15 ಸಾವಿರ ಶಿಕ್ಷಕರ ನೇಮಕಾತಿ; ಮಹತ್ವದ ಸೂಚನೆಗಳೊಂದಿಗೆ ಅರ್ಜಿ ತುಂಬುವ ದಿನಾಂಕ ವಿಸ್ತರಣೆ
ಬೆಂಗಳೂರು, ಏಪ್ರಿಲ್ 22: ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು 15 ಸಾವಿರ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ, ರಿಜಿಸ್ಟ್ರೇಷನ್ ಪಡೆದ ಅಭ್ಯರ್ಥಿಗಳಿಗೆ ಅರ್ಜಿ ತುಂಬಲು ಅವಧಿ ವಿಸ್ತರಣೆ ಮಾಡಲಾಗಿದೆ.
15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6 ರಿಂದ 8ನೇ ತರಗತಿ) ನೇಮಕಾತಿ-2022 ಗೆ ಸಂಬಂಧಿಸಿದಂತೆ, ಅರ್ಜಿ ಸಲ್ಲಿಸಲು ದಿನಾಂಕ 23-03-2022 ರಿಂದ 22-04-2022 ರವರೆಗೆ ಅವಕಾಶ ನೀಡಲಾಗಿತ್ತು.
ಅದರಂತೆ ಕೆಲವು ಅಭ್ಯರ್ಥಿಗಳು ಶಿಕ್ಷಣ ಇಲಾಖೆಯ ವೆಬ್‌ಸೈಟ್ www.schooleducation.kar.nic.in ನಲ್ಲಿ ಕೇವಲ ರಿಜಿಸ್ಟ್ರೇಷನ್ ಮಾತ್ರ ಮಾಡಿಕೊಂಡಿದ್ದು, ಅರ್ಜಿಯಲ್ಲಿ ವಿವರಗಳನ್ನು ಭರ್ತಿ ಮಾಡಿಲ್ಲ. ಅಂತಹ ಅಭ್ಯರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ, ಅರ್ಜಿ ತುಂಬಲು ಮತ್ತು ಅರ್ಜಿ ಶುಲ್ಕ ಪಾವತಿಸಲು ದಿನಾಂಕ ಏಪ್ರಿಲ್ 26, 2022 ರವರೆಗೆ ಕಾಲಾವಕಾಶ ನೀಡಲಾಗಿದೆ. ಆದರೆ ಈ ಕೆಳಗಿನ ಸೂಚನೆಗಳನ್ನು ಸಹ ಓದಿ, ಪಾಲಿಸಲು ಇಲಾಖೆ ತಿಳಿಸಿದೆ.

ಸೂಚನೆ
* ಪ್ರತಿ ಹೊಸ ಅರ್ಜಿಗೆ New User Name ಮತ್ತು Password ಅನ್ನು ಬಳಸಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು (Registration) ದಿನಾಂಕ ಏಪ್ರಿಲ್ 22, 2022 ರಾತ್ರಿ 12 ರವರೆಗೆ ಮಾತ್ರ ಅವಕಾಶವಿರುತ್ತದೆ.
* ದಿನಾಂಕ ಏಪ್ರಿಲ್ 22, 2022 ರಾತ್ರಿ 12 ಗಂಟೆಯ ನಂತರ ಹೊಸದಾಗಿ ರಿಜಿಸ್ಟ್ರೇಷನ್ ಪಡೆಯಲು ಮತ್ತು ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
* ದಿನಾಂಕ ಏಪ್ರಿಲ್ 22, 2022 ರಾತ್ರಿ 12 ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿರುವ (ರಿಜಿಸ್ಟ್ರೇಷನ್) ಅಭ್ಯರ್ಥಿಗಳಿಗೆ ಮಾತ್ರ ಆನ್‌ಲೈನ್ ಅರ್ಜಿಯಲ್ಲಿ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಿ, ಶುಲ್ಕವನ್ನು ಪಾವತಿಸಲು ಅವಕಾಶ ಇರುತ್ತದೆ.
* ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ ಏಪ್ರಿಲ್ 26, 2022 ಆಗಿರುತ್ತದೆ. ಈ ದಿನಾಂಕದ ನಂತರ ಯಾವುದೇ ಕಾರಣಕ್ಕೂ ಅರ್ಜಿ ಶುಲ್ಕ ಪಾವತಿಸಲು ಅವಕಾಶ ಇರುವುದಿಲ್ಲ.
* ಅಭ್ಯರ್ಥಿಯು ಆನ್‌ಲೈನ್ ಅರ್ಜಿಯಲ್ಲಿ ವಿವರಗಳನ್ನು ಭರ್ತಿ ಮಾಡಿ ಶುಲ್ಕ ಪಾವತಿಸಿದ ನಂತರ ಆನ್‌ಲೈನ್ ಅರ್ಜಿಯ ಮುದ್ರಿತ ಪ್ರತಿಯನ್ನು ಪಡೆದಿಟ್ಟುಕೊಳ್ಳುವುದು ಕಡ್ಡಾಯವಾಗಿರುತ್ತದೆ.
GPSRT 2022: ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ ಹಂತ ಹಂತವಾಗಿ ಈ ಕೆಳಗಿನಂತೆ ತಿಳಿಯಿರಿ
ವೆಬ್‌ಸೈಟ್ https://www.schooleducation.kar.nic.in/ ಗೆ ಭೇಟಿ ನೀಡಿ.
ಓಪನ್ ಆದ ಮುಖಪುಟದಲ್ಲಿ "ಆನ್ ಲೈನ್ ಅರ್ಜಿ- ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8 ನೇ ತರಗತಿ) ನೇಮಕಾತಿ-2022' ಎಂದಿರುವ ಲಿಂಕ್ ಕ್ಲಿಕ್ ಮಾಡಿ.
ಶಿಕ್ಷಣ ಇಲಾಖೆಯ ಮತ್ತೊಂದು ವೆಬ್ ಪೇಜ್ ತೆರೆಯುತ್ತದೆ.
"New User" ಎಂದಿರುವಲ್ಲಿ ಕ್ಲಿಕ್ ಮಾಡಿ.
ಹೆಸರು, ಮೊಬೈಲ್ ನಂಬರ್, ಇ-ಮೇಲ್ ವಿಳಾಸ, ಯೂಸರ್ ನೇಮ್, ಪಾಸ್‌ವರ್ಡ್ ನೀಡಿ, ಲಾಗಿನ್ ಆಗಿ.
ಅಪ್ಲಿಕೇಶನ್ ಹಾಕಲು ಬೇಕಾದ ಅಗತ್ಯ ಡಾಕ್ಯುಮೆಂಟ್‌ಗಳ ಲಿಸ್ಟ್
ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
ಆಧಾರ್ ಕಾರ್ಡ್
ಪದವಿ ಪ್ರಮಾಣ ಪತ್ರ
ಟಿಇಟಿ / ಸಿಟಿಇಟಿ ಸರ್ಟಿಫಿಕೇಟ್
ಬಿ.ಇಡಿ ಪಾಸ್ ಅಂಕಪಟ್ಟಿ / ಪಾಸ್ ಸರ್ಟಿಫಿಕೇಟ್
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಜನ್ಮ ದಿನಾಂಕ ಪ್ರಮಾಣ ಪತ್ರ (ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ)
ಮೀಸಲಾತಿ ಕೋರಿದ್ದಲ್ಲಿ ಸಂಬಂಧಿಸಿದ ಅಂಕಪಟ್ಟಿ.












Click it and Unblock the Notifications