ವಿಶ್ವ ಜನಸಂಖ್ಯಾ ದಿನ: ಚಿತ್ರ ಸಹಿತ ಮಾಹಿತಿ
ಜನಸಂಖ್ಯೆ ಎಂಬುದನ್ನು ಮಾನವ ಸಂಪನ್ಮೂಲ ಎಂದು ಪರಿಗಣಿಸಿದರೆ ಅದು ದೇಶಕ್ಕೆ ಕೊಡಗೆಯೇ. ಆದರೆ ಅದು ಕೇವಲ ಸಂಖ್ಯೆಯಷ್ಟೇ ಆದರೆ ದೇಶಕ್ಕೆ ಅದಕ್ಕಿಂತ ದೊಡ್ಡ ಸಮಸ್ಯೆ ಬೇರೆ ಇರುವುದಿಲ್ಲ. ವಿಶ್ವ ಜನಸಂಖ್ಯಾ ದಿನದ ಹೊತ್ತಲ್ಲಿ ಜಗತ್ತಿನ ಜನಸಂಖ್ಯೆ ಕುರಿತು ಕೆಲವು ಅಗತ್ಯ ಮಾಹಿತಿ ಇಲ್ಲಿದೆ.
ಪ್ರತಿ ವರ್ಷ ಜುಲೈ 11 ಅನ್ನು ವಿಶ್ವ ಜನಸಂಖ್ಯಾ ದಿನವನ್ನಾಗಿ ಆಚರಿಸಲಾಗುತ್ತದೆ. ಜನಸಂಖ್ಯೆಯ ಕ್ಷಿಪ್ರ ಹೆಚ್ಚಳ ಮತ್ತು ಅದರಿಂದುಂಟಾಗುವ ಅಪಾಯದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ 1989ರಲ್ಲಿ ಮೊದಲ ಬಾರಿಗೆ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲು ನಿರ್ಧಾರ ತೆಗೆದುಕೊಳ್ಳಲಾಯ್ತು.
ಪ್ರತಿ ವರ್ಷ ಒಂದೊಂದು ಘೋಷವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿಯ ಜನಸಂಖ್ಯಾ ದಿನದ ಥೀಮ್ 'ಕುಟುಂಬ ಯೋಜನೆ ಮಾನವನ ಹಕ್ಕು' (Family planning is a human right)ಎಂಬುದು. ಜನಸಂಖ್ಯೆಗೆ ಸಂಬಂಧಿಸಿದ ಚಿತ್ರ ಸಹಿತ ಮಾಹಿತಿ ಇಲ್ಲಿದೆ.













Click it and Unblock the Notifications