18 ವರ್ಷದಿಂದ ಮಗನ ಶವ ಜೋಪಾನವಾಗಿಟ್ಟ ಹೆತ್ತಮ್ಮ

Georgia woman Tsiuri Kvaratskhelia Mummifies Son Joni Bakaradze's Body for 18 years
ಜಾರ್ಜಿಯಾ (ಯುರೋಪ್‌), ಸೆ. 12: ಹೀಗೂ ಉಂಟೆ ಎಂದು ಪರಮಾಶ್ಚರ್ಯಪಡುವ ರೀತಿಯಲ್ಲಿ ಹೆತ್ತ ಕರುಳೊಂದು 22 ವರ್ಷದ ತನ್ನ ಮಗನ ಶವವನ್ನು 18 ವರ್ಷಗಳ ಕಾಲ ಕಾಪಾಡಿದ್ದಾಳೆ.

ಆಕೆ ಹೀಗೇಕೆ ಮಾಡಿದರು ಅಂದರೆ ಒಂದು, ಹೆತ್ತಕರುಳಿಗೆ ತನ್ನ ಕುಡಿಯ ಸಾವನ್ನು ತಡೆಯಲಾಗಿಲ್ಲ ಮತ್ತೊಂದು, ಅದಾಗತಾನೆ ಹುಟ್ಟಿದ್ದ ಮೊಮ್ಮಗ ಮುಂದೆ ದೊಡ್ಡವನಾದ ಮೇಲೆ ತನ್ನ ಅಪ್ಪನ ಮುಖ ನೋಡುವಂತಾಗಲಿ ಎಂಬ ಮಹದಾಸೆಯಿಂದ ಹೆತ್ತಮ್ಮ ತನ್ನ ಕಂದನ ಶವವನ್ನು ಆರೈಕೆ ಮಾಡುತ್ತಾ ಬಂದಿದ್ದಳು.

ಈ ಮಧ್ಯೆ ಆಕೆ ತನ್ನ ಮಗನ ಶವವನ್ನು ಸಂರಕ್ಷಿಲು ಏನೆಲ್ಲಾ ಮಾಡಿದಳು ಎಂಬುದನ್ನು ತಿಳಿಯುವ ಮೊದಲು ಕೊನೆಯ ಅಧ್ಯಾಯಕ್ಕೆ ಬರುವುದಾದರೆ ಕೊನೆ ಕೊನೆಗೆ ಆ ಹೆತ್ತಮ್ಮನಿಗೂ ವಯಸ್ಸಾಗಿ ಮಗನ ಶವವನ್ನು ಸಂರಕ್ಷಿಲು ಸಾಧ್ಯವಾಗದೇ ಕಳೆದ ನಾಲ್ಕು ವರ್ಷಗಳಿಂದ ಆ ಶವ ಕೊಳೆಯುತ್ತಾ ಬಂದಿದೆ. ಮುಂದೆ ಓದಿ...

ಯುರೋಪ್‌ನ ಜಾರ್ಜಿಯಾದಲ್ಲಿ ಇಂತಹ ಮನಕಲಕುವ ಪ್ರಕರಣ ಬೆಳಕಿಗೆ ಬಂದಿದೆ. ಮಗನ ಮೃತದೇಹವನ್ನು ಬರೋಬ್ಬರಿ 18 ವರ್ಷಗಳಿಂದ ಕಾಪಾಡಿಕೊಂಡು ಬಂದ Tsiuri Kvaratskhelia ಎಂಬ ತಾಯಿಯ ಕಥೆಯಿದು. ತನ್ನ ಮಗ Joni Bakaradzeನ ಮೇಲಿದ್ದ ಪ್ರೀತಿ ಹೀಗೆಲ್ಲಾ ಮಾಡಿಸಿದೆ.

ಮಗನ ಶವವನ್ನು Mummify ಮಾಡಿ Mummy:
1995ರಲ್ಲಿ ಈಕೆಯ 22 ವರ್ಷದ ಮಗ ಮೃತಪಟ್ಟಿದ್ದ. ಮಗನ ಶವವನ್ನು ಅಂತ್ಯಸಂಸ್ಕಾರ ಮಾಡದ ತಾಯಿ ಅದನ್ನು ಸುರಕ್ಷಿತವಾಗಿಡಲು ಯೋಚಿಸಿದಳು. ನನ್ನ ಮಗ ಎಷ್ಟು ಒಳ್ಳೆಯವ, ಅವನು ಎಷ್ಟು ಗಟ್ಟಿಮುಟ್ಟಾಗಿದ್ದ. ಒಳ್ಳೆಯ ಗಂಡನೂ ಆಗಿದ್ದ... ಇದೆಲ್ಲ ಅವನ ಮಗನಿಗೂ ತಿಳಿಯಲಿ. ಮೊಮ್ಮಗ ತನ್ನ ತಂದೆಯ ಮುಖ ನೋಡಲಿ ಎಂಬ ಕಾರಣಕ್ಕಾಗಿ ಅದನ್ನು ರಕ್ಷಿಸಿಕೊಂಡು ಬಂದೆ ಎನ್ನುತ್ತಾಳೆ ಮುಗ್ಧ ತಾಯಿ.

ಮನೆಯ ನೆಲ ಅಂತಸ್ತಿನಲ್ಲಿ ಮರದ ಪೆಟ್ಟಿಗೆಯಲ್ಲಿ ಶವವನ್ನು ಇಟ್ಟು, ಆಲ್ಕೋಹಾಲ್‌ನಲ್ಲಿ ಮುಳುಗಿಸಿದ ಶೀಟ್‌ ನಿಂದ ಅದನ್ನು ಮುಚ್ಚುತ್ತಿದ್ದಳು. ಪ್ರತಿ ವರ್ಷ ಮಗನ ಹುಟ್ಟುಹಬ್ಬದಂದು ಶವಕ್ಕೆ ಹೊಸ ಬಟ್ಟೆಯನ್ನು ತೊಡಿಸುತ್ತಿತ್ತು ಮಾತೃಹೃದಯ. ಆದರೆ ಕಳೆದ 4 ವರ್ಷಗಳಿಂದ ಈಕೆಗೂ ಅನಾರೋಗ್ಯ ಕಾಡತೊಡಗಿದೆ. ಮಗನ ಶವದತ್ತ ಗಮನಹರಿಸಲು ಸಾಧ್ಯವಾಗದೇ ಅದು ಕೊಳೆಯಲಾರಂಭಿಸಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+