ಮಾಸಿಕ ₹2,80,000 ಹುದ್ದೆಗೆ ಅರ್ಜಿ ಆಹ್ವಾನ; ಕೊನೇ ದಿನಾಂಕ ಡಿಸೆಂಬರ್ 2, 2024
Job News: ಉದ್ಯೋಗವಕಾಶಗಳ ಬಾಗಿಲು ತೆರೆಯುತ್ತಲೇ ಇರುತ್ತವೆ. ಹಾಗೆಯೇ ಇದೀಗ ಆಯಿಲ್ ಇಂಡಿಯಾ ಲಿಮಿಟೆಡ್ ಕಂಪನಿಯು ಖಾಲಿ ಹುದ್ದೆಗಳ ನೇಮಕಾತಿಗಾಗಿ ತುಂಬಾ ಅನುಭವವುಳ್ಳವರಿಂದ ಅರ್ಜಿ ಆಹ್ವಾನಿಸಿದೆ. ಹಾಗಾದರೆ ಯಾವ ಹುದ್ದೆ, ಯಾರೆಲ್ಲ ಅರ್ಜಿ ಸಲ್ಲಿಸಬಹುದು ಹಾಗೂ ಆಯ್ಕೆಯಾದವರಿಗೆ ಮಾಸಿಕ ವೇತನ ಎಷ್ಟು ಸಿಗಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಈ ಹುದ್ದೆಗಳು ಕೇವಲ ಅನುಭವವುಳ್ಳ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತವೆ. ಉದ್ಯೋಗದಲ್ಲಿ 15 ವರ್ಷಕ್ಕೂ ಹೆಚ್ಚು ಅನುಭವ ಇರುವಂತವರು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಪ್ರತಿಯನ್ನು ಇಲಾಖೆಯ ವೆಬ್‌ಸೈಟ್‌ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಇನ್ನು ವೇತನ ಶ್ರೇಣಿ, ವಯಸ್ಸಿನ ಮಿತಿ, ಅರ್ಹತೆ, ಯಾವ ಕೋರ್ಸ್ ಮಾಡಿದವರಿಗೆ ಅವಕಾಶ ಕಲ್ಪಿಸಲಾಗಿದೆ.

ಒಂದು ವೇಳೆ ಹುದ್ದೆಗೆ ನೇಮಕ ಆದರೆ, ಅಭ್ಯರ್ಥಿಗಳು ದೇಶದ ವಿವಿಧೆಡೆ ಇರುವ ಆಯಿಲ್ ಇಂಡಿಯಾ ಲಿಮಿಟೆಡ್‌ನ ಯಾವುದೇ ಕಚೇರಿಗಳಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿದೆ. ಚೀಫ್ ಜನರಲ್ ಮ್ಯಾನೇಜರ್ (ಕ್ರಿಟಿಕಲ್ ಮಿನರಲ್ಸ್), ಜನರಲ್ ಮ್ಯಾನೇಜರ್ (ಕ್ರಿಟಿಕಲ್ ಮಿನರಲ್ಸ್) ಹುದ್ದೆಗಳು ಖಾಲಿಯಯಿವೆ. ಇವುಗಳು ಗುತ್ತಿಗೆ ಆಧಾರದ ಹುದ್ದೆಗಳಾಗಿವೆ.
ಈ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ಸ್ನಾತಕೋತ್ತರ ಪದವಿ (Geology/Applied Geology), ಅಥವಾ ಪದವಿಯಲ್ಲಿ ಮೈನಿಂಗ್ ಇಂಜಿನಿಯರಿಂಗ್ ವಿದ್ಯಾರ್ಹತೆ ಪಡೆದಿರಬೇಕಾಗುತ್ತದೆ. ವಯಸ್ಸಿನ ಮಿತಿ 56ರಿಂದ 58 ವರ್ಷದ ಒಳಗಿನವರು ಆಗಿರಬೇಕಾಗುತ್ತದೆ. ಆಯ್ಕೆ ಪ್ರಕ್ರಿಯೆಯು ವೈಯಕ್ತಿಕ ಸಂದರ್ಶನದಲ್ಲಿ ಪರ್ಫಾಮೆನ್ಸ್ ಮೇಲೆ ನಡೆಯಲಿದೆ. ಆಯ್ಕೆಯಾದವರಿಗೆ ಮಾಸಿಕ ಸಂಬಳ 1,20,000-2,80,000 ರೂಪಾಯಿ ನೀಡಲಾಗುತ್ತದೆ ಎಂದು ತಿಳಿಸಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಡಿಸೆಂಬರ್, 2, 2024 ಆಗಿದೆ.
CGM (HR Acquisitions), HR Acquisitions Department, ಆಯಿಲ್ ಇಂಡಿಯಾ ಲಿಮಿಟೆಡ್, ಫೀಲ್ಡ್ ಹೆಡ್ ಕ್ವಾಟರ್ಸ್ ದುಲಿಯಾಜನ್, ಅಸ್ಸಾಂ- 786 602 ಇ-ಮೇಲ್- [email protected] ಅರ್ಜಿ ಸಲ್ಲಿಸುವ ವಿಳಾಸವಾಗಿದೆ.












Click it and Unblock the Notifications