ಚಿತ್ರ ವಿವರ: ಯಾವ ರಾಜ್ಯದಲ್ಲಿ ಎಷ್ಟು ಲೋಕಸಭಾ ಕ್ಷೇತ್ರಗಳು?
17 ನೇ ಲೋಕಸಭೆಗೆ 2019 ರ ಏಪ್ರಿಲ್ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಭಾರತದ ಒಟ್ಟು 30 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 543 ಜನಪ್ರತಿನಿಧಿಗಳನ್ನು ಲೋಕಸಭೆಗೆ ಆರಿಸಿ ಕಳಿಸಲಾಗುತ್ತದೆ.
ಚುನಾವಣೆಗೂ ಮುನ್ನ ಯಾವ ರಾಜ್ಯಗಲಲ್ಲಿ ಎಷ್ಟು ವಿಧಾನಸಭೆ ಕ್ಷೇತ್ರಗಳಿವೆ ಎಂಬ ಅತ್ಯಗತ್ಯ ಮಾಹಿತಿಯನ್ನು ಇನ್ಫೋಗ್ರಾಫಿಕ್ ಮೂಲಕ ಒನ್ ಇಂಡಿಯಾ ಕನ್ನಡ ನೀಡಿದೆ.
ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆ 545. ಇವರಲ್ಲಿ ಇಬ್ಬರು ಆಂಗ್ಲೋ ಇಂಡಿಯನ್ ಸದಸ್ಯರನ್ನು ಭಾರತದ ರಾಷ್ಟ್ರಪತಿಗಳೇ ನೇಮಿಸುತ್ತಾರೆ. ಇವರು ಜನರಿಂದ ಚುನಾಯಿತರಾಗುವುದಿಲ್ಲ. ಮಿಕ್ಕಂತೆ 543 ಸದಸ್ಯರು ಜನರಿಂದ ಚುನಾಯಿತರಾಗುತ್ತಾರೆ.
ಲೋಕಸಭೆಯಲ್ಲಿ ಯಾವುದೇ ಒಂದು ಪಕ್ಷಕ್ಕೆ ಬಹುಮತಕ್ಕೆ ಅಗತ್ಯವಿರುವ ಮ್ಯಾಜಿಕ್ ನಂಬರ್ 272.
ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಲೋಕಸಭಾ ಕ್ಷೇತ್ರ(80)ಗಳಿದ್ದರೆ, ನಾಗಾಲ್ಯಾಂಡ್, ಮಿಜೋರಾಂ ರಾಜ್ಯಗಳಲ್ಲಿ ಕೇವಲ ತಲಾ 1 ಲೋಕಸಭಾ ಕ್ಷೇತ್ರಗಳಿವೆ. ಮಿಕ್ಕಂತೆ ದೆಹಲಿಯನ್ನು ಹೊರತುಪಡಿಸಿ, ಉಳಿದೆಲ್ಲ ಕೇಂದ್ರಾಡಳಿತ ಪ್ರದೇಶಗಳಲ್ಲೂ ತಲಾ 1 ಲೋಕಸಭಾ ಕ್ಷೇತ್ರವಿದೆ.
ಅಷ್ಟಕ್ಕೂ ಯಾವ ರಾಜ್ಯದಲ್ಲಿ ಎಷ್ಟು ಲೋಕಸಭಾ ಕ್ಷೇತ್ರಗಳಿವೆ ಎಂಬ ಮಾಹಿತಿಯುಳ್ಳ ಪಟ್ಟಿ ಇಲ್ಲಿದೆ.













Click it and Unblock the Notifications