲು ಕನಿಷ್ಠ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಎರಡು ವರ್ಷದ ಅಡ್ವಾನ್ಸಡ್ ಮ್ಯಾನುಫ್ಯಾಕ್ಚರಿಂಗ್ ಹಾಗೂ ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ ವೃತ್ತಿಗಳಿಗೆ ಪ್ರವೇಶ ಪಡೆಯಲು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಕಲಬುರಗಿ (ಮಹಿಳಾ) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಚೇರಿಯಲ್ಲಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದಾಗಿದೆ.

ಸರ್ಕಾರಿ ಕೋಟಾ ಹಾಗೂ ಪಿ.ಪಿ.ಪಿ. ಕೋಟಾದಡಿ ತರಬೇತಿಗೆ ಲಭ್ಯವಿರುವ ವೃತ್ತಿಗಳಾದ ಒಂದು ವರ್ಷದ (ಸರ್ಕಾರಿ ಕೋಟಾದಡಿ) ಡ್ರೆಸ್ ಮೇಕಿಂಗ್ ವೃತ್ತಿ ಹಾಗೂ (ಪಿಪಿಪಿ ಕೋಟಾದಡಿ) ಕಂಪ್ಯೂಟರ್ ಆಪರೇಟರ್ ಪ್ರೋಗ್ರಾಮಿಂಗ್ ಅಸಿಸ್ಟಂಟ್, ಕಂಪ್ಯೂಟರ್ ಹಾರ್ಡ್‍ವೇರ್ ನೆಟ್‍ವರ್ಕಿಂಗ್ ಮತ್ತು ಮೆಂಟೆನನ್ಸ್ ವೃತ್ತಿಗಳಿಗೆ ಪ್ರವೇಶ ಪಡೆಯಬಹುದಾಗಿದೆ.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕಲಬುರಗಿ (ಮಹಿಳಾ) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆತ ಪ್ರಾಚಾರ್ಯರನ್ನು ಸಂಪರ್ಕಿಸಬಹುದುದ. ದೂರವಾಣಿ ಸಂಖ್ಯೆ 08472-236753 ಅಥವಾ ಕಿರಿಯ ತರಬೇತಿ ಅಧಿಕಾರಿ ಗುರುನಾಥ ಮೊಬೈಲ್ ಸಂಖ್ಯೆ 8660977220.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+