ಏರ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ 55 ಹುದ್ದೆಗಳಿವೆ
ಬೆಂಗಳೂರು, ಅ.26: ಏರ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಎಐ) ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ 2022-23ನೇ ಸಾಲಿನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಜ್ಯೂನಿಯರ್ ಸಹಾಯಕ ಹಾಗೂ ಹಿರಿಯ ಸಹಾಯಕ ಹುದ್ದೆಗಳಿಗೆ ಆಯ್ಕೆಯಾಗಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ನವೆಂಬರ್ 14, 2022 ರೊಳಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.
ಸಂಸ್ಥೆಯ ಹೆಸರು: ಏರ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಎಐ)
ಹುದ್ದೆ: Junior Assistant and Senior Assistant
ಒಟ್ಟು ಹುದ್ದೆ: 55
ಉದ್ಯೋಗ ಸ್ಥಳ: ವಿವಿಧೆಡೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 14, 2022
ಹುದ್ದೆಗಳು-ಹುದ್ದೆಗಳ ಸಂಖ್ಯೆ
- ಹಿರಿಯ ಸಹಾಯಕ (Official Language): 06 ಹುದ್ದೆ
- ಹಿರಿಯ ಸಹಾಯಕ (Human Resource): 07 ಹುದ್ದೆ
- ಹಿರಿಯ ಸಹಾಯಕ (Operations): 04 ಹುದ್ದೆ
- ಹಿರಿಯ ಸಹಾಯಕ (Electronics): 03 ಹುದ್ದೆ
- ಹಿರಿಯ ಸಹಾಯಕ (ಫೈನಾನ್ಸ್): 12 ಹುದ್ದೆ
- ಜ್ಯೂನಿಯರ್ ಸಹಾಯಕ (Fire Service): 23 ಹುದ್ದೆ
ಬ್ಯಾಂಕ್ ಆಫ್ ಬರೋಡಾ 2022: 60 ವಿವಿಧ ಐಟಿ ಅಧಿಕಾರಿ ಹುದ್ದೆಗಳಿವೆ
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಪ್ಲೋಮಾ, ಪದವಿ.

- ಜ್ಯೂನಿಯರ್ ಸಹಾಯಕ (Fire Service): ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ 10ನೇ ತರಗತಿ ಮೂರುವರ್ಷಗಳ ರೆಗ್ಯುಲರ್ ಡಿಪ್ಲೋಮಾ ಮೆಕ್ಯಾನಿಕಲ್/ಆಟೋಮೊಬೈಲ್/ಅಗ್ನಿಶಾಮಕ. 12ನೇ ತರಗತಿಯಲ್ಲಿ ಹಾಗೂ ಡಿಪ್ಲೋಮಾ ಶೇ50ರಷ್ಟು ಅಂಕಗಳೊಂದಿಗೆ ಪಾಸಾಗಿರಬೇಕು.
- ಹಿರಿಯ ಸಹಾಯಕ (ಫೈನಾನ್ಸ್): ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ. 3 ರಿಂದ 6 ತಿಂಗಳುಗಳ ಕಾಲ ಕಂಪ್ಯೂಟರ್ ತರಬೇತಿ.
- ಹಿರಿಯ ಸಹಾಯಕ (Official Language): ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಹಿಂದಿ ಸ್ನಾತಕೋತ್ತರ ಪದವಿ, ಇಂಗ್ಲೀಷ್ ಭಾಷಾ ವಿಷಯ ಪಠ್ಯದಲ್ಲಿರಬೇಕು. ಎರಡು ವರ್ಷಗಳ ಅನುಭವ ಉಳ್ಳವರಿಗೆ ಆದ್ಯತೆ.
- ಹಿರಿಯ ಸಹಾಯಕ (Human Resource): ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿ + 30/25 w.p.m ಇಂಗ್ಲೀಷ್/ ಹಿಂದಿ ಟೈಪಿಂಗ್ ವೇಗ ಹಾಗೂ ಎರಡು ವರ್ಷ ಅನುಭವ.
