ಚಿತ್ರದುರ್ಗ; ಜಿಲ್ಲಾ ಗೃಹರಕ್ಷಕದಳದ ಹುದ್ದೆಗೆ ಅರ್ಜಿ ಆಹ್ವಾನ

ಚಿತ್ರದುರ್ಗ, ಸೆಪ್ಟೆಂಬರ್‌, 06: ಚಿತ್ರದುರ್ಗ ಜಿಲ್ಲಾ ಗೃಹರಕ್ಷಕ ದಳದಲ್ಲಿ ಖಾಲಿ ಇರುವ ಸ್ವಯಂ ಸೇವಕ ಗೃಹರಕ್ಷಕರ ಸ್ಥಾನಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಗೃಹರಕ್ಷಕರ ಆಯ್ಕೆ ಸಮಿತಿ ಅಧ್ಯಕ್ಷರು, ಚಿತ್ರದುರ್ಗ ಇವರ ಆದೇಶದ ಮೇರೆಗೆ ಜಿಲ್ಲೆಯ ವಿವಿಧ ಘಟಕಗಳಲ್ಲಿ ಖಾಲಿ ಇರುವ 79 ಗೃಹರಕ್ಷಕ ಸದಸ್ಯರ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಖಾಲಿ ಇರುವ ಗೃಹರಕ್ಷಕರ ಗೌರವ ಸದಸ್ಯ ಸ್ಥಾನಗಳಿಗೆ ಅರ್ಹರಿರುವ ಹಾಗೂ ಸ್ವಯಂ ಸೇವಕ ಗೃಹರಕ್ಷಕ ಸದಸ್ಯರಾಗಲು ಬಯಸುವ ಸೇವಾ ಮನೋಭಾವವುಳ್ಳ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

https://kannada.oneindia.com/jobs/apply-for-guest-lecturer-post-at-iti-college-tankankal-koppal-267350.html

ಭರ್ತಿ ಮಾಡಿದ ಅರ್ಜಿಗಳನ್ನು ಸಂಬಂಧಪಟ್ಟ ದಾಖಲೆಗಳೊಂದಿಗೆ ಸಮಾದೇಷ್ಟರು, ಗೃಹರಕ್ಷಕದಳ ಕಚೇರಿ, ಚಿತ್ರದುರ್ಗ ಜಿಲ್ಲೆ, ಇಲ್ಲಿ ನಿಗದಿತ ಅವಧಿಯೊಳಗೆ ಸಲ್ಲಿಸಲು ಸೂಚಿಸಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಖಾಲಿ ಇರುವ ಹುದ್ದೆಗಳ ವಿವರ; ಚಿತ್ರದುರ್ಗ ಘಟಕದಲ್ಲಿ 37 ಪುರುಷ ಹಾಗೂ 15 ಮಹಿಳಾ ಅಭ್ಯರ್ಥಿಗಳಿಗೆ ಸ್ಥಾನಗಳು ಇದ್ದು, ಇವುಗಳನ್ನು ಸೇರಿದಂತೆ 52 ಸದಸ್ಯತ್ವ ಸ್ಥಾನಗಳು, ಹಿರಿಯೂರು ಘಟಕದಲ್ಲಿ 13 ಪುರುಷ ಸದಸ್ಯ ಸ್ಥಾನಗಳು, ಮೊಳಕಾಲ್ಮೂರು ಘಟಕದಲ್ಲಿ 14 ಸದಸ್ಯತ್ವ ಸ್ಥಾನಗಳು ಸೇರಿದಂತೆ ಒಟ್ಟು 79 ಸ್ವಯಂ ಸೇವಕ ಗೃಹರಕ್ಷಕ ಸದಸ್ಯತ್ವ ಸ್ಥಾನಗಳು ಖಾಲಿ ಇವೆ.

ಗೃಹರಕ್ಷಕ ಸದಸ್ಯತ್ವ ಹುದ್ದೆಗೆ ಇರಬೇಕಾದ ಅರ್ಹತೆಗಳು; ಕನಿಷ್ಠ 19 ರಿಂದ 45 ವರ್ಷದ ಒಳಗಿನ ವಯೋಮಿತಿಯವರಾಗಿರಬೇಕು. 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಗೃಹರಕ್ಷಕ ಸದಸ್ಯತ್ವಕ್ಕೆ ಸೇರಬಯಸುವ ಅಭ್ಯರ್ಥಿಗಳು ಗರಿಷ್ಠ 5 ಕಿಲೋ ಮೀಟರ್‌ ವ್ಯಾಪ್ತಿಯ ಒಳಗಿನವರಾಗಿರಬೇಕು. ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರಬಾರದು. ಯಾವುದೇ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿರಬಾರದು. ಉತ್ತಮ ದೇಹದಾಡ್ಯತೆಯನ್ನು ಹೊಂದಿರಬೇಕು. ಪುರುಷರಿಗೆ - ಎತ್ತರ 168 ಸೆಂ.ಮೀ., ತೂಕ-50 ಕೆ.ಜಿ., ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ. ಸ್ವಯಂ ಸೇವಾ ಮನೋಭಾವದಲ್ಲಿ ಆಸಕ್ತಿ ಇರುವಂತಹ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಇದೆ.

https://kannada.oneindia.com/jobs/apply-for-guest-lecturer-post-at-iti-college-tankankal-koppal-267350.html

ಚಿತ್ರದುರ್ಗ ನಗರದ ಮೆದೇಹಳ್ಳಿ ರಸ್ತೆಯ ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ಅರ್ಜಿಗಳು ದೊರೆಯಲಿವೆ. ಅರ್ಜಿಗಳನ್ನು ಸೆಪ್ಟೆಂಬರ್ 1 ರಿಂದ 9ರವರೆಗೆ ವಿತರಿಸಲಾಗುವುದು. ಸೆಪ್ಟೆಂಬರ್ 15ರ ಸಂಜೆ 5:30ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08194-200311, ಬೋಧಕರು-9481047857,9663698179ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+