ಕಲಬುರಗಿ; ತಜ್ಞ ಹಾಗೂ ಎಂಬಿಬಿಎಸ್ ವೈದ್ಯರಿಂದ ಅರ್ಜಿ ಆಹ್ವಾನ

ಕಲಬುರಗಿ, ಏಪ್ರಿಲ್ 28; ಕಲಬುರಗಿ ನಗರ ಹಾಗೂ ಜಿಲ್ಲೆಯಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಹಾಗೂ ಈ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಅನುಕೂಲವಾಗುವಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ಕಲಬುರಗಿ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ತಾತ್ಕಾಲಿಕವಾಗಿ 6 ತಿಂಗಳ ಅವಧಿಗೆ ತಜ್ಞ ಹಾಗೂ ಕರ್ತವ್ಯ ನಿರತ ವೈದ್ಯರ ಸೇವೆಯನ್ನು ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತು ಕಲಬುರಗಿಯ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದಾರೆ.

ಜನರಲ್ ಫಿಜಿಶಿಯನ್ಸ್ 3 ಹುದ್ದೆಗಳಿಗೆ ಎಂಬಿಬಿಎಸ್, ಎಂಡಿ (Gen Medicine) ವಿದ್ಯಾರ್ಹತೆ ಹೊಂದಿರಬೇಕು. ಮಾಸಿಕ ವೇತನ 80,000 ರೂ. ನೀಡಲಾಗುತ್ತದೆ.

 Applications Invited For Specialist And MBBS Doctor Post

ಅರಿವಳಿಕೆ ತಜ್ಞರು 3 ಹುದ್ದೆಗಳಿಗೆ ಎಂಬಿಬಿಎಸ್, ಎಂಡಿ ವಿದ್ಯಾರ್ಹತೆ ಹೊಂದಿರಬೇಕು. ಮಾಸಿಕ ವೇತನ 80,000 ರೂ. ವೇತನ. ಎಂಬಿಬಿಎಸ್ ವೈದ್ಯರು 3 ಹುದ್ದೆಗಳಿಗೆ ಎಂಬಿಬಿಎಸ್ ವಿದ್ಯಾರ್ಹತೆ ಹೊಂದಿರಬೇಕು. ಮಾಸಿಕ 60,000 ರೂ.ಗಳ ವೇತನ ನೀಡಲಾಗುತ್ತದೆ.

ಈಗ ನೇಮಕ ಮಾಡಲಾದ ಹುದ್ದೆಗಳನ್ನು ಜಿಮ್ಸ್ ಸಂಸ್ಥೆಯ ಕೋವಿಡ್ ಆಸ್ಪತ್ರೆಗೆ ಬಳಸಲು ನಿರ್ಧರಿಸಲಾಗಿದೆ. ತಜ್ಞ ಹಾಗೂ ಕರ್ತವ್ಯ ನಿರತ ವೈದ್ಯ ಅಭ್ಯರ್ಥಿಗಳು ತಮ್ಮ ಭರ್ತಿ ಮಾಡಿದ ಅರ್ಜಿಯೊಂದಿಗೆ ಶೈಕ್ಷಣಿಕ ದಾಖಲೆಗಳನ್ನು ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ [email protected] ಇ-ಮೇಲ್ ವಿಳಾಸಕ್ಕೆ ಸಲ್ಲಿಸಬೇಕು.

ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ 2021ರ ಮೇ 1ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಎಲ್ಲಾ ಹುದ್ದೆಗಳು ತಾತ್ಕಾಲಿಕವಾಗಿದ್ದು, ಆರು ತಿಂಗಳ ಅವಧಿಗೆ ಮಾತ್ರ ನೇಮಕ ಮಾಡಲಾಗುತ್ತಿದೆ.

ವಿದ್ಯಾರ್ಹತೆ, ಅರ್ಹತೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಮೊಬೈಲ್ ಸಂಖ್ಯೆ 9535394783, 9448586357 ಹಾಗೂ ಕಲಬುರಗಿ ಜಿಮ್ಸ್‍ನ ವೆಬ್‍ಸೈಟ್‌ಗೆ ಭೇಟಿ ನೀಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+