- ಹಿರಿಯ ಸಹಾಯಕ (Electronics): ಸರ್ಕಾರದಿಂದ ಮಾನ್ಯತೆ ಪಡೆದ ತಾಂತ್ರಿಕ ವಿಶ್ವವಿದ್ಯಾಲಯದಿಂದ ಡಿಪ್ಲೋಮಾ ಇನ್ ಟೆಲಿಕಮ್ಯೂನಿಕೇಷನ್/ ರೇಡಿಯೋ ಇಂಜಿನಿಯರಿಂಗ್.ಹಾಗೂ ಎರಡು ವರ್ಷ ಅನುಭವ.
ವಯೋಮಿತಿ:
ಎಎಐ ನೇಮಕಾತಿ ಅಧಿಸೂಚನೆಯಂತೆ ಕನಿಷ್ಠ 18 ರಿಂದ 30 ವರ್ಷಗಳ ತನಕ ವಯೋಮಿತಿಯಿದೆ(ಆಗಸ್ಟ್ 25ರಂತೆ)ಎಸ್ ಸಿ/ ಎಸ್ಟಿ/ ಮಾಜಿಯೋಧ: ಗರಿಷ್ಠ ವಯೋಮಿತಿಯಲ್ಲಿ 5 ವರ್ಷ ವಿನಾಯತಿ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಟೈಪಿಂಗ್ ಟೆಸ್ಟ್, ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ
ಅರ್ಜಿ ಶುಲ್ಕ:
- ಎಸ್ ಸಿ/ ಎಸ್ಟಿ/ ಮಹಿಳಾ ಅಭ್ಯರ್ಥಿ: 170 ರು
- ಇತರೆ ಎಲ್ಲಾ ಅಭ್ಯರ್ಥಿ: 1000ರು
- ಅಂಗವಿಕಲ/ ಎಎಐ ಅಪ್ರೆಂಟಿಸ್: ಯಾವುದೇ ಶುಲ್ಕವಿಲ್ಲ
ಅಪ್ರೆಂಟಿಸ್ ಕಾಯಿದೆ 1961 ರ ಪ್ರಕಾರ, ಅಂಗವಿಕಲ ವ್ಯಕ್ತಿಗಳು ಮತ್ತು AAI ನಲ್ಲಿ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಪ್ರೆಂಟಿಸ್‌ಗಳಿಗೆ ವಿನಾಯಿತಿ ನೀಡಲಾಗುತ್ತದೆ.
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 14/10/2022ಅರ್ಜಿ ಸಲ್ಲಿಸುವುದು ಹೇಗೆ:
ಎಎಐ ನ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿಎಎಐ ನ ಅಧಿಕೃತ ವೆಬ್ ಸೈಟ್ aai.aero ನಲ್ಲಿಉದ್ಯೋಗ ಕುರಿತ ಮಾಹಿತಿಗಾಗಿ ಕ್ಲಿಕ್ ಮಾಡಿ (https://cdn.digialm.com/EForms/configuredHtml/1258/79423/Instruction.html)
ಮುಖಪುಟದಲ್ಲಿ ಲಭ್ಯವಿರುವ ಸಂಬಂಧಪಟ್ಟ ಹುದ್ದೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ
ಅರ್ಜಿ ನಮೂನೆಯನ್ನು ಭರ್ತಿ ಮಾಡಿ
ಅರ್ಜಿ ಶುಲ್ಕವನ್ನು ಪಾವತಿಸಿ
ಫಾರ್ಮ್ ಅನ್ನು ಸಲ್ಲಿಸಿ ಮತ್ತು ಸ್ವೀಕೃತಿ ಪತ್ರವನ್ನು ಸೇವ್ ಮಾಡಿಕೊಳ್ಳಿ












Click it and Unblock the Notifications