ಶೇ 83ರಷ್ಟು ಇಂಜಿನಿಯರಿಂಗ್ ಪದವೀಧರರಿಗೆ ಕೆಲಸ ಸಿಕ್ಕಿಲ್ಲ!
ಬೆಂಗಳೂರು, ಮಾರ್ಚ್ 24: ಇಂಜಿನಿಯರಿಂಗ್ ಪದವೀಧರರು ಕೆಲಸ ಹುಡುಕಲು ಪರದಾಟ ನಡೆಸುತ್ತಿದ್ದಾರೆ. ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವಿ ಪಡೆದು ಕಾಲೇಜುಗಳಿಂದ ಹೊರ ಬರುತ್ತಿದ್ದಾರೆ. ಆದರೆ ಕ್ಯಾಂಪಸ್ ಸಂದರ್ಶನದಲ್ಲಿ ಕೆಲವು ಮಂದಿಗೆ ಮಾತ್ರ ಅವಕಾಶ ಸಿಗುತ್ತದೆ. ಇಂಜಿನಿಯರಿಂಗ್ ಪದವೀಧರರು ಕೆಲಸಕ್ಕಾಗಿ ಹೇಗೆ ಶ್ರಮ ಪಡುತ್ತಿದ್ದಾರೆ? ಎಂದು ಸಮೀಕ್ಷೆಯೊಂದು ಹೇಳಿದೆ.
ಅನ್‌ಸ್ಟಾಪ್ ಟ್ಯಾಲೆಂಟ್ ರಿಪೋರ್ಟ್ 2025 ಇಂಜಿನಿಯರಿಂಗ್ ಪದವೀಧರರ ಕುರಿತು ಹಲವು ಅಂಕಿ ಅಂಶಗಳನ್ನು ನೀಡಿದೆ. ಶೇ 83ರಷ್ಟು ಇ-ಸ್ಕೂಲ್ ಪದವೀಧರರು, ಶೇ 46ರಷ್ಟು ಬಿ-ಸ್ಕೂಲ್ ಪದವೀಧರರಿಗೆ ಕೆಲಸ ಸಿಕ್ಕಿಲ್ಲ. ಅವರ ಕೈಯಲ್ಲಿ ಯಾವುದೇ ಇಂಟರ್ನಶಿಪ್ ಅವಕಾಶಗಳು ಇಲ್ಲ ಎಂದು ಸಮೀಕ್ಷೆ ಹೇಳಿದೆ.

ವಿವಿಧ ಕಂಪನಿಗಳ ನೇಮಕಾತಿ ವಿಧಾನ, ಕೌಶಲ್ಯಗಳು ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಲಿಸುತ್ತಿರುವ ವಿಷಯಗಳಲ್ಲಿ ಭಾರೀ ಅಂತರ ಕಂಡುಬಂದಿದೆ. ಆದ್ದರಿಂದ ನೇಮಕಾತಿಯಲ್ಲಿ ಹಿನ್ನಡೆಯಾಗಿದ್ದು, ಪದವೀಧರರು ಕೆಲಸಕ್ಕಾಗಿ ಹುಡುಕಾಟ ನಡೆಸುವಂತೆ ಆಗಿದೆ.
ಬೆಂಗಳೂರಿನಲ್ಲಿ ವರದಿ ಬಿಡುಗಡೆ: ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನ್‌ಸ್ಟಾಪ್ ಟ್ಯಾಲೆಂಟ್ ರಿಪೋರ್ಟ್ 2025 ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಲಾಗಿದೆ. ನೇಮಕಾತಿ ವಿಧಾನದಲ್ಲಿನ ಹಲವು ಬದಲಾವಣೆಗಳ ಕಾರಣಕ್ಕೆ ಯುವ ಇಂಜಿನಿಯರಿಂಗ್ ಪದವೀಧರರಿಗೆ ಕೆಲಸ ಸಿಗುತ್ತಿಲ್ಲ ಎಂದು ವರದಿ ವಿಶ್ಲೇಷಣೆ ಮಾಡಿದೆ.
ಶೇ 51ರಷ್ಟು 'ಝೆನ್-ಜಿ'ಗಳು ಸರಿಯಾದ ಅವಕಾಶಗಳು ಸಿಗದೆ ಹೊರಗುತ್ತಿಗೆ ಮತ್ತು ಇತರ ಉದ್ಯೋಗಗಳತ್ತ ವಾಲುತ್ತಿದ್ದಾರೆ. ಬಿ-ಸ್ಕೂಲ್‌ನ ಶೇ 59ರಷ್ಟು ಪದವೀಧರರಿಗೆ ಸರಿಯಾದ ಉದ್ಯೋಗ ಸಿಗುತ್ತಿಲ್ಲ. ಇದು ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಶ್ನೆಯನ್ನು ಎತ್ತಿದೆ.
