ಏರ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ 548 ಹುದ್ದೆಗಳಿವೆ
ಬೆಂಗಳೂರು, ಡಿ. 18: ಏರ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಎಐ) ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ 2020-21ನೇ ಸಾಲಿನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಜ್ಯೂನಿಯರ್ ಎಕ್ಸಿಕ್ಯೂಟಿವ್ ಹಾಗೂ ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾಗ ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಜನವರಿ 14, 2021 ರೊಳಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.
ಸಂಸ್ಥೆಯ ಹೆಸರು: ಏರ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಎಐ)
ಹುದ್ದೆ: Manager & Junior Executive
ಒಟ್ಟು ಹುದ್ದೆ: 548
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 14, 2021
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇ/ ಬಿ. ಟೆಕ್ ಪದವಿ, ಎಂಬಿಎ ಪಡೆದಿರಬೇಕು.

ವಯೋಮಿತಿ:
ಮ್ಯಾನೇಜರ್ ಹುದ್ದೆ: 32 ವರ್ಷ
ಜ್ಯೂನಿಯರ್ ಎಕ್ಸಿಕ್ಯೂಟಿವ್: 27 ವರ್ಷ.
ಎಸ್ ಸಿ/ ಎಸ್ಟಿ/ ಮಾಜಿಯೋಧ: ಗರಿಷ್ಠ ವಯೋಮಿತಿಯಲ್ಲಿ 5 ವರ್ಷ ವಿನಾಯತಿ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಡ್ರೈವಿಂಗ್ ಟೆಸ್ಟ್, ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ
ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ/ ಮಹಿಳಾ ಅಭ್ಯರ್ಥಿ: 170 ರು
ಇತರೆ ಎಲ್ಲಾ ಅಭ್ಯರ್ಥಿ: 1000ರು
ಅಂಗವಿಕಲ/ ಎಎಐ ಅಪ್ರೆಂಟಿಸ್: ಯಾವುದೇ ಶುಲ್ಕವಿಲ್ಲ
ಪ್ರಮುಖ ದಿನಾಂಕ:
ನೋಟಿಫಿಕೇಷನ್ ದಿನಾಂಕ, ಅರ್ಜಿ ಸಲ್ಲಿಕೆ ಆರಂಭ: 15-12-2020
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 14-01-2021
ಅರ್ಜಿ ಸಲ್ಲಿಸುವುದು ಹೇಗೆ:
ಎಎಐ ನ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications