3 Days Weekly Off: ವಾರದಲ್ಲಿ 03 ದಿನ 'ವೀಕ್ಲಿ ಆಫ್' 4ದಿನ ಮಾತ್ರ ಉದ್ಯೋಗ!

ಬೆಂಗಳೂರು, ಸೆಪ್ಟಂಬರ್ 03: ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಉದ್ಯೋಗ ಹುಡುಕುವ ಯುವ ಸಮೂಹವು ಕೆಲಸ ಜೊತೆಗೆ ಒತ್ತಡ ನಿಭಾಯಿಸಬೇಕಾಗುತ್ತದೆ. ಜೊತೆಗೆ ಆರೋಗ್ಯ, ವೈಯಕ್ತಿಕ ಜೀವನ ಕಡೆಗೆ ಗಮನ ಹರಿಸಬೇಕಾಗುತ್ತದೆ. ಇದಕ್ಕೆ ಆಯಾ ಕಂಪನಿಗಳು ನೀಡುವ ವಾರದ ರಜೆ ಹೆಚ್ಚು ಸಹಕಾರಿಯಾಗುತ್ತದೆ. ಬೆಂಗಳೂರು, ದೇಶ, ವಿದೇಶಿ ಐಟಿ ಕಂಪನಿಗಳಲ್ಲಿ ವಾರಕ್ಕೆ ಎರಡು ದಿನ ರಜೆ (Weekly off) ನೀಡುತ್ತಾರೆ.

ಈವರೆಗೆ ವಾರದಲ್ಲಿ ಎರಡು ದಿನ ವೀಕ್ಲಿ ಆಫ್ ಕೊಡುವ ಕಂಪನಿ ಬೆಸ್ಟ್ ಎಂಬ ಉತ್ತರ ಬರುತ್ತಿತ್ತು. ಇದೀಗ ಕಂಪನಿಗಳು ಮೂರು ದಿನ ವೀಕ್ಲಿ ಆಫ್ ನೀಡಲು ಮುಂದಾಗಿದೆ. ಕೆಲವೊಂದು ಕಂಪನಿಗಲ್ಲಿ ತಮ್ಮ ಉದ್ಯೋಗಿಗಳಿಗೆ ಇರುವ ವಾರದ ರಜೆ ಒಂದನ್ನೇ ನೀಡಲು ಹಿಂದೆ ಮುಂದೆ ನೋಡುತ್ತವೆ.

3 Days Weekly Off and 4 Days Working Day Proposal ahead Japan Companies in Japan

ದುಡಿಯುವ ವ್ಯಕ್ತಿಗೆ ಆತ ಉತ್ತಮ ಆರೋಗ್ಯ ಹೊಂದಲು ಹಾಗೂ ಕೌಶಲ್ಯಯುತ ಉದ್ಯೋಗಿಯಾಗಲು ಆತ ಮಾನಸಿಕವಾಗಿ ಸದೃಢವಾಗಿರಲು, ತನ್ನ ಕಾರ್ಯದಲ್ಲಿ ವೃತ್ತಿಪರತೆ ಸಾಧಿಸಲು ಆತನಿಗೆ ವಿಶ್ರಾಂತಿ ಸಿಗಬೇಕು. ಈ ವಿಶ್ರಾಂತಿ ಆತನಿಗೆ ರಜೆಗಳಿಂದ ಸಿಗುತ್ತದೆ. ಅದಕ್ಕಾಗಿ ಒಂದು ವಾರದ ರಜೆ, ಅಥವಾ ಎರಡು ವಾರದ ರಜೆ ನೀಡುವ ಕಂಪನಿಗಳ ಬಗ್ಗೆ ಗೊತ್ತಿರುವ ನಮಗೆ ವಾರದಲ್ಲಿ ಮೂರು ದಿನ ವೀಕ್ಲಿ ಆಫ್ ನೀಡುವ ಕಂಪನಿ ಬಗ್ಗೆ ಈಗ ಕೇಳುತ್ತಿದ್ದೇವೆ.

ಈ ದೇಶದ ಕಂಪನಿಗಳಲ್ಲಿ ಪ್ರಸ್ತಾವನೆ

ಹೌದು, ವಾರದಲ್ಲಿ 03 ದಿನ ವೀಕ್ಲಿ ಆಫ್ ನೀಡಿ ಕೇವಲ 04 ದಿನ ಉದ್ಯೋಗ ಪಡೆದುಕೊಳ್ಳಲು ಜಪಾನ್ ದೇಶದ ಕಂಪನಿಗಳು ಮುಂದಾಗಿವೆ. ನಾವು ಹೇಳ ಹೊರಟಿರುವುದು ಜಪಾನಿನಲ್ಲಿ ಕಂಪನಿಗಳ ವಿಚಾರ. ಇಲ್ಲಿನ ಹಲವು ಉದ್ಯೋಗದಾತರು ತಮ್ಮ ನೌಕರರ ಹಿತದೃಷ್ಠಿಯಿಂದ ಮೂರು ದಿನ ವೀಕ್ಲಿ ಆಫ್ ನೀಡಲು ಮುಂದಾಗಿದ್ದಾರೆ.