ಲಿಂಗ ಆಧಾರಿತ ವೇತನ ವ್ಯತ್ಯಾಸ, ನೇಮಕಾತಿಗಳ ಕುರಿತು ಸಹ ಸಮೀಕ್ಷೆಯಲ್ಲಿ ಹಲವು ಅಂಶಗಳನ್ನು ವಿವರಿಸಲಾಗಿದೆ. ಮೂವರಲ್ಲಿ ಇಬ್ಬರು ಕಲೆ & ವಿಜ್ಞಾನ ಮಹಿಳಾ ಪದವೀಧರರು ವಾರ್ಷಿಕ 6 ಲಕ್ಷಕ್ಕಿಂತ ಕಡಿಮೆ ಪ್ಯಾಕೇಜ್ ಪಡೆಯುತ್ತಿದ್ದಾರೆ. ಅದೇ ಪುರುಷ ವಿದ್ಯಾರ್ಥಿಗಳಿಗೆ ಹೆಚ್ಚಿನ ವೇತನವಿದೆ ಎಂದು ಸಮೀಕ್ಷೆ ವರದಿ ಹೇಳಿದೆ.
ಭವಿಷ್ಯದಲ್ಲಿ ಇ-ಸ್ಕೂಲ್ ಮತ್ತು ಬಿ-ಸ್ಕೂಲ್‌ಗಳಲ್ಲಿ ನೇಮಕಾತಿಗಳನ್ನು ಮಾಡುವಾಗ ಸಮಾನ ವೇತವನ್ನು ನೀಡಬೇಕಾಗುತ್ತದೆ ಎಂದು ಸಮೀಕ್ಷೆ ವಿವರಿಸಿದೆ. ನೇಮಕಾತಿಗಳನ್ನು ಮಾಡುವಾಗಲೂ ಕಂಪನಿಗಳು ಶೇ 73ರಷ್ಟು ಪ್ರತಿಷ್ಠಿತ ಕಾಲೇಜುಗಳಿಗೆ ಮಾತ್ರ ಭೇಟಿ ನೀಡುತ್ತಿವೆ. ಇದರಿಂದಾಗಿ ಕೆಲವು ಕಾಲೇಜುಗಳಲ್ಲಿ ಕೌಶಲ್ಯ ಹೊಂದಿದ ಅಭ್ಯರ್ಥಿಗಳಿದ್ದರೂ ಸಹ ಅವರಿಗೆ ಅವಕಾಶಗಳು ದೊರೆಯುತ್ತಿಲ್ಲ.
ಶೇ 70ರಷ್ಟು 'ಝೆನ್-ಜಿ'ಗಳು ಕಂಪನಿಗಳಲ್ಲಿ ಅವಕಾಶಗಳನ್ನು ಕೇಳುವಾಗ ಕೆಲವು ತಿಂಗಳ ಕಾಲ ಇರುವ ಪ್ರಾಜೆಕ್ಟ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ನೇಮಕಾತಿಗಳನ್ನು ಮಾಡಿಕೊಳ್ಳುವವರು ಸಹ ಇದೇ ಮಾದರಿಯನ್ನು ಹೆಚ್ಚಾಗಿ ಅನುಸರಿಸುತ್ತಿದ್ದು, ಆ ಪ್ರಾಜೆಕ್ಟ್ ಮುಗಿದ ಬಳಿಕ ಅವರು ಕೆಲಸ ಕಳೆದುಕೊಳ್ಳುತ್ತಿದ್ದಾರೆ.
'ಝೆನ್-ಜಿ'ಗಳು ಝೊಮ್ಯಾಟೋ ಸೇರಿದಂತೆ ಇತರ ಮಾದರಿ ಕಂಪನಿಗಳ ಕೆಲಸಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇಂತಹ ಕಂಪನಿಗಳು ಯುವ, ಉತ್ತಮ ಕೌಶಲ್ಯ ಹೊಂದಿರುವವರಿಗೆ ಆಕರ್ಷಕ ವೇತನ ನೀಡುತ್ತಿವೆ. ಆದ್ದರಿಂದ ಗೂಗಲ್, ಮೈಕ್ರೋಸಾಫ್ಟ್, ಅಮೆಝಾನ್ ನಂತರ ಕಂಪನಿಗಳ ನೇಮಕಾತಿಯೂ ನಿಧಾನವಾಗುತ್ತಿದೆ.
ಅಲ್ಲದೇ ಶೇ 70ರಷ್ಟು 'ಝೆನ್-ಜಿ'ಗಳು ಬೇರೆ ಬೇರೆ ಉದ್ಯೋಗದ ಮೂಲಕ ಆದಾಯಗಳಿಸಲು ಬಯಸುತ್ತಿದ್ದಾರೆ. ಇ-ಕಾಮರ್ಸ್, ಸ್ಟಾರ್ಟ್ ಅಪ್‌ಗಳ ನೇಮಕಾತಿಯು ಶೇ 25ರಷ್ಟಿದೆ. ಆದರೆ ಕಂಪನಿಗಳು ಕ್ಯಾಂಪಸ್ ಇಂಟರ್ ವ್ಯೂಗಾಗಿ ಪ್ರತಿಷ್ಠಿತ ಕಾಲೇಜುಗಳಿಗೆ ಮಾತ್ರ ಭೇಟಿ ನೀಡುತ್ತಿವೆ ಎಂದು ಸಮೀಕ್ಷೆ ಹೇಳಿದೆ.












Click it and Unblock the Notifications