ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Infographics; ಮಹಿಳಾ ಮತದಾರರಲ್ಲಿ ಉಡುಪಿ ಜಿಲ್ಲೆಗೆ ಮೊದಲ ಸ್ಥಾನ

|
Google Oneindia Kannada News

ಬೆಂಗಳೂರು, ಜನವರಿ 20; ರಾಜ್ಯ ಚುನಾವಣಾ ಆಯೋಗ 2023ರ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಮತದಾರರ ಪಟ್ಟಿಯ ಅಂತಿಮ ಪರಿಷ್ಕರಣೆ ಮಾಡಿದೆ. ಸಂಕ್ಷಿಪ್ತ ಪರಿಷ್ಕರಣೆ ನಂತರ ಪ್ರಕಟವಾದ ಅಂತಿಮ ಮತದಾರರ ಪಟ್ಟಿ ಪ್ರಕಾರ , ಉಡುಪಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಮಹಿಳಾ ಮತದಾರರನ್ನು ಹೊಂದಿದೆ.

ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಮಹಿಳಾ ಮತದಾರರಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಮಹಿಳಾ ಮತದಾರರಿದ್ದಾರೆ. ಈ ಕುರಿತು ರಾಜ್ಯ ಮುಖ್ಯ ಚುನಾವಣಾ ಆಯುಕ್ತರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

Infographics; ಕರ್ನಾಟಕದ ಮತದಾರರ ಪಟ್ಟಿ, ಅಂಕಿ-ಸಂಖ್ಯೆಗಳುInfographics; ಕರ್ನಾಟಕದ ಮತದಾರರ ಪಟ್ಟಿ, ಅಂಕಿ-ಸಂಖ್ಯೆಗಳು

ಮತದಾರರ ಪಟ್ಟಿ ಪರಿಷ್ಕರಣೆ ನಂತರ ರಾಜ್ಯದಲ್ಲಿನ ಒಟ್ಟು ಮತದಾರರು 5,05,48,553. ಇವರಲ್ಲಿ 2,54,49,725 ಪುರುಷ ಮತ್ತು 2,50,94,326 ಮಹಿಳಾ ಮತದಾರರಿದ್ದಾರೆ.

ಕರ್ನಾಟಕದ ಮತದಾರರ ಪಟ್ಟಿ; ಅತಿ ಹೆಚ್ಚು ದಿವ್ಯಾಂಗ ಮತದಾರರು ಇರುವ ಜಿಲ್ಲೆಗಳು ಕರ್ನಾಟಕದ ಮತದಾರರ ಪಟ್ಟಿ; ಅತಿ ಹೆಚ್ಚು ದಿವ್ಯಾಂಗ ಮತದಾರರು ಇರುವ ಜಿಲ್ಲೆಗಳು

Udupi District Has Highest Women Voters In Karnataka

ಉಡುಪಿ ಜಿಲ್ಲೆಯಲ್ಲಿನ ಒಟ್ಟು ಮತದಾರರು 10,16,245. ಇವರಲ್ಲಿ 4,90,060 ಪುರುಷರು ಮತ್ತು 5,26,173 ಮಹಿಳಾ ಮತದಾರರು ಮತ್ತು 12 ತೃತೀಯ ಲಿಂಗಿಗಳು.

ಮೈಸೂರು ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಅಂತಿಮ ಪಟ್ಟಿ ಪ್ರಕಟಮೈಸೂರು ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಅಂತಿಮ ಪಟ್ಟಿ ಪ್ರಕಟ

ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರದಲ್ಲಿ ಬೈಂದೂರಿನಲ್ಲಿ ಪುರುಷರು 1,12,126 ಪುರುಷರು ಮತ್ತು 1,17,421 ಮಹಿಳಾ ಮತದಾರರು ಇದ್ದಾರೆ. ಕುಂದಾಪುರದದಲ್ಲಿ 98,224 ಪುರುಷರು ಮತ್ತು 1,06,298 ಮಹಿಳಾ ಮತದಾರರು ಇದ್ದಾರೆ.

ಉಡುಪಿಯಲ್ಲಿ ಒಟ್ಟು ಮತದಾರರು 2,11,631. ಇವರಲ್ಲಿ 1,02,192 ಪುರುಷರು ಮತ್ತು 1,09,439 ಮಹಿಳಾ ಮತದಾರರು. ಕಾಪುವಿನಲ್ಲಿ 88,114 ಪುರುಷರು ಮತ್ತು 95,968 ಮಹಿಳಾ ಮತದಾರರು ಇದ್ದಾರೆ. ಕಾರ್ಕಳದಲ್ಲಿ 89,404 ಪುರುಷರು ಮತ್ತು 97,047 ಮಹಿಳಾ ಮತದಾರರಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಅವಧಿಯಲ್ಲಿ 13816 ಯುವ ಮತದಾರರು ನೋಂದಣಿಯಾಗಿದ್ದು, ಇದರಲ್ಲೂ ಸಹ ಯುವತಿಯರ ನೋಂದಣಿ ಸಂಖ್ಯೆ ಅಧಿಕವಾಗಿದೆ.

"ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು ಇರುವುದರಿಂದ ಜಿಲ್ಲೆಯು ರಾಜ್ಯಕ್ಕೆ ಮಾದರಿಯಾಗಿದೆ" ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದ್ದಾರೆ.

English summary
After the recent revision of voters by election commission Udupi district has highest number of women voters. Here are the infographics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X