ತಂತ್ರಜ್ಞಾನ, ಸುನಾಮಿ, ಅತಿವೃಷ್ಠಿ, ಭೂಕಂಪದಂತಹ ಸವಾಲುಗಳನ್ನು ಎದರಿಸಿಯು ಇತರ ದೇಶಗಳಿಗೆ ಪೈಪೋಟಿ ಒಡ್ಡುತ್ತದೆ. ಬಂದಿದೆ. ಮುಖ್ಯವಾಗಿ ಇಲ್ಲಿ ಕಾರ್ಮಿಕರ ಕೊರತೆ ಇದೆ. ಹೀಗಿದ್ದರೂ ಹೆಚ್ಚು ದಿನ ನೌಕರರಿಗೆ ರಜೆ ನೀಡುವುದು ಏಕೆ ಎಂಬ ಯೋಚನೆ ನಿಮಗೆ ಬರಬಹುದು.

3 Days Weekly Off and 4 Days Working Day Proposal ahead Japan Companies in Japan

ಜಪಾನಿನಲ್ಲಿ ವೃದ್ಧರೆ ಹೆಚ್ಚಿದ್ದು, ಶ್ರಮಿಕರ ಕೊರತೆ ಇದೆ!

ವರದಿಯೊಂದರ ಪ್ರಕಾರ, ಜಪಾನಿನಲ್ಲಿ ವಾರ್ಷಿಕವಾಗಿ ಕೆಲಸ ಒತ್ತಡದಿಂದಲೇ 50ಜನರು ಮೃತಪಡುತ್ತಾರೆ ಎಂದು ಹೇಳಲಾಗುತ್ತದೆ. ಅಂದರೆ ಆ ಮಟ್ಟಿನ ಕೆಲಸದ ಒತ್ತಡವನ್ನು ಇಲ್ಲಿ ಉದ್ಯೋಗಿಗಳು ಎದುರಿಸುತ್ತಿರುತ್ತಾರೆ. ಇನ್ನೂ ಜಪಾನಿನಲ್ಲಿ ವೃದ್ಧರ ಸಂಖ್ಯೆ 7.4 ಕೋಟಿಯಷ್ಟಿದೆ. ಬಿಡುವಿಲ್ಲದ ಕೆಲಸ, ಮಾನಸಿಕ ಕಿರಿಕಿರಿ, ಅನಾರೋಗ್ಯ ಮುಂತಾದ ಕಾರಣಗಳಿಂದ ಶ್ರಮಿಕರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತಿದೆ. ದುಡಿಯುವವರ ಸಂಖ್ಯೆ 2065 ಹೊತ್ತಿಗೆ ಕೇವಲ 4.5 ಕೋಟಿಗೆ ಇಳಿಯಲಿದೆ.

ಕಾರ್ಮಿಕ ಕೊರತೆ ಇದ್ದು, ವಾರ್ಷಿಕ ಸಾವು ನೋವುಗಳು ಮುಂದುವರಿದರೆ, ಭವಿಷ್ಯದಲ್ಲಿ ಇನ್ನಷ್ಟು ಸಂಕಷ್ಟಕ್ಕೆ ಈಡಾಗಬಹುದು ಎಂಬ ಕಾರಣಕ್ಕೆ 2021ರಲ್ಲಿ ದೇಶದ ಕೇವಲ 7ರಷ್ಟು ಕಂಪನಿಗಳು ಮಾತ್ರವೇ ಮೂರು ದಿನ ವೀಕ್ಲಿ ಆಫ್ ಕೊಡಲು ಒಪ್ಪಿದ್ದವು. ಈ ಪ್ರಸ್ತಾವನೆಯನ್ನು ಬಹುತೇಕ ಕಂಪನಿಗಳು ನಿರಾಕರಿಸಿದ್ದವು. ಆರು ದಿನದ ಕೆಲಸವನ್ನೇ ಕಡ್ಡಾಯಗೊಳಿಸಿದ್ದವು.

ಶೇ.85ರಷ್ಟು ಕಂಪನಿಗಳಿಂದ 2 ದಿನ ರಜೆ

ಇನ್ನೂ ಶೇ.85ರಷ್ಟು ಕಂಪನಿಗಳು ವಾರದಲ್ಲಿ ಎರಡು ದಿನ ರಜೆ ನೀಡುತ್ತಿವೆ. ಇದೀಗ ಸರ್ಕಾರ ಮತ್ತೆ ನಾಲ್ಕು ದಿನದ ಉದ್ಯೋಗ ಕಡ್ಡಾಯ ಮಾಡಿ, ಮೂರು ದಿನ ವಾರದ ರಜೆ ಜಾರಿಯ ಪ್ರಸ್ತಾವನೆಯನ್ನು ಕೈಗೆತ್ತಿಕೊಂಡಿದೆ. ಕಾರ್ಮಿಕರ ಹಲವು ಸಮಸ್ಯೆಗಳ ಪರಿಹಾರವಾಗಿ ಬಹುತೇಕ ಶ್ರಮಿಕರು ವಾರದಲ್ಲಿ ನಾಲ್ಕು ದಿನ ಮಾತ್ರವೇ ಕೆಲಸ ಮಾಡಲು ಬಯಸಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಈ ಮೂರು ದಿನದ ವೀಕ್ಲಿ ಆಫ್ ಎಷ್ಟು ಕಂಪನಿಗಳಲ್ಲಿ ಅನುಷ್ಠಾನಕ್ಕೆ ಬರಲಿದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+